ಮಂಗಳೂರು: ಪಾರ್ಕ್ ಮಾಡಿದ್ದ ಕಾರಿನೊಳಗೆ ನಿದ್ದೆ ಮಾಡುತ್ತಿದ್ದಾಗ ಕಳ್ಳರು ಚಿನ್ನಾಭರಣ, ನಗದು ಇರುವ ಬ್ಯಾಗ್ ಮತ್ತು ಮೊಬೈಲ್ ಫೋನ್ ಕದ್ದುಕೊಂಡು ಹೋಗಿರುವ ಘಟನೆ ಪಣಂಬೂರು ಬೀಚ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ದೂರು ನೀಡಿರುವ ನಹೀಮ್ ಅಹಮ್ಮದ್ ಅಕ್ಟೋಬರ್ 26ಕ್ಕೆ ಬೆಂಗಳೂರಿನಿಂದ ಹೊರಟು ಹರಿಹರದಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡು ಉಡುಪಿ ಮೂಲಕ ಮಂಗಳೂರಿಗೆ ಬಂದಿರುವಾಗ ಕಳವಾಗಿದೆ ಎಂದು ತಿಳಿಸಿದ್ದಾರೆ.

ಪಣಂಬೂರು ಬೀಚ್ನ ಹೋಟೆಲೊಂದರ ಬಳಿ ಕಾರು ನಿಲ್ಲಿಸಿ ನಹೀಮ್ ನಿದ್ದೆ ಮಾಡುತ್ತಿದ್ದರು. ಪತ್ನಿ ಮತ್ತು ಮಕ್ಕಳು ಸಮುದ್ರದ ಅಲೆಗಳನ್ನು ನೋಡುತ್ತಿದ್ದರು. ಕಾರಿನ ಗಾಜುಗಳನ್ನು ಇಳಿಸಲಾಗಿತ್ತು. ಅಲ್ಲಿಂದ ಉಳ್ಳಾಲ ದರ್ಗಾಕ್ಕೆ ತೆರಳಿದ್ದಾರೆ. ಪ್ರಾರ್ಥನೆ ಸಲ್ಲಿಸಿ ವಾಪಸಾಗಿ ಮೊಬೈಲ್ ಫೋನ್ ಚಾರ್ಜರ್ ಹುಡುಕಿದಾಗ ಆಭರಣ ಇರಿಸಿದ್ದ ವ್ಯಾನಿಟಿ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಳವಾಗಿರುವುದು ತಿಳಿದುಬಂದಿದೆ. ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ ₹ 2.67 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಲಾಗಿದೆ.

ವ್ಯಕ್ತಿ ಕೊಲೆ: ಮಹಿಳೆ ಬಂಧನ

ವ್ಯಕ್ತಿಯೊಬ್ಬರ ಕುತ್ತಿಗೆಯನ್ನು ವೈರ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಮಹಿಳೆಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಮೂಲ್ಕಿ ತಾಲ್ಲೂಕು ಕೊಂಡಮೂಲೆಯ ಗಿಡಿಗೆರೆ ನಿವಾಸಿ ದೇವಕಿ (42) ಬಂಧಿತ ಮಹಿಳೆ. ಇವರು ಇದೇ ಗ್ರಾಮದ ಬಾಬು ಮೊಗೇರ ಅವರ ಪುತ್ರ ತಾರಾನಾಥ (39) ಅವರನ್ನು ಅಕ್ಟೋಬರ್ 27ರಂದು ಕೊಲೆ ಮಾಡಿದ್ದರು.

ಬಜಪೆ ಠಾಣಾ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದಲ್ಲಿ ತನಿಖೆಗೆ ತಂಡವನ್ನು ರಚಿಸಲಾಗಿತ್ತು. ತಾರಾನಾಥ ತನ್ನ ಕುಟುಂಬಕ್ಕೆ ನಿತ್ಯವೂ ತೊಂದರೆ ಮಾಡುತ್ತಿದ್ದ ಕಾರಣ ಕೊಲೆ ಮಾಡಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ದೇವಕಿ ಒಪ್ಪಿಕೊಂಡಿದ್ದಾರೆ.

ಮಾದಕ ಪದಾರ್ಥ ಮಾರಾಟ: ದಂಪತಿ ಬಂಧನ

ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ದಂಪತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕಿನ್ಯಾ ಗ್ರಾಮದ ರಹಮತ್ನಗರ ನಿವಾಸಿಗಳಾದ ಶೇಖ್ ನಸೀರ್ ಹುಸೇನ್ ಮತ್ತು ಅಫ್ಸಾ ಬಂಧಿತರು. ಮಾಹಿತಿ ಬಂದ ಕಾರಣ ಇವರು ವಾಸಿಸುತ್ತಿದ್ದ ಬಾಡಿಗೆ ಮನೆ ಮೇಲೆ ದಾಳಿ ಮಾಡಿದಾಗ 8 ಕೆಜಿ ಗಾಂಜಾ, ಕಾರು ಮತ್ತು 2 ಮೊಬೈಲ್ ಫೋನ್ಗಳು ಸಿಕ್ಕಿವೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೊತ್ತ ₹ 5,14,810 ಎಂದು ತಿಳಿಸಲಾಗಿದೆ.

ಬೈಕ್ ಸ್ಕಿಡ್: ಯುವಕ ಸಾವು

ಬೈಕ್ ಸ್ಕಿಡ್ ನೇತ್ರಾವತಿ ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ತಗಡಿಗೆ ಬಡಿದು ಯುವಕ ಸಾವಿಗೀಡಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಕೆಎ–19 ಎಚ್ಎಸ್ 1113 ಬೈಕ್ನಲ್ಲಿ ಶಾಕಿರ್ ಜೊತೆ ಬರುತ್ತಿದ್ದ ಸಲ್ಮಾನ್ ಫಾರಿಶ್ ಸಾವಿಗೀಡಾದವರು. ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಬೈಕ್ ಮಹಾಕಾಳಿಪಡ್ಪು ಬಳಿ ಸ್ಕಿಡ್ ಆಗಿದೆ. ಇಬ್ಬರೂ ರಸ್ತೆಗೆ ಬಿದ್ದಿದ್ದು ಸಲ್ಮಾನ್ ಸ್ಥಳದಲ್ಲೇ ಮೃತರಾಗಿದ್ದಾರೆ. ಗಂಭೀರ ಗಾಯಗೊಂಡಿರುವ ಶಾಕಿರ್ ಚಿಕಿತ್ಸೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.