ಉಪ್ಪಿನಂಗಡಿ: ‘ಗೃಹ ರಕ್ಷಕ ದಳ ಉಪ್ಪಿನಂಗಡಿ ಘಟಕದ ವಿಪತ್ತು ನಿರ್ವಹಣಾ ತಂಡದ ಕಾರ್ಯನಿರ್ವಹಣೆ ಸುಲಭವಾಗುವಂತೆ ರಬ್ಬರ್ ಬೋಟ್ ಹಸ್ತಾಂತರ ಕಾರ್ಯಕ್ರಮ ಭಾನುವಾರ ನಡೆಯಿತು.

ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ್ ಬೋಟ್ ಮತ್ತು ಇತರ ಸಲಕರಣೆಗಳನ್ನು ಹಸ್ತಾಂತರಿಸಿ ಮಾತನಾಡಿ ‘ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಜಿಲ್ಲೆಯ ವಿಪತ್ತು ನಿರ್ವಹಣಾ ಕಾರ್ಯಕ್ಕೆ ಅಗತ್ಯವಾದ ರಬ್ಬರ್ ಬೋಟ್, ರೈನ್ ಕೋಟ್, ಟಾರ್ಚ್ ಗಳನ್ನು ಬೇಡಿಕೆಯಂತೆ ಒದಗಿಸಿದ್ದು, ಅವರ ಸ್ಪಂದನದಿಂದಾಗಿ ಉಪ್ಪಿನಂಗಡಿ ಘಟಕಕ್ಕೂ ಒಂದು ಬೋಟ್, ಐದು ರೈನ್ ಕೋಟ್, ಒಂದು ಟಾರ್ಚ್ ಲಭಿಸಿದೆ’ ಎಂದರು.

ಈ ಬೋಟ್ 130 ಕೆ.ಜಿ. ತೂಕವಿದ್ದು, ಗರಿಷ್ಠ ಹತ್ತು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸ್ವಯಂ ಚಾಲಿತ ಯಂತ್ರ ಅಳವಡಿಸಲ್ಪಟ್ಟ ಈ ಬೋಟು ₹3.25 ಲಕ್ಷ ಬೆಲೆ ಇದೆ, ನೀರಿನ ವೇಗ ಎದುರಿಸುವ ಸಾಮರ್ಥ್ಯವನ್ನು ಅಧ್ಯಯನ ಮಾಡಿಕೊಂಡು ಎಚ್ಚರಿಕೆಯಿಂದ ಉಪಯೋಗಿಸಬೇಕು ಎಂದರು.

ಬೋಟ್ ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಸಹಸ್ರಲಿಂಗೆಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಲಿಮಾರ ರಘುನಾಥ ರೈ, ಸದಸ್ಯರಾದ ಬೆಳ್ಳಿಪ್ಪಾಡಿ ಪ್ರಕಾಶ್ ರೈ, ಡಾ. ರಾಜಾರಾಮ, ಗೃಹ ರಕ್ಷಕ ದಳದ ಉಪ್ಪಿನಂಗಡಿ ಘಟಕಾಧಿಕಾರಿ ದಿನೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.