ದಾವಣಗೆರೆ: ಗ್ರಾಹಕರಿಂದ ಬ್ಯಾಗ್‌ಗೆ ಹೆಚ್ಚುವರಿ ₹ 10 ಪಡೆದ ಇಲ್ಲಿನ ವಾಣಿಜ್ಯ ಸಂಸ್ಥೆಯೊಂದಕ್ಕೆ ₹ 7,000 ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.

ವಕೀಲ ಆರ್. ಬಸವರಾಜ್ ಅವರು ಮ್ಯಾಕ್ಸ್ ರಿಟೈಲ್ ಮಳಿಗೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ₹ 1,499 ಪಾವತಿಸಿ, ಪ್ಯಾಂಟ್ ಖರೀದಿಸಿದ್ದರು. ಆಗ ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್‌ಗೆ ಬ್ಯಾಗ್ ನೀಡಲು ಹೆಚ್ಚುವರಿಯಾಗಿ ₹ ಪಡೆದಿತ್ತು.

ಇದನ್ನು ಪ್ರಶ್ನಿಸಿ ಬಸವರಾಜ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ವಾಣಿಜ್ಯ ಸಂಸ್ಥೆ ವಿರುದ್ದ ₹ 50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ₹ 10,000 ಪಾವತಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು.

ಗ್ರಾಹಕರ ಆಯೋಗ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣ ಪಡೆಯುವಂತಿಲ್ಲ ಎಂಬ ಹಿಂದಿನ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ₹ 10 ಪಡೆದ ಸಂಸ್ಥೆಯ ಕ್ರಮ ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ಧತಿ ಎಂದು ಪರಿಗಣಿಸಿ ತೀರ್ಪು ನೀಡಿದೆ.

ವಾದ ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಾಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್, ಬಿ.ಯು. ಗೀತಾ ವಾಣಿಜ್ಯ ಸಂಸ್ಥೆಗೆ ₹ 7000 ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.