ನಗರದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಪ್ರಥಮ ರಾಜ್ಯ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ದೇಶದ ಸಮಾನತೆಯ ಸಂವಿಧಾನವನ್ನು ಕಿತ್ತು, ಮನು ಸಂಹಿತೆ ತರುವ ಹುನ್ನಾರ ನಡೆಯುತ್ತಿದೆ. ಅದಕ್ಕೆ ದೇಶದ ಜಾತ್ಯತೀತ ತತ್ವ ಅಡ್ಡಿಯಾಗಿದೆ. ಹೀಗಾಗಿ ದೇಶದ ಬಹುತ್ವ, ಜಾತ್ಯತೀತದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಭಾಷಾವಾರು ಪ್ರಾಂತ್ಯವನ್ನು ಆರ್ಎಸ್ಎಸ್ ಒಪ್ಪಿಕೊಂಡಿಲ್ಲ. ಈ ಕಾರಣ ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಒಬ್ಬನೇ ಒಬ್ಬ ಆರ್ಎಸ್ಎಸ್ ಕಾರ್ಯಕರ್ತ ಪಾಲ್ಗೊಂಡಿರಲಿಲ್ಲ. ಆದರೆ ಇಂದು ಇಂತಹ ಅಪಾಯಕಾರಿ ಸಿದ್ಧಾಂತ ದೇಶದ ಆಡಳಿತದಲ್ಲಿದೆ. ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಮೀಸಲಾತಿ ಕಸಿಯುವ ಹುನ್ನಾರ ನಡೆಸಿದೆ. ದೇಶದಲ್ಲಿ ಕಾರ್ಮಿಕರು, ದಲಿತರು ಒಂದಾದರೆ ಸಂವಿಧಾನ, ಅಂಬೇಡ್ಕರ್ ಚಿಂತನೆ ಉಳಿಯುತ್ತದೆ ಎಂದು ಹೇಳಿದರು.

‘ಕಾರ್ಪೊರೇಟ್ ಕಂಪನಿಗಳು ಕಾರ್ಮಿಕರು, ದಲಿತರ, ರೈತರ ಹಕ್ಕು ಕಸಿಯುತ್ತವೆ. ಈ ಕಾರಣ ಮೂವರು ಒಗ್ಗೂಡಿ ಚಳವಳಿ ರೂಪಿಸಬೇಕಿದೆ. ದೆಹಲಿಯಲ್ಲಿ ರೈತರು ಬೀದಿಯಲ್ಲಿ ಕುಳಿತು ಸರ್ಕಾರವನ್ನು ಮಣಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮದು ಸಂಘಟನೆಯಲ್ಲ, ಆಂದೋಲನ. ನಾವೆಲ್ಲರೂ ಒಂದಾಗಿ ಹಕ್ಕಿಗಾಗಿ ಹೋರಾಡಬೇಕಿದೆ’ ಎಂದು ಸಲಹೆ ನೀಡಿದರು.

‘ದಲಿತರು, ಕಾರ್ಮಿಕರು ಈ ಆಂದೋಲನ ಮೂಲಕ ಒಟ್ಟಿಗೆ ಸೇರಿರುವುದು ಆರೋಗ್ಯಕರ ಬೆಳವಣಿಗೆ. ದಲಿತರು ಒಳಗೊಳ್ಳದ ಯಾವ ಸಂಘರ್ಷಗಳೂ ಸಫಲವಾಗುವುದಿಲ್ಲ ಎಂಬುದು ಹಲವು ಚಳವಳಿಯಲ್ಲಿ ಸಾಬೀತಾಗಿದೆ. ಆ ಕಾರಣ ಎಲ್ಲರೂ ಒಗ್ಗೂಡಬೇಕಿದೆ’ ಎಂದು ಆಂದೋಲನದ ಸ್ವಾಗತ ಸಮಿತಿ ಅಧ್ಯಕ್ಷ ಸದಾಶಿವ ಮರ್ಜಿ ಹೇಳಿದರು.

‘ದೇಶದಲ್ಲಿ ವರ್ಗ ಮತ್ತು ಜಾತಿ ಎಂಬ ಎರಡು ಸಂಘರ್ಷ ಇದೆ. ವರ್ಗ ಮತ್ತು ಜಾತಿ ಸಂಘರ್ಷದ ಮಧ್ಯೆ ನಾವು ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳುವ ಐತಿಹಾಸಿಕ ಅಗತ್ಯ ಇದೆ. ಕಾರ್ಪೊರೇಟ್ ಕಂಪನಿ ಹಾಗೂ ಸರ್ಕಾರ ಹೇಗೆ ಒಂದಾದರೆ ದೇಶ ಹಾಗೂ ದೇಶದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಬಹುದು ಎಂಬುದಕ್ಕೆ ಇವತ್ತಿನ ಕೇಂದ್ರ ಸರ್ಕಾರದ ತೀರ್ಮಾನಗಳು ಉದಾಹರಣೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಂದೋಲನದ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶಕುಮಾರ ರಾಠೋಡ, ‘ಜಾತಿ ಸಂಘರ್ಷದ ಮೂಲಕ ಜಾತಿಯನ್ನು ಎತ್ತಿಹಿಡಿಯುತ್ತಿರುವ ಆರ್ಎಸ್ಎಸ್ ಹುನ್ನಾರದ ವಿರುದ್ಧ ಆಂದೋಲನ ರೂಪಿಸಲು ವೇದಿಕೆ ಆರಂಭಿಸಲಾಗಿದೆ. ದಲಿತರ ಪರವಾಗಿ ದನಿ ಎತ್ತುವ ಎಲ್ಲರನ್ನೂ ಸೇರಿಸುವ ಉದ್ದೇಶದಿಂದ ಈ ಆಂದೋಲನ ಆರಂಭಿಸಿದ್ದೇವೆ. ದಲಿತರು, ದಮನಿತರು, ಜಾತಿ–ವರ್ಗ ವಿನಾಶ, ಶೋಷಣೆ ವಿರುದ್ಧ ದನಿ ಎತ್ತುವವರೆಲ್ಲರೂ ಈ ಚಳವಳಿಯ ಜತೆ ಇರುತ್ತಾರೆ’ ಎಂದರು.

ಮುಖಂಡರಾದ ಎಚ್.ಜಿ. ಉಮೇಶ, ಮಂಜುಳಾ ಮರ್ಜಿ, ಆವರಗೆರೆ ಚಂದ್ರು, ರೇಣುಕಮ್ಮ, ಷಣ್ಮುಖಸ್ವಾಮಿ, ವೀಣಾ ನಾಯಕ್, ಎಚ್.ಎಂ. ಸಂತೋಷ, ಹೆಗ್ಗೆರೆ ರಂಗಪ್ಪ, ಮಲ್ಲೇಶ್, ಸುನೀಲ್, ಹಾಲೇಶ್, ಕೆ.ಎಸ್. ಜನಾರ್ದನ ಸೇರಿದಂತೆ ಆಂದೋಲನ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

‘ಕತ್ತು ಕೊಯ್ಯುವ ಕತ್ತಿಯ ಅಪ್ಪಿಕೊಂಡ ಜನರು’

‘ಸನಾತನ ಧರ್ಮದ ಈ ದೇಶದಲ್ಲಿ ಪುರಾತನ ಧರ್ಮವೊಂದು ಇದೆ. ಅದರ ಪ್ರಕಾರ ಈ ನೆಲದ ಎಲ್ಲರಿಗೂ ಸಮಾನತೆ ಸಿಗಬೇಕು. ಎಲ್ಲರಿಗೂ ಸಮಾನತೆ ಬೇಕೆಂಬ ಬೀಜ ಬಿತ್ತಿದವರು ಬುದ್ಧ. ಆದರೆ ಬುದ್ಧನನ್ನು ಬಿಟ್ಟು ಸನಾತನತೆ ಮೆರೆಸುತ್ತಿರುವುದು ವಿಪರ್ಯಾಸ. ಸನಾತನತೆ ಎಂಬ ಕತ್ತು ಕೊಯ್ಯುವ ಕತ್ತಿಯನ್ನೇ ನಾವು ಅಪ್ಪಿಕೊಂಡಿರುವುದು ದುರಂತ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಬೇಸರಿಸಿದರು. ‘ದಲಿತರ ಹಕ್ಕಿಗೆ ತಡೆಗೋಡೆ ಎಂದರೆ ಸನಾತನತೆ. ಈಗ ಅದು ಮತ್ತೆ ಮತ್ತೆ ಚರ್ಚೆಯಾಗುತ್ತಿದೆ. ಸನಾತನ ಧರ್ಮದ ಪ್ರಕಾರ ಈ ದೇಶ ಕಟ್ಟುವುದಾದರೆ ಮೋದಿ ಕೂಡ ಪ್ರಧಾನಿಯಾಗಲಾರರು. ಸನಾತನ ಧರ್ಮದ ಬಗ್ಗೆ ಹೇಳುವಾಗ ದಲಿತರ ಸ್ಥಾನ ಎಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ದಲಿತ ಸಂಸದರು ಸಂವಿಧಾನ ಮೆರೆಸುವ ಬದಲು ಸನಾತನ ಸಂಸ್ಕೃತಿ ಹೇರುವ ಆರ್ಎಸ್ಎಸ್ನ ಚಡ್ಡಿ ಮೆರೆಸುತ್ತಿರುವುದು ಈ ದೇಶದ ದುರಂತ’ ಎಂದು ವಿಷಾದಿಸಿದರು. ‘ಈ ದೇಶದಲ್ಲಿ ವರ್ಗ ಮತ್ತು ಜಾತಿ ಸಂಘರ್ಷ ಅನಾದಿ ಕಾಲದಿಂದಲೂ ಇದೆ. ಈ ದೇಶಕ್ಕೆ ಅಕ್ರಮಣದ ರೂಪದಲ್ಲಿ ಪ್ರವೇಶ ಮಾಡಿದ ಆರ್ಯರು ಅಂದಿನಿಂದಲೂ ದಲಿತರ ಮೇಲೆ ದಬ್ಬಾಳಿಕೆ ಮಾಡುತ್ತಾ ಅವರ ಹಕ್ಕು ಕಸಿದಿದ್ದಾರೆ. ದಲಿತರ ಹಕ್ಕಿಗಾಗಿ ಎಲ್ಲ ಕಾಲದಲ್ಲೂ ಹೋರಾಟ ನಡೆದಿದೆ. ದಲಿತರು ಮತ್ತು ಕಮ್ಯುನಿಷ್ಟರು ಸೇರಿ ಇಂತಹ ಚಳವಳಿ ರೂಪಿಸಿರುವುದು ಇಂದಿನ ಅಗತ್ಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.