ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೆಸರಿನಲ್ಲಿ ಅಪರಿಚಿತರು ನಕಲಿ ಫೇಸ್‍ಬುಕ್ ಖಾತೆಯನ್ನು ಸೃಷ್ಟಿಸಿದ್ದಾರೆ.

‘ಎಸ್‍ಎಸ್‍ಎಂ ದಾವಣಗೆರೆ’ ಎನ್ನುವ ಹೆಸರಲ್ಲಿ ಫೇಸ್‍ಬುಕ್ ಖಾತೆ ತೆರೆಯಲಾಗಿದೆ. ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದವರಿಗೆ ‘ಹಾಯ್, ಗುಡ್‍ಮಾರ್ನಿಂಗ್, ಹೇಗಿದ್ದೀರಾ, ಎಲ್ಲಿದ್ದೀರಾ’ ಎಂದೆಲ್ಲ ಸಂದೇಶಗಳನ್ನು ಕಳುಹಿಸಲಾಗಿದೆ. ‘ನನಗೊಂದು ಸಣ್ಣ ತೊಂದರೆ ಆಗಿದೆ. ನಿಮ್ಮ ಬಳಿ ಫೋನ್ ಪೇ ಇದೆಯೇ, ನನಗೆ ತುರ್ತಾಗಿ ಹಣ ಬೇಕಿದೆ. ತಕ್ಷಣ ಕಳಿಸಿ. 2 ತಾಸಿನಲ್ಲೇ ವಾಪಸ್ ಮಾಡ್ತೇನೆ’ ಎಂದು ಮೆಸೇಜ್ ಮಾಡಿದ್ದಾರೆ. ‘ನನ್ನ ಸ್ನೇಹಿತನಿಗೆ ವೈದ್ಯಕೀಯ ತುರ್ತಿನಿಂದಾಗಿ ಹಣದ ಅಗತ್ಯವಿದೆ’ ಎಂದೂ ಮೆಸೇಜ್‌ಗಳು ಬಂದಿವೆ.

ಸ್ಪಂದನೆ ನೀಡದಂತೆ ಮನವಿ: ‘ನನ್ನ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆಯಿಂದ ಕೆಲವರು ಹಣಕ್ಕೆ ಬೇಡಿಕೆ ಇಡುತ್ತಿದ್ದು, ಸಾರ್ವಜನಿಕರು ಇಂತಹ ನಕಲಿ ಖಾತೆಗೆ ಸ್ಪಂದನೆ ನೀಡಬಾರದು’ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ. ಇಂತಹ ನಕಲಿ ಖಾತೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ. ‘ನನ್ನ ಹೆಸರಿನಲ್ಲಿ ಆಗಿರುವ ಫೇಸ್ ಬುಕ್ ನಕಲಿ ಖಾತೆಯ ಬಗ್ಗೆ ತನಿಖೆ ನಡೆಸುವಂತೆ ದಾವಣಗೆರೆಯ ಸಿಎಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.