ಹೊನ್ನಾಳಿ: ‘ಗ್ರಾಮಾಡಳಿತ ನಡೆಸುವವರು ಇ-ಸ್ವತ್ತು, ಶೌಚಾಲಯ, ಚರಂಡಿ, ಬೀದಿ ದೀಪ, ಗ್ರಾಮ ಸ್ವಚ್ಛತೆಯಂತಹ ಸಣ್ಣಪುಟ್ಟ ಕೆಲಸಗಳಿಗೂ ಶಾಸಕರು, ಸಂಸದರತ್ತ ಬೊಟ್ಟು ಮಾಡಬಾರದು. ಇವುಗಳನ್ನು ಪಿಡಿಒ, ಗ್ರಾ.ಪಂ. ಕಾರ್ಯದರ್ಶಿಗಳು ತಮ್ಮ ಹಂತದಲ್ಲಿಯೇ ಬಗೆಹರಿಸಬೇಕು. ಆಗ ಮಾತ್ರ ಗ್ರಾ.ಪಂ. ಆಡಳಿತ ಸಮರ್ಪಕವಾಗಿದೆ ಎಂದರ್ಥ’ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ತಾಲ್ಲೂಕಿನ ಹರಳಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ, ದೊಡ್ಡ ಯೋಜನೆಗಳಿಗೆ ಶಾಸಕರು, ಸಂಸದರಿಗೆ ಬೇಡಿಕೆ ಸಲ್ಲಿಸಿದರೆ ಅದಕ್ಕೆ ಒಂದು ಅರ್ಥವಿರುತ್ತದೆ ಎಂದರು.

‘ಹರಳಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದಲ್ಲಿ ಅಂಚೆ ಕಚೇರಿ, ಗ್ರಂಥಾಲಯ, ಗ್ರಾಮ ನಂಬರ್ ಒನ್ ಸೇವೆಯಂತಹ ಅಗತ್ಯ ಸೌಲಭ್ಯಗಳು ಸಿಗುವಂತೆ ಯೋಜನೆ ರೂಪಿಸಿ, ಅದರಂತೆ ನಿರ್ಮಾಣ ಮಾಡಿದ್ದು ಶ್ಲಾಘನೀಯ. ದಾವಣಗೆರೆ ಜಿಲ್ಲೆಯಲ್ಲಿಯೇ ಇದೊಂದು ಮಾದರಿ ಗ್ರಾ.ಪಂ.ಕಟ್ಟಡ’ ಎಂದು ಸಂಸದೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಜಿಲ್ಲೆಯ ಸಾರಥಿ ಬಳಿ ಐಟಿ–ಬಿಟಿ ಕಂಪನೆ ಸ್ಥಾಪನೆಗೆ ಸಂಬಂಧಪಟ್ಟ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸೂರಗೊಂಡನಕೊಪ್ಪದಲ್ಲಿ ರೈಲು ನಿಲ್ದಾಣ ನಿರ್ಮಾಣ ಕುರಿತು ಈಗಾಗಲೇ ಸರ್ವೇ ಸಮೀಕ್ಷೆ ನಡೆದಿದೆ’ ಎಂದು ತಿಳಿಸಿದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಸಂಸದರು ಗಾರ್ಮೆಂಟ್ ಕಾರ್ಖಾನೆ ಮಂಜೂರು ಮಾಡಿಸಿದರೆ ಅದರ ನಿರ್ಮಾಣಕ್ಕೆ 10 ಎಕರೆ ಜಮೀನು ಮಂಜೂರು ಮಾಡುವುದಾಗಿ ತಿಳಿಸಿದರು. ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಕೊಡುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕುಮಾರ್ ಮಾತನಾಡಿ, ಗ್ರಾ.ಪಂ.ಗಳು ಸ್ವಾವಲಂಬಿಗಳಾಗಬೇಕು. ಆದರೆ ಇತ್ತೀಚೆಗೆ ಗ್ರಾ.ಪಂ.ಗಳಿಗೆ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು. ನನ್ನ ಅನುದಾನದಡಿ ಹರಳಹಳ್ಳಿ ಗ್ರಾ.ಪಂ. ಕಟ್ಟಡಕ್ಕೆ ಶೀಟ್ ಹಾಕಿಸಿಕೊಡುತ್ತೇನೆ’ ಎಂದು ವಾಗ್ದಾನ ನೀಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗಳು ಜನರಿಗೆ ಮೂಲ ಸೌಲಭ್ಯ, ಸೇವೆಗಳನ್ನು ತುರ್ತಾಗಿ ಒದಗಿಸಬೇಕು. ಆಗ ದೇಶದ ಬಹುಪಾಲು ಸಮಸ್ಯೆಗೆ ಸ್ಥಳೀಯ ಆಡಳಿತದಿಂದಲೇ ಪರಿಹಾರ ಸಿಕ್ಕಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ತಾ.ಪಂ. ಮತ್ತು ಜಿ.ಪಂ.ಗೆ ಅಧಿಕಾರ ಇಲ್ಲದಿರುವುದರಿಂದ ಗ್ರಾ.ಪಂ.ಗಳಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಆದಷ್ಟುಬೇಗ ತಾ.ಪಂ., ಜಿ.ಪಂ.ಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರದ ಗಮನ ಸೆಳೆಯಬೇಕಾಗಿದೆ’ ಎಂದು ಜಿ.ಪಂ. ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್ ತಿಳಿಸಿದರು.

‘ನರೇಗಾ ಹಾಗೂ ಗ್ರಾ.ಪಂ. ಅನುದಾನದಡಿ ₹60 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಾ.ಪಂ. ಕಟ್ಟಡ ನಿರ್ಮಿಸಲಾಗಿದೆ. 380 ನಿವೇಶನಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಯುತ್ತಿದೆ. ರಸ್ತೆ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದೆ’ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಬಿ. ಬೆನಕಪ್ಪ ಹೇಳಿದರು.

ಪಿಡಿಒ ಎಂ.ವಿ. ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಆಶಾ ಬಸವರಾಜ್, ಉಪಾಧ್ಯಕ್ಷೆ ಗಾಯಿತ್ರಿ ಸುರೇಶ್, ಸದಸ್ಯರಾದ ನಿರ್ಮಲಾ ವಿರೂಪಾಕ್ಷಪ್ಪ, ರಾಧಾ ನವೀನ್ ಕುಮಾರ್, ಎಚ್.ಬಿ. ವೀರೇಶ್, ಒ.ಎಚ್. ವೆಂಕಟೇಶ್, ಕೆ.ಎನ್. ನಿಂಗಪ್ಪ, ಡಿ. ಹಾಲೇಶಪ್ಪ, ಸುನೀತ ರಾಜಪ್ಪ, ಎಚ್.ಡಿ. ವಿಜೇಂದ್ರಪ್ಪ, ಸಣ್ಣಕ್ಕಿ ಬಸವನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.