ಚನ್ನಗಿರಿ: ಅಡಿಕೆ ನಾಡು ಚನ್ನಗಿರಿ ಸಮೀಪದ ಅಜ್ಜಿಹಳ್ಳಿ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ ಡಿಪೊ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಹೊಸ ವರ್ಷಾರಂಭಕ್ಕೆ ಡಿಪೊ ಉದ್ಘಾಟನೆಗೆ ಸಾರಿಗೆ ಇಲಾಖೆ ಸಕಲ ಸಿದ್ಧತೆ ನಡೆಸಿದೆ.

ನೂತನ ಡಿಪೊ ಲೋಕಾರ್ಪಣೆಯಾದ ಕೂಡಲೇ ಹೆಚ್ಚುವರಿ ಬಸ್ಗಳು ಲಭ್ಯವಾಗುವುದರಿಂದ ಸಾರಿಗೆ ಸಂಪರ್ಕ ಇಲ್ಲದ ಗ್ರಾಮಗಳಿಗೆ ಬಸ್ಗಳನ್ನು ಓಡಿಸಲು ಸಾಧ್ಯವಾಗಲಿದೆ. ಹರಿಹರ, ದಾವಣಗೆರೆ ಡಿಪೊ ಮೇಲೆ ಒತ್ತಡ ಇರುವುದರಿಂದ ಇಲ್ಲಿ 40 ಬಸ್ ಮಾರ್ಗಗಳನ್ನು ನೂತನ ಡಿಪೊದಿಂದ ನಿರ್ವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.

ಡಿಪೊದಲ್ಲಿ ಬಸ್ಗಳಿಗೆ ಇಂಧನ, ಹೊಗೆ ತಪಾಸಣೆ ಕೇಂದ್ರ, ದುರಸ್ತಿಗಾಗಿ ವರ್ಕ್ ಶಾಪ್, ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳ ನಿರ್ಮಾಣ ಪೂರ್ಣಗೊಂಡಿದೆ. ಸಿಬ್ಬಂದಿ, ಚಾಲಕ ಮತ್ತು ನಿರ್ವಾಹಕ ಸೇರಿ 150 ಸಿಬ್ಬಂದಿಯನ್ನು ನಿಯೋಜಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯೂ ನಡೆದಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ದೊರೆತಿದ್ದಾಗಿ ತಿಳಿದುಬಂದಿದೆ.

ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲಾ ಕೇಂದ್ರಗಳಿಗೆ ಮಧ್ಯ ಭಾಗದಲ್ಲಿರುವ ಚನ್ನಗಿರಿ ಪಟ್ಟಣದಿಂದ ಖಾಸಗಿ ಬಸ್ಗಳ ಕಾರ್ಯಾಭಾರ ಇದುವರೆಗೂ ಇತ್ತು. ಬೆಂಗಳೂರು, ಮೈಸೂರು, ಹಾಸನ, ಮಡಿಕೇರಿ, ಶೃಂಗೇರಿ, ಹೊರನಾಡು, ಧರ್ಮಸ್ಥಳ ಮತ್ತಿತರ ದೂರದ ಊರುಗಳಿಗೆ ಇಲ್ಲಿಂದ ನೇರ ಬಸ್ ಇಲ್ಲದಿದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿತ್ತು. ಬಸ್ಗಳಿಗೆ ತಾಲ್ಲೂಕಿನ ಜನರಿಂದ ಬೇಡಿಕೆ ಹೆಚ್ಚಿದ್ದರಿಂದ ಎರಡು ವರ್ಷಗಳ ಹಿಂದೆ ಅಜ್ಜಿಹಳ್ಳಿ ಗ್ರಾಮದ ಬಳಿ 4 ಎಕರೆ ಜಮೀನು ಗುರುತಿಸಿ, ಡಿಪೊ ನಿರ್ಮಾಣಕ್ಕೆ ₹ 8 ಕೋಟಿ ಅನುದಾನ ದೊರೆತಿತ್ತು.

ಪ್ರತ್ಯೇಕ ಬಸ್ ನಿಲ್ದಾಣಕ್ಕೆ ಬೇಡಿಕೆ

ಕೆಎಸ್ಆರ್ಟಿಸಿ ಬಸ್ ಡಿಪೊ ಸಿದ್ಧವಾಗಿದೆ. ಆದರೆ ನಗರದಲ್ಲಿ ಬಸ್ ನಿಲ್ದಾಣದ ಕೊರತೆ ಸಮಸ್ಯೆ ಇದೆ. ದಾವಣಗೆರೆ ಚಿಕ್ಕಮಗಳೂರು ಕಡೆಗೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳಿಗೆ ಮಾತ್ರ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರವೇಶವಿದೆ. ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗೆ ಹೋಗುವ ಸರ್ಕಾರಿ ಬಸ್ಗಳು ಖಾಸಗಿ ಬಸ್ ನಿಲ್ದಾಣ ಪ್ರವೇಶಕ್ಕೆ ಖಾಸಗಿ ಬಸ್ವರು ಅವಕಾಶ ನೀಡುತ್ತಿಲ್ಲ. ‘ನಾವು ಪುರಸಭೆಗೆ ಪ್ರವೇಶ ಶುಲ್ಕ ಪಾವತಿಸುತ್ತಿದ್ದು ಶುಲ್ಕ ಪಾವತಿಸದ ಸರ್ಕಾರಿ ಬಸ್ಗಳಿಗೇಕೆ ಪ್ರವೇಶ ನೀಡಬೇಕು?’ ಎಂಬ ಪ್ರಶ್ನೆಯನ್ನು ಖಾಸಗಿ ಬಸ್ನವರು ಇರಿಸುತ್ತಾರೆ. ಈ ವಿಚಾರವಾಗಿ ಪ್ರತಿದಿನ ಸರ್ಕಾರಿ ಹಾಗೂ ಖಾಸಗಿ ಬಸ್ಗಳ ಚಾಲಕರು ನಿರ್ವಾಹಕರ ನಡುವೆ ಮಾತಿನ ಚಕಮಕಿ ಸಾಮಾನ್ಯವಾಗಿದೆ. ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗೆ ಹೋಗುವ ಬಸ್ಗಳು ಹೆದ್ದಾರಿಯ ಬದಿಯಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಹೆದ್ದಾರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ಈ ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಜೀವ ಬಿಗಿ ಹಿಡಿದುಕೊಂಡು ಸರ್ಕಾರಿ ಬಸ್ಗಳನ್ನು ಹತ್ತಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಗಳ ನಿಲುಗಡೆಗೆ ಪ್ರತ್ಯೇಕ ನಿಲ್ದಾಣದ ಅವಶ್ಯಕತೆ ತುಂಬಾ ಇದ್ದು ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಪ್ರಯಾಣಿಕರಾದ ಕೋಮಲಾ ಹಾಗೂ ಬಸವರಾಜ್ ಆಗ್ರಹಿಸಿದರು.

ಡಿಸೇಲ್ ಬಂಕ್ ಹಾಗೂ ಡಿಪೊದ ಒಂದು ಭಾಗದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸಿ ಹೊಸವರ್ಷದ ವೇಳೆಗೆ ಡಿಪೊ ಲೋಕಾರ್ಪಣೆಯಾಗಲಿದೆ.
–ಸಿದ್ದೇಶ್ವರ ಹೆಬ್ಬಾಳ್, ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ

ಕೆಎಸ್ಆರ್ಟಿಸಿ ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಜಮೀನು ಸಿಕ್ಕ ಕೂಡಲೇ ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
–ಬಸವರಾಜು ವಿ. ಶಿವಗಂಗಾ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.