ಜಿಲ್ಲೆಗೆ ಯಾವುದೇ ಯೋಜನೆಗಳನ್ನು ಘೋಷಿಸದಿರುವುದು ಬೇಸರ ತಂದಿದೆ. ಜವಳಿ ಪಾರ್ಕ್ ಕೈಗಾರಿಕಾ ಕಾರಿಡಾರ್ ಸೇರಿದಂತೆ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯಾವುದೇ ಘೋಷಣೆಯಾಗಿಲ್ಲ. ‘ಮ್ಯಾಂಚೆಸ್ಟರ್ ಆಫ್ ಕರ್ನಾಟಕ’ ಖ್ಯಾತಿಗೆ ಪೂರಕ ಯೋಜನೆ ಇಲ್ಲ. 40 ವರ್ಷಗಳ ಹಿಂದೆ ವಿಮಾನ ನಿಲ್ದಾಣ ಇತ್ತು. ಚಿಕ್ಕ ವಿಮಾನಗಳು ಇಲ್ಲಿ ಇಳಿಯುತ್ತಿದ್ದವು. ಅದಕ್ಕೆ ಉತ್ತೇಜನ ಸಿಗಲಿಲ್ಲ. ಆ ಭೂಮಿಯೂ ಹೋಯಿತು
ಅಥಣಿ ಎಸ್. ವೀರಣ್ಣ, ಉದ್ಯಮಿ
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೇಂದ್ರೀಕರಿಸಿದ ಕಾರಣ ಜಿಲ್ಲೆಗೆ ಯಾವುದೇ ಯೋಜನೆಯ ಪ್ರಸ್ತಾಪವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿರುವುದರಿಂದ ಅನುದಾನ ಹಂಚಿಕೆಯಾಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡರೆ ಒಳಿತು. ಎಲ್ಲವನ್ನೂ ರಾಜ್ಯ ಸರ್ಕಾರದ ಅನುದಾನ ಕಡಿಮೆ ಇರುವ ಕಾರಣ ಸಮಗ್ರ ಅಭಿವೃದ್ಧಿ ಅಸಾಧ್ಯ. ಕೇಂದ್ರದ ಯೋಜನೆಗಳು ಬಂದರೆ ಹೆಚ್ಚಿನ ಅಭಿವೃದ್ಧಿ ಸಾಧ್ಯ.
ಪ್ರೊ. ವೈ. ವೃಷಭೇಂದ್ರಪ್ಪ, ನಿರ್ದೇಶಕ, ಬಿಐಇಟಿ
ಜಿಲ್ಲೆಯ ಅಭಿವೃದ್ಧಿ ಯೀಜನೆಗಳಿಗೆ ಯಾವುದೇ ಉತ್ತೇಜನ ನೀಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಪ್ರಸ್ತಾಪವನ್ನು ಬಜೆಟ್ ಒಳಗೊಂಡಿಲ್ಲ. ಜಿಲ್ಲೆಯ ದೃಷ್ಟಿಯಿಂದ ನಿರಾಶದಾಯಕ ಬಜೆಟ್ ಇದು.