ಈ ಮೊದಲು ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನೇ ಅಂದೇ ತಾಲ್ಲೂಕು ಕೇಂದ್ರ ಹರಿಹರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಈಗ ಅದು ತಪ್ಪಿದೆ. ಇದಲ್ಲದೇ ಇನ್ನೊಂದು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೋಮಾರನಹಳ್ಳಿ ಹೊರವಲಯದಲ್ಲಿ ನಿವೇಶನ ಮಂಜೂರಾಗಿದೆ. ಯೋಜನೆ ಕಾರ್ಯಗತವಾದರೆ ಪಟ್ಟಣದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಪುರಸಭೆಯ ಪರಿಸರ ಎಂಜಿನಿಯರ್ ಉಮೇಶ್ ತಿಳಿಸಿದರು.