ವಿದ್ಯುತ್ ಸಂಪರ್ಕದ ಸಮಸ್ಯೆಯಿಂದಾಗಿ ನೀರು ಏರಿಸಲು ಸಾಧ್ಯವಾಗಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಸೂಚಿಸಲಾಗಿದೆ
ಡಾ.ಎಂ.ವಿ.ವೆಂಕಟೇಶ್ ಜಿಲ್ಲಾಧಿಕಾರಿ
ತೇಜಸ್ವಿ ಪಟೇಲ್
ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯ ಒದಗಿಸುವುದು ಮುಖ್ಯ. ಜಿಲ್ಲಾಡಳಿತ ಭವನ ಮಾತ್ರವಲ್ಲದೇ ಚನ್ನಗಿರಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲೂ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಲಿ
ತೇಜಸ್ವಿ ಪಟೇಲ್ ರೈತ ಮುಖಂಡ
ಜಬೀನಾ ಖಾನಂ
ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಾರೆ. ಮುಖ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಶೌಚಾಲಯದ ಸಮಸ್ಯೆ ಎದುರಾಗಬಾರದು
ಜಬೀನಾ ಖಾನಂ ಸಾಮಾಜಿಕ ಕಾರ್ಯಕರ್ತೆ
ನೀರಿಲ್ಲದೇ ಒಣಗಿದ ಗಿಡ– ಮರ
ಜಿಲ್ಲಾಡಳಿತ ಭವನದ ಮುಂಭಾಗದಲ್ಲಿನ ವಿವಿಧ ಪ್ರಬೇಧಗಳ ಗಿಡ– ಮರಗಳು ನೀರಿಲ್ಲದೇ ಬಿಸಿಲಿಗೆ ಒಣಗುತ್ತಿವೆ. ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ –ಮರಗಳು ಒಣಗುತ್ತಿದ್ದು ಅದರಲ್ಲೂ ಸಾಕಷ್ಟು ಅಲಂಕಾರಿಕ ಗಿಡಗಳು ಸಾಯುವ ಸ್ಥಿತಿ ತಲುಪಿವೆ. ‘ಕುಡಿಯುವುದಕ್ಕೇ ನೀರು ಸಿಗದಂತಹ ಸ್ಥಿತಿಯಲ್ಲಿ ಗಿಡ–ಮರಗಳಿಗೆ ಎಲ್ಲಿಂದ ನೀರು ತರುವುದು. ಮಳೆ ಬರುವವರೆಗೆ ಗಿಡಗಳ ಸ್ಥಿತಿ ಹೀಗೆಯೇ. ಬೇರೆ ಏನೂ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ’ ಎಂದು ಜಿಲ್ಲಾಡಳಿತ ಭವನದಲ್ಲಿನ ಸಿಬ್ಬಂದಿಯೊಬ್ಬರು ಅಸಹಾಯಕತೆ ತೋಡಿಕೊಂಡರು.