ದಾವಣಗೆರೆ: ಮಂತ್ರಘೋಷಗಳು ಕೇಳಲಿಲ್ಲ. ಹಾರ ಬದಲಾಯಿಸಲೂ ಇಲ್ಲ. ಯಾವ ಸಂಪ್ರದಾಯವೂ ಇಲ್ಲದೆ ಮಾದರಿ ವಿವಾಹವೊಂದು ಬುಧವಾರ ರಾತ್ರಿ ವಾಲ್ಮೀಕಿ ಸಭಾಂಗಣದಲ್ಲಿ ನಡೆಯಿತು.

ಅಖಿಲ ಭಾರತ ಯುವಜನ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಮೈಸೂರಿನ ಅನಿಲ್ ಕುಮಾರ್ ಮತ್ತು ಅಖಿಲ ಭಾರತ ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ, ಆಶಾ ಸಂಘಟನೆಯಲ್ಲೂ ಇರುವ ದಾವಣಗೆರೆ ಹೊಂಡದ ಸರ್ಕಲ್ನ ಭಾರತಿ ಅವರ ಈ ರೀತಿಯ ಮದುವೆಯಾದವರು.

ಎಲ್ಲ ಸಂಪ್ರದಾಯಗಳನ್ನು ಮೀರಿ ಪ್ರಜಾಪ್ರಭುತ್ವದ ಆಶಯದಂತೆ ಮದುವೆಯಾಗುವುದೇ ಪ್ರಜಾಪ್ರಭುತ್ವದ ದೇಶದ ಲಕ್ಷಣ ಆಗಬೇಕು. ಅದರಂತೆ ಪರಸ್ಪರ ಗೌರವಿಸಿಕೊಂಡು, ಪರಸ್ಪರ ಪ್ರೀತಿಯಿಂದ ಮದುವೆಯಾಗಿದ್ದಾರೆ ಎಂದು ವಿವಿಧ ಸಂಘಟನೆಗಳ ಹಿರಿಯರು ಹಾರೈಸಿದರು.

ಬೆಳಿಗ್ಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿ, ಸಂಜೆ ವಿವಾಹ ಸಂತೋಷಕೂಟ ನಡೆಯಿತು. ಬಂದವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಂಘಟನೆಯ ಬನಶ್ರೀ, ಸೌಮ್ಯಾ ಅವರೂ ಹಿಂದೆ ಇದೇ ರೀತಿ ಮದುವೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.