ಬೆಳಗಾವಿ/ ಹುಬ್ಬಳ್ಳಿ/ ಮೀರಜ್: ಹುಬ್ಬಳ್ಳಿ– ಪುಣೆ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್; ಅತ್ಯಾಧುನಿಕ ಸೌಕರ್ಯ ಹೊಂದಿದ ರೈಲು ಸೋಮವಾರ ಮೊದಲ ಸಂಚಾರ ನಡೆಸಿತು.

ಮಹಾರಾಷ್ಟ್ರದ ಪುಣೆಯಿಂದ ಆರಂಭಗೊಂಡ ರೈಲು ರಾತ್ರಿ 8.23ಕ್ಕೆ ಮೀರಜ್ ನಗರಕ್ಕೆ ಬಂದಾಗ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸುಂದರ ಆಕಾರದ ಜಾಣ ತಂತ್ರಜ್ಞಾನ ಹೊಂದಿದ ರೈಲು ನಿಧಾನವಾಗಿ ನಿಲ್ದಾಣ ಪ್ರವೇಶ ಮಾಡುತ್ತಿದ್ದಂತೆ ಜನರಲ್ಲಿ ಹರ್ಷದ ಹೊನಲು ಹರಿಯಿತು. ಸಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್, ಮೋದಿ ಮೋದಿ... ಎಂದು ಘೋಷಣೆ ನಿರಂತರ ಮೊಳಗಿಸಿದರು.

ಎರಡು ತಾಸು ಮುಂಚಿತವಾಗಿಯೇ ನಿಲ್ದಾಣದಲ್ಲಿ ಸೇರಿದ್ದ ಜನ ಹೊಸ ರೈಲನ್ನು ಕಣ್ಣು ತುಂಬಿಕೊಂಡರು. ರೈಲಿನ ಎದುರು ಸೆಲ್ಫಿ ತಗೆದುಕೊಂಡು ಸಂಭ್ರಮಿಸಿದರು. ವಿಡಿಯೊ ಮಾಡಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಮಾಡಿಕೊಂಡರು. ಚಿತ್ರಗಳನ್ನು ಫೇಸಬುಕ್, ವಾಟ್ಸ್ ಆ್ಯಪ್ ಮೂಲಕ ಹಂಚಿಕೊಂಡರು.

ವಿಮಾನದಲ್ಲಿ ಹತ್ತಿದ ಅನುಭವ:

'ಇದು ರೈಲಲ್ಲ; ವಿಮಾನದಲ್ಲಿ ಹತ್ತಿದ ಅನುಭವ ಆಗುತ್ತಿದೆ. ಮೊದಲ ರೈಲಿನಲ್ಲಿ ಪ್ರಯಾಣಿಸಿದ ನನ್ನ ಅನುಭವಗಳು ಸಂಭ್ರಮದಿಂದ ಕೂಡಿವೆ. ಈ ನೆನಪನ್ನು ಫೋಟೊ ಫ್ರೇಮ್ ಮಾಡಿ ಕಟ್ಟಿ ಹಿಡಿಯುತ್ತೇನೆ' ಎಂದು ಪ್ರಯಾಣಿಕರಾದ ವಿಜಯಾ ಹಿರೇಮಠ 'ಪ್ರಜಾವಾಣಿ' ಮುಂದೆ ಅನುಭವ ಹಂಚಿಕೊಂಡರು.

'ಸ್ಮಾರ್ಟ್ ಬೋರ್ಡ್, ಸ್ಮಾರ್ಟ್ ಆಸನಗಳು, ಎಸಿ, ಸ್ಮಾರ್ಟ್ ಶೌಚಾಲಯ, ಮಾಹಿತಿ ನೀಡಲು ಅತ್ಯಾಧುನಿಕ ಸೌಕರ್ಯ, ಟಚ್ ಸ್ಕ್ರೀನ್ ವ್ಯವಸ್ಥೆ ಹೊಂದಿದ ಬಾಗಿಲುಗಳು, ಸೆನ್ಸರ್ ಮೂಲಕ ತೆರೆದುಕೊಳ್ಳುವ ಬಾಗಿಲುಗಳು, ಸಮವಸ್ತ್ರ ಧಾರಿತ ಸಿಬ್ಬಂದಿ ಎಲ್ಲವೂ ಖುಷಿ ನೀಡುತ್ರದೆ' ಎಂದರು ಸುಷ್ಮಾ ಜೋಶಿ.

'ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಈ ಕನಸು ನನಸಾಗಿದೆ. ಪುಣೆಯಿಂದ ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸುವ ಜನಸಂಖ್ಯೆ ದೊಡ್ಡದು. ಪುಣೆ- ಹುಬ್ಬಳ್ಳಿ ಮಧ್ಯದ ಪ್ರಯಾಣದ ಸಮಯವನ್ನು ಇದು ಕಡಿಮೆ ಮಾಡಿದೆ' ಎಂದು ಸಂತೋಷ ಹಡಪದ ಹೇಳಿದರು.

ಪ್ರಧಾನಿ ಚಾಲನೆ:

ಪ್ರಧಾನಿ ನರೇಂದ್ರ ಮೋದಿ ರೈಲು ಸಂಚಾರಕ್ಕೆ ವರ್ಚ್ಯುವಲ್ ಮೂಲಕ ಚಾಲನೆ ನೀಡಿದರು.

ಸೆ.18ರಂದು ರೈಲು ಹುಬ್ಬಳ್ಳಿಯಿಂದ ಮತ್ತು ಸೆ.19ರಂದು ಪುಣೆಯಿಂದ ಮೊದಲ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದೆ.

ರೈಲಿನಲ್ಲಿ ಎಂಟು ಬೋಗಿಗಳು ಇದ್ದು, ಅದರಲ್ಲಿ ಎಕ್ಸಿಕ್ಯೂಟಿವ್ ಕ್ಲಾಸ್‌ನ 52 ಆಸನಗಳು ಮತ್ತು 478 ಚೇರ್ ಕಾರ್ (ಸಿಸಿ) ಆಸನಗಳಿವೆ.

ಹೀಗಿದೆ ಪ್ರಯಾಣ ದರ:

ಹುಬ್ಬಳ್ಳಿಯಿಂದ ಧಾರವಾಡವರೆಗಿನ ಚೇರ್ ಕಾರ್ (ಸಿಸಿ) ಪ್ರಯಾಣಕ್ಕೆ ₹365, ಎಕ್ಸಿಕ್ಯೂಟಿವ್ ಕ್ಲಾಸ್ (ಇಸಿ) ಪ್ರಯಾಣಕ್ಕೆ ₹690 ದರ ನಿಗದಿಪಡಿಸಲಾಗಿದೆ. ಹುಬ್ಬಳ್ಳಿಯಿಂದ ಬೆಳಗಾವಿಗೆ ಕ್ಯಾಟರಿಂಗ್ ಸೇರಿ ಚೇರ್ ಕಾರ್ ಪ್ರಯಾಣಕ್ಕೆ ₹ 520, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹1,005 ಮತ್ತು ಕ್ಯಾಟರಿಂಗ್ ಇಲ್ಲದೆ ಚೇರ್ ಕಾರ್‌ಗೆ ₹505, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹990 ದರ ಇದೆ.

ಹುಬ್ಬಳ್ಳಿಯಿಂದ ಪುಣೆಗೆ ಕ್ಯಾಟರಿಂಗ್ ಶುಲ್ಕ ಸೇರಿ ಚೇರ್ ಕಾರ್ ಪ್ರಯಾಣಕ್ಕೆ ₹1,530, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹2,780 ಮತ್ತು ಕ್ಯಾಟರಿಂಗ್ ಇಲ್ಲದೆ ಚೇರ್ ಕಾರ್ –₹1,185, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹2,385 ದರ ನಿಗದಿಪಡಿಸಲಾಗಿದೆ.

ಹೀಗಿದೆ ಸಮಯ:

ಬುಧವಾರ, ಶುಕ್ರವಾರ ಮತ್ತು ಭಾನುವಾರ ಹುಬ್ಬಳ್ಳಿಯ ಶ್ರೀಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ಹೊರಡುವ ರೈಲು (20669), ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ.

ಧಾರವಾಡ (ಬೆಳಿಗ್ಗೆ 5.15ರಿಂದ 5.17), ಬೆಳಗಾವಿ (6.55 ರಿಂದ 7), ಮೀರಜ್ (9 ರಿಂದ 9.05), ಸಾಂಗ್ಲಿ (9.15ರಿಂದ 9.17), ಸತಾರಾದಲ್ಲಿ (10.47ರಿಂದ 10.50) ನಿಲುಗಡೆ ಇರಲಿದೆ.

ಪುಣೆಯಿಂದ (ರೈಲು ಸಂಖ್ಯೆ 20670) ಗುರುವಾರ, ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು ರಾತ್ರಿ 10.45ಕ್ಕೆ ಹುಬ್ಬಳ್ಳಿ ತಲುಪಲಿದೆ.ಸತಾರ (4.37ರಿಂದ 4.40), ಸಾಂಗ್ಲಿ (6.10ರಿಂದ 6.12), ಮೀರಜ್ (6.40ರಿಂದ 6.45), ಬೆಳಗಾವಿ (8.35ರಿಂದ 8.40), ಧಾರವಾಡದಲ್ಲಿ (10.20ರಿಂದ 10.22) ರೈಲು ನಿಲ್ಲಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.