ಅಣ್ಣಿಗೇರಿ: ತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ಗುಂಡಿನ ಸದ್ದು ಕೇಳಿದೆ. ಗ್ರಾಮದ ನಾಗಪ್ಪ ಹರ್ತಿ ಮತ್ತು ಫೈನಾನ್ಸಿಯರ್ ಮಲ್ಲಪ್ಪ ಕರಿ ನಡುವಿನ ಜಗಳದ ವೇಳೆ ಈ ಘಟನೆ ಸಂಭವಿಸಿದ್ದು, ಘಟನೆ ನೋಡಲು ನಿಂತಿದ್ದ 35 ವರ್ಷದ ಶರಣಪ್ಪ ಕಾಳೆ ಎಂಬಾತನಿಗೆ ಗುಂಡು ತಗುಲಿದೆ.

ಬೆಳಿಗ್ಗೆಯೇ ಈ ಘಟನೆ ನಡೆದಿತ್ತು. ಸಂಜೆ ವೇಳೆ ವಿಕೋಪಕ್ಕೆ ತಿರುಗಿದ ಪರಿಣಾಮ ಮಲ್ಲಪ್ಪ ಕುರಿ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ. ಈ ಗುಂಡು ಶರಣಪ್ಪ ಕಾಳೆಗೆ ಬಡೆದಿದೆ. ಸ್ಥಳದಲ್ಲಿ ಸಾಕಷ್ಟು ರಕ್ತಸ್ರಾವವಾದ ಕಾರಣ ಮೊದಲು ಅವರನ್ನು ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹುಬ್ಬಳ್ಳಿಯ ಕಿಮ್ಸ್‌ಗೆ ಸ್ಥಳಾಂತರಿಸಲಾಯಿತು.

20 ಜನರ ನಡುವಿನ ಗುಂಪು ಘರ್ಷಣೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ನವಲಗುಂದ ಮತ್ತು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಾಗರಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.