ಹುಬ್ಬಳ್ಳಿ: ಆಶಾ ಮಧುಮೇಹ ಸಂಸ್ಥೆಯು ಸತ್ತೂರ ಹಾರ್ಟ್ಕೇರ್, ಮಜೇಥಿಯಾ ಫೌಂಡೇಷನ್, ಕರ್ನಾಟಕ ಜಿಮ್ಖಾನಾ, ಐಎಂಎ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸಂಸ್ಥೆಗಳ ಸಹಯೋಗದೊಂದಿಗೆ ‘ಸದೃಢ ಹೃದಯಕ್ಕೆ ವ್ಯಾಯಾಮ’ ಶಿಬಿರವನ್ನು ಇಲ್ಲಿನ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನದಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 7ರಿಂದ 9ರವರೆಗೆ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಆಶಾ ಡಯಾಬೆಟಿಕ್ ಟ್ರಸ್ಟ್ ಹಾಗೂ ರಿಸರ್ಚ್ ಫೌಂಡೇಷನ್ ಕಾರ್ಯದರ್ಶಿ ಡಾ.ಜಿ.ಬಿ. ಸತ್ತೂರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಅರಿವು ಮೂಡಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ. ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ಹೊರತುಪಡಿಸಿ, ಇನ್ನುಳಿದವರು ಪಾಲ್ಗೊಳ್ಳಬಹುದು. ಯೋಗಾ ಮ್ಯಾಟ್ ಜೊತೆಗೆ ಬರಬೇಕು’ ಎಂದು ತಿಳಿಸಿದರು.

ಶಿಬಿರದಲ್ಲಿ ಹೃದಯವನ್ನು ಸದೃಢ ಮಾಡುವ ವ್ಯಾಯಾಮಗಳನ್ನು ಹೇಳಿಕೊಡಲಾಗುವುದು. 36 ಪುಟದ ಮಧುಮೇಹ ಕೈಪಿಡಿಯನ್ನು ಹಾಗೂ ವಾಕಿಂಗ್ ಮಾಡುವ ಕುರಿತಾದ ಕರಪತ್ರ ಉಚಿತವಾಗಿ ನೀಡಲಾಗುವುದು. ರಕ್ತದೊತ್ತಡ, ಸಕ್ಕರೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

2024 ಹಾಗೂ 2025ರಲ್ಲಿ 1 ಲಕ್ಷಕ್ಕೂ ಹೆಚ್ಚು ಜನರ ರಕ್ತದೊತ್ತಡ, ಸಕ್ಕರೆ ಪರೀಕ್ಷೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮ್ಯಾನೇಜಿಂಗ್ ಟ್ರಸ್ಟಿ ಮಹೇಂದ್ರ ವಿಕಮಸಿ, ಟ್ರಸ್ಟಿ ಸದಸ್ಯರಾದ ಕೆವಲ್ ಲುಂಕರ, ಜೆ.ಸಿ. ಮಠದ, ವಿ.ಎಸ್.ವಿ. ಪ್ರಸಾದ, ಕೇಶವ ದೇಸಾಯಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.