ಹುಬ್ಬಳ್ಳಿ: ‘ಪಠ್ಯಕ್ರಮದಲ್ಲಿ ‘ಇಂಡಿಯಾ‘ ಬದಲು ‘ಭಾರತ’ ಎಂದು ಬದಲಾಯಿಸುವ ಕುರಿತು ರಾಜ್ಯ ಸರ್ಕಾರವೂ ಸಮಿತಿ ರಚಿಸಿ, ತೀರ್ಮಾನ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಂಡಿಯಾ ಬ್ರಿಟಿಷರು ಇಟ್ಟ ಹೆಸರು. ಭಾರತ ಎಂದು ಕರೆದರೆ ತಪ್ಪಲ್ಲ. ಪಠ್ಯಕ್ರಮದಲ್ಲಿ ಅಳವಡಿಸಿದರೂ ತಪ್ಪಲ್ಲ’ ಎಂದರು.

‘ತಜ್ಞರ ವರದಿ ಆಧರಿಸಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಮಾಡದೆ, ಸಮಿತಿ ರಚಿಸಿ, ವಿಸ್ತೃತ ಚರ್ಚೆ ನಡೆಸಲಿ. ತಜ್ಞರ ಶಿಫಾರಸು ಆಧರಿಸಿ ತೀರ್ಮಾನ ಕೈಗೊಳ್ಳಲಿ. ಇದರಲ್ಲಿ ರಾಜಕೀಯ ಬೇಡ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.