ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ‘ಸಮೃದ್ಧ ಭಾರತ’ ಘೋಷವಾಕ್ಯದೊಂದಿಗೆ ಮೂರು ಅಡಿ ಎತ್ತರದಲ್ಲಿ ಚರಕ ಪ್ರತಿಷ್ಠಾಪಿಸಲಾಗಿದೆ. ಚರಕದ ಅಡಿಯಲ್ಲಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ‘ಮೈ ಲೈಫ್ ಈಸ್ ಮೈ ಮೆಸೇಜ್’ ಎಂಬ ಸಂದೇಶ ಅಳವಡಿಸಲಾಗಿದೆ.

ಎಸ್.ಸಿ, ಶೆಟ್ಟರ್ ಮತ್ತು ಸನ್ಸ್ ಅವರು ಚರಕವನ್ನು ದಾನವಾಗಿ ಕೊಟ್ಟಿದ್ದಾರೆ. ಹುಬ್ಬಳ್ಳಿಯ ಆರ್ಟ್ವಾಲಿ ಇದನ್ನು ತಯಾರಿಸಿದ್ದಾರೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ‘ನಗರದ ರೈಲು ನಿಲ್ದಾಣ ಅತಿ ಸುಂದರವಾಗಿ ಕಾಣುವಂತೆ ಮಾಡಲು ಮತ್ತು ಪರಿಸರ ಸ್ನೇಹಿಯಾಗಿ ರೂಪಿಸಲು ಶ್ರಮಿಸುತ್ತಿದ್ದೇವೆ. ನಿಲ್ದಾಣದಲ್ಲಿ ಅಂದವಾಗಿ ಬಿಡಿಸಿರುವ ಚಿತ್ರಗಳು ಪ್ರಯಾಣಿಕರ ಆಕರ್ಷಣೆಗಷ್ಟೇ ಅಲ್ಲ; ಜನರು ತ್ಯಾಗಗಳನ್ನು ಪ್ರತಿಬಿಂಬಿಸುತ್ತಾರೆ ಎನ್ನುವ ಸಂದೇಶ ನೀಡುವುದು ನಮ್ಮ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.