ಕೇಕ್ ಬಹುತೇಕರಿಗೆ ಬೇಕರಿಯಲ್ಲಿ ಕೊಂಡು ತಿಂದೇ ರೂಢಿ. ಆದರೆ, ಕ್ರೈಸ್ತ ಸಮುದಾಯದ ಹಲವರು ಮನೆಯಲ್ಲಿಯೇ ಕೇಕ್ ತಯಾರಿಸುವುದು ಸಾಮಾನ್ಯ. ಜನ್ಮದಿನಗಳು, ಪಾರ್ಟಿ, ಹೊಸ ವರ್ಷಾಚರಣೆ, ಕ್ರಿಸ್ಮಸ್ಗೆ ಅವರು ಬಗೆಬಗೆಯ ಕೇಕ್ ತಯಾರಿಸಿ, ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಗುಣಮಟ್ಟ ಉಳಿಸಿಕೊಂಡು ಆರೋಗ್ಯವನ್ನೂ ರಕ್ಷಿಸಿಕೊಳ್ಳುತ್ತಾರೆ. ಕ್ರಿಸ್ಮಸ್ಗಾಗಿ ಕೇಕ್ ತಯಾರಿಕೆ ಎಂಬುದು ಕ್ರೈಸ್ತರ ಪಾಲಿಗೆ ಹಲವು ತಿಂಗಳುಗಳ ಸಿದ್ಧತೆ.

ವಯೋಮಾನದ ಹಂಗಿಲ್ಲದೇ ಮೊಗದಲ್ಲಿ ಮಂದಹಾಸ ಮೂಡಿಸುವ ಪದ ‘ಕೇಕ್’. ಹೊಟ್ಟೆ ಹಸಿದಿದ್ದರೆ ಬಿಡಿ, ಹೊಟ್ಟೆ ಬಿರಿಯುವಷ್ಟು ಉಂಡಿದ್ದರೂ, ಕೇಕ್ ಕಂಡರೆ ಇನ್ನಷ್ಟು, ಮತ್ತಷ್ಟು ತಿನ್ನಬೇಕೆಂಬ ಜಿಹ್ವಾ ಚಪಲ ಕೆರಳುತ್ತದೆ. ಅಂಥ ಚುಂಬಕ ಶಕ್ತಿ ಕೇಕ್ಗಳಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಇಂತಿಪ್ಪ ಕೇಕ್ ತಿನಿಸು ಯಾವುದೇ ಸಂಭ್ರಮದಲ್ಲೂ ಸಲೀಸಾಗಿ ಜಾಗ ಪಡೆಯುತ್ತದೆ. ಅದು ಪಾರ್ಟಿಯೇ ಆಗಿರಲಿ ಇಲ್ಲವೇ ಜನ್ಮದಿನವೇ ಆಗಿರಲಿ. ಕ್ರಿಸ್ಮಸ್ ಹಬ್ಬದಲ್ಲಂತೂ ಇದರ ಮೌಲ್ಯ, ಉಪಸ್ಥಿತಿ ಇನ್ನೂ ವಿಶೇಷ. ಅಲ್ಲವೇ ಮತ್ತೆ, ಕೇಕ್ ಇಲ್ಲದೇ ಕ್ರಿಸ್ಮಸ್ ಆಚರಣೆ ಸಾಧ್ಯವೇ ಇಲ್ಲ.

ಒಂದಿಷ್ಟು ಜನರು ಗುಣಮಟ್ಟದ ಕಾರಣಕ್ಕೆ ಮನೆಯಲ್ಲಿ ಕೇಕ್ ಸಿದ್ಧಪಡಿಸಿದರೆ, ಮತ್ತೊಂದಿಷ್ಟು ಜನರು ತಮ್ಮಷ್ಟಿದ ರುಚಿ, ಬಣ್ಣ, ಸುವಾಸಣೆಯುಳ್ಳ ಕೇಕ್ ತಯಾರಿಸಬಹುದು ಎಂಬ ದೃಷ್ಟಿಯಿಂದ ಮನೆಯಲ್ಲಿ ಈ ತಿನಿಸನ್ನು ಮಾಡುತ್ತಾರೆ. ಸಮಯ, ಶ್ರಮ ವಿನಿಯೋಗಿಸುವ ಮೂಲಕ ಕ್ರಿಸ್ಮಸ್ ಕೇಕ್ ಅನ್ನು ವಿಶೇಷವಾಗಿಸುತ್ತಾರೆ.

ವೈನ್ ಕೇಕ್ಗೆ ವರ್ಷದ ತಯಾರಿ
ಹುಬ್ಬಳ್ಳಿಯ ಕಾರವಾರ ರಸ್ತೆಯ ಮಂಗಳ ಓಣಿ ನಿವಾಸಿ ವಿವೇಕ ಏಕಬೋಟೆ ಅವರು ಕ್ರಿಸ್ಮಸ್ ಕೇಕ್ಗಾಗಿ ಒಂದು ವರ್ಷ ಮೊದಲೇ ತಯಾರಿ ನಡೆಸುತ್ತಾರೆ.

‘ನಾವು 30–35 ವರ್ಷಗಳಿಂದ ಕ್ರಿಸ್ಮಸ್, ಜನ್ಮದಿನ ಹಾಗೂ ಹೊಸ ವರ್ಷಕ್ಕಾಗಿ ಮನೆಯಲ್ಲಿಯೇ ಕೇಕ್ ತಯಾರಿಸುತ್ತೇವೆ. ಕ್ರಿಸ್ಮಸ್ಗಾಗಿ ವಿಶೇಷವಾಗಿ ವೈನ್ ಕೇಕ್ ತಯಾರಿಸುತ್ತೇವೆ. ಅದಕ್ಕಾಗಿ ಒಂದು ವರ್ಷದ ಸಿದ್ಧತೆ ನಡೆಯುತ್ತದೆ’ ಎನ್ನುತ್ತಾರೆ ವಿವೇಕ.

‘ಆರೆಂಜ್ ಪೀಲ್, ಡ್ರೈ ಜಿಂಜರ್, ಕಪ್ಪು ದ್ರಾಕ್ಷಿ, ಗೋಡಂಬಿ, ಬಾದಾಮಿ, ಚೆರ್ರಿ ಸೇರಿದಂತೆ ಹಲವು ಒಣಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ, ಅವುಗಳನ್ನು ವೈನ್ನಲ್ಲಿ ನೆನಸಿ ಇಡುತ್ತೇವೆ. ಒಂದು ವರ್ಷದ ಬಳಿಕ ಅಂದರೆ, ಮರು ವರ್ಷದ ಡಿಸೆಂಬರ್ ಹೊತ್ತಿಗೆ ಅದನ್ನು ತೆಗೆದು ಚೆನ್ನಾಗಿ ಮಿಶ್ರಣ ಮಾಡುತ್ತೇವೆ. ಬಳಿಕ ಬೆಣ್ಣೆ, ಸಕ್ಕರೆ, ಎಗ್ ವೈಟ್, ಎಗ್ ಯಲ್ಲೊ(ಹಳದಿ ಭಾಗ), ಮೈದಾ ಕೂಡಿಸಿಕೊಂಡು ಕಲಿಸುತ್ತೇವೆ. ಅದಕ್ಕೆ ವೈನ್ನಲ್ಲಿ ಒಂದು ವರ್ಷದ ಕಾಲ ನೆನೆಸಿಟ್ಟಿದ್ದ ಮಿಶ್ರಣ ಹಾಕಿ ಚೆನ್ನಾಗಿ ಕಲಿಸಿಕೊಳ್ಳುತ್ತೇವೆ. ಅದು ಒಂದು ಹದಕ್ಕೆ ಬಂದ ಬಳಿಕ, ಅದನ್ನು ಪ್ರಮಾಣ ಬದ್ಧವಾಗಿ ಬಾಕ್ಸ್ಗೆ ಹಾಕಿ, ಓವನ್ನಲ್ಲಿ ಇಟ್ಟು 260 ಡಿಗ್ರಿಯಿಂದ 320 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೇಕ್ ಮಾಡುತ್ತೇವೆ. ಬಳಿಕ ಅದನ್ನು ಒಂದು ಬಾಕ್ಸ್ಗೆ ಹಾಕಿ ಎರಡ್ಮೂರು ದಿನಗಳು ಇಟ್ಟರೆ, ಕ್ರಿಸ್ಮಸ್ನ ವೈನ್ ಕೇಕ್ ತಿನ್ನಲು ಸಿದ್ಧವಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ಸಾಂಪ್ರದಾಯಿಕ ಫ್ರೂಟ್ ಕೇಕ್
ಧಾರವಾಡದ ನಿವಾಸಿ ರೋಶನಿ ಸ್ಯಾಮ್ಯುಯೆಲ್ ಅವರಿಗೆ ಕೇಕ್ ತಯಾರಿ ಎಂಬುದು ಸಾಂಪ್ರದಾಯಿಕ ಅಡುಗೆಯಷ್ಟೇ ಸಲೀಸು.

‘ಕೇಕ್ ತಯಾರಿಕೆ ಎಂಬುದು ನಮಗೆ ಕುಟುಂಬದ ಸಂಪ್ರದಾಯದ ಭಾಗವೇ ಆಗಿದೆ. ನಮ್ಮ ತಂದೆ–ತಾಯಿ, ಅಜ್ಜಿ ಕೇಕ್ ತಯಾರಿಸುತ್ತಿದ್ದರು. ಆಗಿನಿಂದಲೂ ನಾವು ಮನೆಯಲ್ಲಿ ಕೇಕ್ ತಯಾರಿಸುತ್ತೇವೆ. ಯಾವ ಸಂದರ್ಭದಲ್ಲಿಯೂ ನಾನು ಬೇಕರಿಯಿಂದ ಕೇಕ್ ಕೊಳ್ಳುವುದಿಲ್ಲ. ನಾನು ಕಳೆದ 30 ವರ್ಷಗಳಿಂದ ಮಾಡುತ್ತಿದ್ದೇನೆ. ನನಗೆ ಹತ್ತು ಹಲವು ಬಗೆಯ ಕೇಕ್ ಮಾಡುವುದು ಗೊತ್ತು. ಆದರೆ, ಕ್ರಿಸ್ಮಸ್ಗೆ ಮಾತ್ರ ಫ್ರೂಟ್ ಕೇಕ್ ಹಾಗೂ ಮಡೇರಾ ಕೇಕ್ ಮಾಡುತ್ತೇನೆ. ಅದರಲ್ಲೂ ಸಾಂಪ್ರದಾಯಿಕ ಫ್ರೂಟ್ ಕಪ್ ಕೇಕ್ ನಮ್ಮ ವಿಶೇಷ’ ಎನ್ನುತ್ತಾರೆ ರೋಶನಿಯ ಸ್ಯಾಮ್ಯುಯೆಲ್.

‘ಕ್ರಿಸ್ಮಸ್ಗಾಗಿ ಮಾಡುವ ಫ್ರೂಟ್ ಕೇಕ್ನ ತಯಾರಿ ಅಕ್ಟೋಬರ್ ತಿಂಗಳಲ್ಲೇ ಸಿದ್ಧತೆ ಶುರುವಾಗುತ್ತದೆ. ಆರೇಳು ಬಗೆಯ ಒಣಹಣ್ಣುಗಳನ್ನು ತಂದು, ಅದನ್ನು ಚಿಕ್ಕದಾಗಿ ಕತ್ತರಿಸಿ, ರಮ್ನಲ್ಲಿ ನೆನಸಿ ಇಡುತ್ತೇನೆ. ಬಳಿಕ ಡಿಸೆಂಬರ್ 15ರ ವೇಳೆಗೆ ಅದನ್ನು ಕೇಕ್ ತಯಾರಿಕೆಯಲ್ಲಿ ಬಳಸುತ್ತೇವೆ. ಈ ಕೇಕ್ ತಯಾರಿಕೆಗೆ ಎರಡ್ಮೂರು ಗಂಟೆ ಹಿಡಿಯುತ್ತದೆ. ಪ್ರತಿ ವರ್ಷ ಡಿ.20ರ ವೇಳೆಗೆ ಕೇಕ್ ಸಂಪೂರ್ಣ ಸಿದ್ಧಗೊಳಿಸಿ, ಫ್ರಿಡ್ಜ್ನಲ್ಲಿ ಇಡುತ್ತೇನೆ. ಕ್ರಿಸ್ಮಸ್ ಸಮಯದಲ್ಲಿ ಬಳಸುತ್ತೇನೆ. ಈ ಕೇಕ್ ಅನ್ನು ಫ್ರಿಡ್ಜ್ನಲ್ಲಿ ಇಟ್ಟರೆ, ಐದಾರು ತಿಂಗಳು ಕಾಲ ಬಳಸಬಹುದು’ ಎನ್ನುತ್ತಾರೆ ಅವರು.

‘ಫ್ರೂಟ್ ಕೇಕ್ ಜೊತೆಗೆ ಕ್ರಿಸ್ಮಸ್ಗಾಗಿ ಮಡೇರಾ ಕೇಕ್ ತಯಾರಿಸುತ್ತೇನೆ. ಎಲ್ಲ ಸಾಮಗ್ರಿಗಳು ಇದ್ದರೆ, ಒಂದೂವರೆಯಿಂದ 2 ಗಂಟೆಗಳಲ್ಲಿ ಈ ಕೇಕ್ ಸಿದ್ಧಗೊಳ್ಳುತ್ತದೆ. ಇದು ಸ್ಪಂಜ್ ಕೇಕ್ನಂತೆ ಇರುತ್ತದೆ. ಹೀಗಾಗಿ ದೀರ್ಘ ಬಾಳಿಕೆ ಬರುವುದಿಲ್ಲ’ ಎಂದು ರೋಶನಿ ಹೇಳುತ್ತಾರೆ.

ಗುಣಮಟ್ಟ ಕಾಪಾಡಲು ಮನೆಯಲ್ಲಿಯೇ ಕೇಕ್
ಹುಬ್ಬಳ್ಳಿಯ ಚೇತನಾ ಕಾಲೊನಿ ನಿವಾಸಿ ಎನ್.ಜಯಕುಮಾರ್ ಹಾಗೂ ಅವರ ಪತ್ನಿ ಎನ್.ಜೆ.ಲೀನಾ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಕ್ರಿಸ್ಮಸ್ ಸಂಭ್ರಮಕ್ಕಾಗಿ ಮನೆಯಲ್ಲಿಯೇ ಕೇಕ್ ತಯಾರಿಸುತ್ತಾರೆ.

‘ನಾವು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಮನೆಯಲ್ಲಿಯೇ ಕೇಕ್ ತಯಾರಿಸುತ್ತೇವೆ. ಮೊದಲಿಗೆ ನಮ್ಮ ಅಮ್ಮ, ಅಜ್ಜ–ಅಜ್ಜಿ ತಯಾರಿಸುತ್ತಿದ್ದರು. ಬಳಿಕ ನಮಗೂ ಅದು ಅಭ್ಯಾಸವಾಯಿತು. ನಾಲ್ಕೈದು ವರ್ಷಗಳಿಂದ ನಾವು ಕೇಕ್ ತಯಾರಿಸುತ್ತಿದ್ದೇವೆ. ವೆನಿಲಾ ಕೇಕ್, ವೈನ್ ಕೇಕ್, ರಮ್ ಕೇಕ್, ಪ್ಲಮ್ ಕೇಕ್ ಸೇರಿದಂತೆ ಐದಾರು ಬಗೆಯ ಕೇಕ್ಗಳನ್ನು ಮಾಡುತ್ತೇವೆ. ಇದಕ್ಕಾಗಿ ಸೆಪ್ಟಂಬರ್ನಿಂದಲೇ ತಯಾರಿ ಶುರುವಾಗುತ್ತದೆ. ಕ್ರಿಸ್ಮಸ್ ಹೊತ್ತಿಗೆ ಅದು ಸಿದ್ಧಗೊಳ್ಳುತ್ತದೆ’ ಎನ್ನುತ್ತಾರೆ ಜಯಕುಮಾರ್ ದಂಪತಿ.

‘ಮನೆಯಲ್ಲಿ ಕೇಕ್ ತಯಾರಿಸುವುದರಿಂದ ಗುಣಮಟ್ಟದ ಖಾತ್ರಿ ಇರುತ್ತದೆ. ಮಾರುಕಟ್ಟೆಯಲ್ಲಿ ಎಷ್ಟು ದುಡ್ಡು ಕೊಟ್ಟರೂ ನಮಗೆ ಬೇಕಾದ ಗುಣಮಟ್ಟ ಸಿಗದೇ ಇರಬಹುದು. ಹೀಗಾಗಿ ನಾವು ಮನೆಯಲ್ಲಿಯೇ ಕೇಕ್ ತಯಾರಿಸುತ್ತಿದ್ದೇವು. ಇದನ್ನು ನೋಡಿ ಒಂದಿಷ್ಟು ಸ್ನೇಹಿತರು ನಮಗೂ ಮಾಡಿಕೊಡು ಎನ್ನುತ್ತಿದ್ದರು. ಅವರಿಗೂ ಮಾಡಿಕೊಡುತ್ತಿದ್ದೆವು. ಇದೀಗ ಒಂದು ವರ್ಷದ ಹಿಂದ ನಾವು ‘ಜೆ ಆ್ಯಂಡ್ ಜೆ’ ಕೇಕ್ ಬೇಕರಿಯನ್ನೇ ತೆರೆದಿದ್ದೇವೆ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.