ಹುಬ್ಬಳ್ಳಿ: ‘ದೇಶೀಯವಾಗಿ ವಿನ್ಯಾಸಗೊಳಿಸಿದ ಪಿಸ್ತೂಲ್ ಹಾಗೂ ರೈಫಲ್‌ಗಳ ಮಾದರಿ ಯನ್ನು ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಿದ್ಧಪಡಿಸಿದ್ದು, ಅವುಗಳ ಉತ್ಪಾದನಾ ಘಟಕವನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕಾಡನಕೊಪ್ಪ ಗ್ರಾಮ ದಲ್ಲಿ ನವೆಂಬರ್‌ನಲ್ಲಿ ಉದ್ಘಾಟಿಸಲಾಗುವುದು’ ಕಂಪನಿಯ ಸಿಇಒ ಅಂಕುಶ ಕೊರವಿ ಹೇಳಿದರು.

‘ಅಟಲ್’ ಪಿಸ್ತೂಲ್ ಮಾದರಿ ಗಳನ್ನು ನಮ್ಮಲ್ಲಿಯೇ ವಿನ್ಯಾಸ ಮಾಡಿ, ಅಭಿವೃದ್ಧಿಪಡಿಸಲಾಗಿದೆ. ಅಟಲ್ 9x19ಎಂ.ಎಂ (ಕ್ಯಾಲಿಬರ್) ಪಿಸ್ತೂಲ್ ಹಾಗೂ ಅಟಲ್ 0.32 (ಕ್ಯಾಲಿಬರ್) ಪಿಸ್ತೂಲ್ ತಯಾರಿಸಲಾಗು ವುದು. ಆಯುಧಗಳನ್ನು ತಯಾರಿಸುವ ಖಾಸಗಿ ವಲಯದ ಮೊದಲ ಸ್ವದೇಶಿ ಕಂಪನಿ ಇದು’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಅನುಭವಿ ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನೂತನ ತಂತ್ರಜ್ಞಾನ ಬಳಸಿ, ಆಯುಧಗಳ ಮಾದರಿ ತಯಾರಿಸಲಾಗಿದೆ. ನಮ್ಮ ಕಂಪನಿಯ ಕಾರ್ಯಕ್ಷಮತೆ ಸಾಮರ್ಥ್ಯ ಗುರುತಿಸಿದ ರಕ್ಷಣಾ ಇಲಾಖೆಯು, ಅ. 18ರಿಂದ 22ರವರೆಗೆ ಗುಜರಾತಿನಲ್ಲಿ ನಡೆ ಯಲಿರುವ ಅಂತರರಾಷ್ಟ್ರೀಯ ರಕ್ಷಣಾ ಆಯುಧಗಳ ‘ಡೆಫ್ ಎಕ್ಸ್ ಫೋ–2022’ದ ಇಂಡಿಯಾ ಪೆವಿಲಿಯನ್‌ನಲ್ಲಿ ನಮ್ಮ ಮಾದರಿ ಗಳನ್ನು ಪ್ರದರ್ಶಿಸಲು ಅವಕಾಶ ನೀಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.