ಹುಬ್ಬಳ್ಳಿ: ಅಶ್ವಿನ್ ಸಂತೋಷ್ (57) ಅರ್ಧಶತಕದ ಬಲದಿಂದ ಕರ್ನಾಟಕ ತಂಡ 16 ವರ್ಷದ ಒಳಗಿನವರ ವಿಜಯ್ ಮರ್ಚಂಟ್ ಟ್ರೋಫಿ ದಕ್ಷಿಣ ವಲಯದ ಕ್ರಿಕೆಟ್ ಟೂರ್ನಿಯ ಗೋವಾ ವಿರುದ್ಧದ ಪಂದ್ಯದಲ್ಲಿ ಶುಕ್ರವಾರ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.

ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೋವಾ ಪ್ರಥಮ ಇನಿಂಗ್ಸ್ನಲ್ಲಿ 129 ರನ್ ಗಳಿಸಿತ್ತು. ಗುರುವಾರದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದ್ದ ರಾಜ್ಯ ತಂಡ ಒಟ್ಟು 67.5 ಓವರ್ಗಳಲ್ಲಿ ಒಟ್ಟು 201 ರನ್ ಕಲೆಹಾಕಿತು. 72 ರನ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಗೋವಾ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 10.2 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 25 ರನ್ ಗಳಿಸಿದೆ. ಒಂದು ದಿನದಾಟ ಬಾಕಿಯಿದೆ.

ರಾಜ್ಯ ತಂಡದ ಅಶ್ವಿನ್ ಸಂತೋಷ 126 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಇವರ ಆಟಕ್ಕೆ ಯಶೋವರ್ಧನ ಪ್ರತಾಪ್ (42) ಜೊತೆಯಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಬಲದಿಂದ ಕರ್ನಾಟಕ ಉತ್ತಮವಾಗಿ ಆಡುತ್ತಿತ್ತು. 41ನೇ ಓವರ್ನಲ್ಲಿ ಯಶೋವರ್ಧನ್ ಔಟಾದ ಬಳಿಕ ತಂಡದ ರನ್ 117 ಆಗಿತ್ತು. ನಂತರದ 26 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಒಟ್ಟು 19.5 ಓವರ್ ಬೌಲಿಂಗ್ ಮಾಡಿದ ಫೈಜನ್ ಖಾಲಿದ್ಹುಸೇನ್ ಸೈಯದ್ ಆರು ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಗೋವಾ ಮೊದಲ ಇನಿಂಗ್ಸ್ 76.3 ಓವರ್ಗಳಲ್ಲಿ 129. ಕರ್ನಾಟಕ ಮೊದಲ ಇನಿಂಗ್ಸ್ 67.5 ಓವರ್ಗಳಲ್ಲಿ 201 (ಆರ್. ವಿಶಾಲ್ 24, ಅಶ್ಚಿನ್ ಸಂತೋಷ 57, ಯಶೋವರ್ಧನ ಪ್ರತಾಪ 42, ಶಿಖರ್ ಆರ್. ಶೆಟ್ಟಿ 19; ಫೈಜನ್ ಖಾಲಿದ್ಹುಸೇನ್ ಸೈಯದ್ 74ಕ್ಕೆ6, ಶ್ರೇಯಲ್ ಪ್ರವೀಣ್ 29ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.