ಹುಬ್ಬಳ್ಳಿ: ಟೈಮ್ಸ್ ಗ್ರೂಪ್ ಇಂಡಿಯಾ ದೆಹಲಿಯಲ್ಲಿ ನಡೆಸಿದ ದೆಹಲಿ ಟೈಮ್ಸ್ ಫ್ಯಾಷನ್ ರನ್‌ವೇ– 2022’ನಲ್ಲಿ ಧಾರವಾಡ ಗಾಂಧಿನಗರದ 14 ವರ್ಷದ ರೂಪದರ್ಶಿ ಶೈನಾ ಪಂಚಿಕಲ್ ‘ಮಿಸ್ ಟ್ಯಾಲೆಂಟ್’ ಆಗಿ ಹೊರಹೊಮ್ಮಿದ್ದಾರೆ ಎಂದು ಎಸ್ಪೀರ್ ಫ್ಯಾಷನ್ಸ್ ವ್ಯವಸ್ಥಾಪಕ ನಿರ್ದೇಶಕಿ ಎಸ್ತರ್ ಮೋಹನ್ಕಾ ಹೇಳಿದರು.

ದೇಶದಾದ್ಯಂತ 60 ಸ್ಪರ್ಧಿಗಳು ಭಾಗವಹಿಸಿದ್ದ ಷೋನಲ್ಲಿ ಉತ್ತರ ಕರ್ನಾಟಕದಿಂದ ಭಾಗವಹಿಸಿದ್ದ ಏಕೈಕ ಹಾಗೂ ಅತ್ಯಂತ ಕಿರಿಯ ರೂಪದರ್ಶಿ ಶೈನಾ ಆಗಿದ್ದಾರೆ. ಜೊತೆಗೆ, ಫ್ಯಾಷನೋವಾ ಅಂತರರಾಷ್ಟ್ರೀಯ ಶೈಲಿಯ ಸಪ್ತಾಹ–2022ರಲ್ಲಿ ಲಕ್ನೊ ವಸ್ತ್ರ ವಿನ್ಯಾಸಕ ಮುಖೇಶ್ ದುಬೆ ಅವರ ವಿನ್ಯಾಸದ ವಸ್ತ್ರಗಳನ್ನು ಶೈನಾ ಪ್ರದರ್ಶಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹುಬ್ಬಳ್ಳಿಯ ರಾಯಾಪುರದಲ್ಲಿರುವ ಕೆಎಲ್‌ಇ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಶೈನಾ, ಭವಿಷ್ಯದ ಭರವಸೆಯ ರೂಪದರ್ಶಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ನಮ್ಮ ಸಂಸ್ಥೆಯಿಂದ ಹೊರಹೊಮ್ಮುವ ರೂಪದರ್ಶಿಗಳಿಗೆ ಚಲನಚಿತ್ರ, ಓಟಿಟಿ, ವೆಬ್ ಸಿರೀಸ್‌ಗಳು, ರನ್‌ವೇ ಮಾಡೆಲಿಂಗ್, ಬ್ರ್ಯಾಂಡ್ ಶೂಟಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.