ಅಳ್ನಾವರ: ಇಲ್ಲಿನ ಪಟ್ಟಣ ಪಂಚಾಯ್ತಿ ಅಡಿಯ ಶ್ರೀ ಅನ್ನಪೂರ್ಣೇಶ್ವರಿ ಪ್ರದೇಶವಾರು ಒಕ್ಕೂಟ ಹಾಗೂ ಮಹಾಲಕ್ಷ್ಮಿ ಹೋಂ ಇಂಡಸ್ಟ್ರೀಸ್ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟ ಮಂಗಳವಾರ ಧಾರವಾಡದ ಕಡಪಾ ಮೈದಾನದಲ್ಲಿ ನಡೆಯಿತು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸರ್ಕಾರದ ವಿವಿಧ ಇಲಾಖೆಗಳ ಆಶ್ರಯದಲ್ಲಿ ಮೇಳ ಆಯೋಜಿಸಲಾಗಿತ್ತು.

ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಶಾವಗಿ, ಸಂಡಿಗೆ, ವಿವಿಧ ತರಹದ ಚಟ್ನಿಗಳು, ಬ್ಯಾಡಗಿ ಮೆಣಸಿನಕಾಯಿ ಕಾರದ ಪುಡಿ, ವಿವಿಧ ತರಹದ ಹೋಳಿಗೆ, ಫೆನಾಯಿಲ್, ಬಟ್ಟೆ ಸೋಪು, ಬಟ್ಟೆ ಸೋಪು ಪೌಡರ್, ಉಂಡಿ, ಹಪ್ಪಳ ಮಾರಾಟಕ್ಕಿತ್ತು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಚಂದ್ರಪ್ಪ, ಪಟ್ಟಣ ಪಂಚಾಯ್ತಿ ಸಮುದಾಯ ಅಭಿವೃದ್ಧಿ ಅಧಿಕಾರಿ ನಾಗರಾಜ ಗರ್ಲಹುಸೂರ ಹಾಗೂ ಮಹಿಳಾ ಸಬ್ ಅರ್ಬನ್ ಠಾಣೆಯ ಎಸ್‌ಐ ಗಿರಿಜಾಬಾಯಿ ಗುರ್ಲಹುಸೂರ ಸ್ಟಾಲ್‌ಗಳಿಗೆ ಭೇಟಿ ನೀಡಿದರು. ಸ್ವ ಸಹಾಯ ಗುಂಪಿನ ಸುಮಾ ಸೊಪ್ಪಿ, ಮಹಾದೇವಿ ಏಣಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.