ಧಾರವಾಡ: ‘ಮಾದಕ ಪದಾರ್ಥಗಳ ಗೀಳು ಬೆಳೆಸಿಕೊಳ್ಳಬಾರದು, ಅವುಗಳಿಂದ ದೂರ ಇರಬೇಕು’ ಎಂದು ನಟ ಶಿವರಾಜ್ಕುಮಾರ್ ಹೇಳಿದರು.

ವಿದ್ಯಾಗಿರಿಯ ಜೆಎಸ್ಎಸ್ ವಿದ್ಯಾಲಯದ ಆವರಣದಲ್ಲಿ ಮಾದಕ ವಸ್ತು ನಿರ್ಮೂಲನಾ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ಮಾದಕ ಪದಾರ್ಥಗಳು ದುಷ್ಪರಿಣಾಮ ಉಂಟು ಮಾಡುತ್ತವೆ. ಸ್ನೇಹಿತರು ಮಾದಕ ಪದಾರ್ಥ ಬಳಸುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

‘ನಾನಿರುವುದೆ ನಿಮಗಾಗಿ..’, ‘ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ...’, ಇವನ್ಯಾರ ಮಗನೋ...’ ಹಾಡುಗಳನ್ನು ಅವರು ಹಾಡಿದರು. ಶಿವರಾಜ್ಕುಮಾರ್ ಅವರನ್ನು ನೋಡಿ ವಿದ್ಯಾರ್ಥಿಗಳು ಖುಷಿಪಟ್ಟರು.

ಗೀತಾ ಶಿವರಾಜ್ಕುಮಾರ್, ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ, ರವೀಶ್, ಜೆಎಸಎಸ್ ಕಾರ್ಯದರ್ಶಿ ಅಜಿತ ಪ್ರಸಾದ, ಮಹಾವೀರ ಉಪಾಧ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.