ನವಲಗುಂದ ತಾಲ್ಲೂಕಿನ ಗ್ರಾಮಸ್ಥರು ಅತಿ ಹೆಚ್ಚು ಶುದ್ಧ ಕುಡಿಯುವ ನೀರನ್ನು ಕುಡಿಯುತ್ತಾರೆ. ನೀರಿನ ಘಟಕಗಳು ದುರಸ್ತಿ ಬಂದರೆ ಅತೀ ಹೆಚ್ಚು ಸಮಯವೆಂದರೂ ನಾಲ್ಕೈದು ದಿನಗಳಲ್ಲಿ ದುರಸ್ತಿ ಮಾಡಿ ಮತ್ತೆ ಕುಡಿಯುವ ನೀರನ್ನು ಪೂರೈಸುತ್ತೇವೆ.ಪ್ರಕಾಶ್ ಹಾಲಕೇರಿ, ಎನ್‌ಎಎಸ್‌ಐ ಕಂಪನಿ ಮ್ಯಾನೇಜರ್, ಹುಬ್ಬಳ್ಳಿ
ಶುದ್ಧ ನೀರಿನ ಘಟಕ ಶೀಘ್ರದಲ್ಲೇ ದುರಸ್ತಿಗೊಳಿಸಬೇಕು. ಘಟಕ ದುರಸ್ತಿ ಆದರೆ ಗ್ರಾಮಕ್ಕೆ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ನಾಗರಿಕರಿಗೆ ನೀರಿನ ಸಮಸ್ಯೆ ನಿವಾರಣೆ ಆಗಲಿದೆ.ಶಂಕರಪ್ಪ ಅಂಬಲಿ, ರೈತ ಹೋರಾಟಗಾರ, ಹೆಬ್ಬಾಳ
ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತ ವಾಗಿರುವ ಬಗ್ಗೆ ಮಾಹಿತಿ ಬಂದಿದೆ. ದುರಸ್ತಿ ಬಗ್ಗೆ ಕ್ರಮ ವಹಿಸಲಾಗುವುದು. ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಶೀಘ್ರದಲ್ಲೇ ಜನರಿಗೆ ಶುದ್ಧ ನೀರು ಪೂರೈಸಲಾಗುವುದುಭಾಗ್ಯಶ್ರೀ ಜಹಗೀರದಾರ, ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ ನವಲಗುಂದ
ನಮ್ಮ ಇಲಾಖೆಯಿಂದ 68 ಘಟಕಗಳಿಗೆ ಟೆಂಡರ್ ನೀಡಿ ನಿರ್ವಹಣೆ ಮಾಡಲಾಗುತ್ತಿದೆ. ಕೆಲವೊಂದು ಕಡೆ ವಿವಿಧ ಖಾಸಗಿ ಕಂಪನಿಯವರು ನಿರ್ಮಿಸಿದ್ದಾರೆ. ಅವುಗಳು ಕೂಡಾ ಬರುವ ದಿನಗಳಲ್ಲಿ ನಮ್ಮ ವ್ಯಾಪ್ತಿಗೆ ಪಡೆದುಕೊಂಡು ದುರಸ್ತಿಗೊಳಿಸಿ ಪ್ರಾರಂಭಿಸಲಾಗುವುದು.ಶಿವಪುತ್ರಪ್ಪ ಮಠಪತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್, ಕಲಘಟಗಿ
ಈ ಶುದ್ಧ ನೀರಿನ ಘಟಕ ಯಾವಾಗ ಚಾಲು ಇರತದಂತ ಗೊತ್ತಾಗುದಿಲ್ಲ. ಯಾವಾಗ ನೋಡಿದ್ರ ಬಂದ್ ಇರತೈತ. ಒಂದಿನ ಅಲ್ಲಿಂದ ನೀರ ತಂದಿಲ್ಲ ನೋಡ್ರಿ.ಶಿವಲೀಲಾ ಬೋರಶೆಟ್ಟರ, ಶಿರಕೋಳ ನಿವಾಸಿ
ಗ್ರಾಮದಲ್ಲಿ 5 ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂಗ ಆಗಿವೆ. ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿವೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ನೀಲಮ್ಮ ಎಚ್., ಉಪ್ಪಿನಬೆಟಗೇರಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.