ಹುಬ್ಬಳ್ಳಿ: 'ಕೆ.ಎಸ್. ಈಶ್ವರಪ್ಪ ಅವರು ಪುತ್ರನಿಗೆ ಹಾವೇರಿ ಟಿಕೆಟ್ ಸಿಕ್ಕಿಲ್ಲ ಎಂದು ಕೋಪಗೊಂಡಿದ್ದಾರೆ. ಚುನಾವಣೆಗೆ ಸಾಕಷ್ಟು ದಿನಗಳಿದ್ದು, ಅಷ್ಟರೊಳಗೆ ಸಕಾರಾತ್ಮ ಬದಲಾವಣೆ ಆಗಲಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಈಶ್ಬರಪ್ಪ ಪಕ್ಷದ ಹಿರಿಯ ನಾಯಕರು. ಪಕ್ಷದ ವರಿಷ್ಠರು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಂಡಾಯ ಶಮನವಾಗಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಏ. 26ಕ್ಕೆ ಚುನಾವಣೆ, ಇನ್ನೂ 40 ದಿನಗಳಿವೆ. ಅಷ್ಟರೊಳಗೆ ಎಲ್ಲವೂ ಸರಿ ಹೋಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಚುನಾವಣೆ ತಯಾರಿ ನಡೆದಿದ್ದು, ಮೂರು-ನಾಲ್ಕು ದಿನಗಳಲ್ಲಿ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಲಾಗುವುದು. ಈ ಬಾರಿ ಚುನಾವಣೆ ಪ್ರಚಾರಕ್ಕೆ 50 ದಿನಗಳಷ್ಟು ಸುದೀರ್ಘ ಕಾಲಾವಕಾಶ ದೊರಕಿದೆ. ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಪ್ರಚಾರ ನಡೆಸಲಾಗುವುದು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.