ಹುಬ್ಬಳ್ಳಿ: ಅವರಿಬ್ಬರೂ ಮಾನಸಿಕ ರೋಗಿಗಳು. ಧಾರವಾಡದ ಡಿಮ್ಹಾನ್ಸ್ನಲ್ಲಿ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ನಿತ್ಯ ಔಷಧ ಸೇವಿಸದಿದ್ದರೆ, ಆರೋಗ್ಯದಲ್ಲಿ ಏರುಪೇರಾಗುವ ಅಪಾಯ. ಆದರೆ, ಲಾಕ್ಡೌನ್ನಿಂದಾಗಿ ತಾವಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಧಾರವಾಡಕ್ಕೆ ಬಂದು ಔಷಧ ಖರೀದಿಸಿಕೊಂಡು ಹೋಗಲಾಗದ ಸ್ಥಿತಿ ಅವರದು.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅವರ ನೆರವಿಗೆ ಬಂದಿದ್ದು, ಹುಬ್ಬಳ್ಳಿಯ ಅಶೋಕನಗರ ಠಾಣೆ ಇನ್ಸ್ಪೆಕ್ಟರ್ ಬಿ.ಡಿ. ರವಿಚಂದ್ರನ್. ರೋಗಿಗಳಾದ ಗದಿಗೆಮ್ಮ ಹುಲಕೋಟಿ ಹಾಗೂ ಸೋಮಣ್ಣ ಸತಪೂತೆಗೆ ಸಕಾಲದಲ್ಲಿ ರವಿಚಂದ್ರನ್ ಅವರು ಮನೆ ಬಾಗಿಲಿಗೆ ಔಷಧ ತಲುಪಿಸಿದ್ದಾರೆ.

ಆರು ದಿನದ ಹಿಂದೆ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ಸ್ಪೆಕ್ಟರ್ ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘2015ರಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಲ್ಲಿ ಪರಿಚಯವಾಗಿದ್ದ ಸ್ನೇಹಿತರೊಬ್ಬರು ಏ. 24ರಂದು ಕರೆ ಮಾಡಿ, ಔಷಧ ಕೊರತೆಯಿಂದಾಗಿಇಬ್ಬರು ಮಾನಸಿಕ ರೋಗಿಗಳು ತೊಂದರೆಯಲ್ಲಿರುವ ವಿಷಯ ತಿಳಿಸಿದರು’ ಎಂದು ಇನ್ಸ್ಪೆಕ್ಟರ್ ಡಿ.ಬಿ. ರವಿಚಂದ್ರನ್ ‘ಪ್ರಜಾವಾಣಿ’ಗೆ ಹೇಳಿದರು.

‘ಬಳಿಕ ರೋಗಿಗಳು ಸೇವಿಸುತ್ತಿದ್ದ ಔಷಧ ಹಾಗೂ ಅವು ಸಿಗುವ ಸ್ಥಳದ ಬಗ್ಗೆ ಮಾಹಿತಿ ಪಡೆದೆ. ನಂತರ ಧಾರವಾಡದ ಡಿಮಾನ್ಸ್ಗೆ ತೆರಳಿ ಅಗತ್ಯ ಔಷಧಗಳನ್ನು ಖರೀದಿಸಿಕೊಂಡು ಬಂದೆ. ಬಳಿಕ, ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ದಿನಪತ್ರಿಕೆ ಸಾಗಿಸುವ ವಾಹನದ ಮೂಲಕ, ರಾತ್ರಿ 2 ಗಂಟೆಗೆ ಲಕ್ಷ್ಮೇಶ್ವರಕ್ಕೆ ಔಷಧ ತಲುಪಿಸಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.