ಠಾಣೆ ಸ್ಥಳಾಂತರ ಕುರಿತು ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ. ತುರ್ತು ಕ್ರಮವಾಗಿ ನಾಲಾದಲ್ಲಿ ತುಂಬಿದ್ದ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ
ಕಟ್ಟಡ ತೆರವಿಗೆ ಸೂಚನೆ
‘ಕಮರಿಪೇಟೆ ಪೊಲೀಸ್ ಠಾಣೆ ರಾಜಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡದಲ್ಲಿ ಇರುವುದರಿಂದ ಅದು ಅಪಾಯದ ಸ್ಥಿತಿಯಲ್ಲಿದೆ. ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ತೆರವು ಮಾಡಬೇಕು’ ಎಂದು ಲೋಕಲೋಪಯೋಗಿ ಇಲಾಖೆ ಕಟ್ಟಡ ಸಾಮರ್ಥ್ಯದ ಕುರಿತು ಪರಿಶೀಲನಾ ವರದಿಯನ್ನು ಪೊಲೀಸ್ ಕಮಿಷನರ್ ಕಚೇರಿಗೆ ರವಾನಿಸಿದೆ. ಅದನ್ನು ಪೊಲೀಸ್ ಗೃಹ ಮಂಡಳಿಗೆ ರವಾನಿಸಲಾಗಿದ್ದು ಅಲ್ಲಿಂದ ಕಟ್ಟಡ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ‘ಕಟ್ಟಡ ತೆರವು ನಂತರ ತಾತ್ಕಾಲಿಕ ಠಾಣೆಗೆ ಅಲ್ಲಿಯೇ ಸಮೀಪವಿರುವ ಸಮುದಾಯ ಭವನ ಗುರುತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.