ಛಬ್ಬಿ, (ಹುಬ್ಬಳ್ಳಿ): ರಾಜ್ಯದಲ್ಲಿ ನಾವು ಕೋವಿಡ್ ನಡುವೆಯೂ ಬದುಕಬೇಕಿದೆ. ಹೀಗಾಗಿ ಸುರಕ್ಷತಾ ಅಂತರ ಕಾಪಾಡಿಕೊಂಡು ಹೋಗಬೇಕಿದೆ. ಲಾಕ್ ಡೌನ್ ಹಾಗೂ ಸೆಮಿ ಲಾಕ್ ಡೌನ್‌ನಯಾವುದೇಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಶನಿವಾರ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ಬೆಳಿಗ್ಗೆ ಹಿರೇಕೆರೆಯಲ್ಲಿ ವಾಯುವಿಹಾರ ಮಾಡುತ್ತಾ, ಉತ್ತರ ಕರ್ನಾಟಕದ ಜನರ ಸಂಭ್ರಮವೇ ನನ್ನ ಉತ್ಸಾಹ ಹೆಚ್ಚಿಸಿದೆ ಎಂದರು.

ಗ್ರಾಮದಲ್ಲಿ ಮೋಡಕವಿದ ವಾತಾವರಣವಿದ್ದು, ಮಲೆನಾಡಿದಂತೆ ಭಾಸವಾಗುತ್ತಿದೆ. ಇಲ್ಲಿನ ವಾತಾವರಣ ನೋಡಿದರೆ ಹುಬ್ಬಳ್ಳಿಯಲ್ಲಿ ಇದ್ದೇನೆ ಅನಿಸುವುದೇ ಇಲ್ಲ. ಅಧಿಕಾರಿಗಳು-ಜನರ ನಡುವಿನ ಕಂದಕ ಕಡಿಮೆ ಮಾಡುವುದು ಗ್ರಾಮ ವಾಸ್ತವ್ಯದ ಮೂಲ ಉದ್ದೇಶ ಎಂದು ಸಚಿವರು ತಿಳಿಸಿದರು.

ಅಧಿಕಾರಿಗಳು ಮನಸ್ಸು ಮಾಡಿ ಹಳ್ಳಿಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಉತ್ತರ ಕರ್ನಾಟಕದ ಜನ ನಮ್ಮನ್ನು ಎತ್ತಿಕೊಂಡು ಮೆರೆದಾಡುತ್ತಾರೆ. ಆದ್ದರಿಂದ ನಾವು ಜನರಿಗೆ ಆದಷ್ಟು ಹತ್ತಿರವಾಗಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಹತ್ತಿರ ಬರಬೇಕು. ಅದರಿಂದ ಹಳ್ಳಿಗಳ ಜನರಿಗೆ ನೆರವಾಗುತ್ತದೆ ಎಂದು ಸಚಿವ ಅಶೋಕ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.