ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ತಡಸಿನಕೊಪ್ಪ ಗ್ರಾಮದ ಗ್ಲೋಬಲ್ ಎಕ್ಸಲೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರುತಿ ಕುಲಾವಿ ಅವರ ಶುಲ್ಕ ₹ 21 ಸಾವಿರ ಭರಿಸಲು ಕ್ರಿಕೆಟಿಗ ಕೆ.ಎಲ್. ರಾಹುಲ್ ನೆರವಾಗಿದ್ದಾರೆ. ಶಾಲೆಯ ಬ್ಯಾಂಕ್ ಖಾತೆಗೆ ಶನಿವಾರ ಹಣ ಜಮೆಯಾಗಿದೆ.

ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರು ಅವರು ಈ ಹಿಂದೆ ವಿದ್ಯಾರ್ಥಿಯೊಬ್ಬನಿಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ರಾಹುಲ್ ಅವರಿಂದ ಆರ್ಥಿಕ ನೆರವು ಕೊಡಿಸಿದ್ದರು. ಅದನ್ನು ಅರಿತ ಶ್ರುತಿ ಕುಟುಂಬದವರು ಮಂಜುನಾಥ ಅವರನ್ನು ಸಂಪರ್ಕಿಸಿ, ನೆರವು ಕೋರಿದ್ದರು. ಮಂಜುನಾಥ್ ತಮ್ಮ ಸ್ನೇಹಿತನ ಮೂಲಕ ರಾಹುಲ್ ಅವರನ್ನು ಸಂಪರ್ಕಿಸಿ ನೆರವು ಕೊಡಿಸಿದ್ದಾರೆ.

ಶ್ರುತಿ ಅವರ ತಂದೆ ಹನುಮಂತಪ್ಪ ಕುಲಾವಿ ಕಿರಾಣಿ, ಡಬರಿ ಅಂಗಡಿ ನಡೆಸುತ್ತಾರೆ. ಸುಡುಗಾಡು ಸಿದ್ಧರ ಜನಾಂಗದ ಹನುಮಂತಪ್ಪ ಅವರಿಗೆ ಪುತ್ರ, ಮೂರು ಪುತ್ರಿಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.