ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಅಬ್ದುಲ್ ಘನಿ ಅವರಿಂದ ಹಣತೆಗಳ ವ್ಯಾಪಾರ
ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಶ್ರೀನಿವಾಸ ಗಂಡಿಕೋಟಾ ಅವರಿಂದ ಹಣತೆಗಳ ವ್ಯಾಪಾರ
ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿರುವ ವೈವಿಧ್ಯಮಯ ಪಣತಿಗಳು
ನನಗೆ ಮಣ್ಣಿನ ಹಣತೆಗಳೇ ಇಷ್ಟ. ಪ್ರತಿ ವರ್ಷ ನಾಲ್ಕಾದರೂ ಹೊಸ ಮಾದರಿಯವನ್ನು ಖರೀದಿಸಿ ದೀಪ ಬೆಳಗಿದರೆ ಖುಷಿ ಎನಿಸುತ್ತದೆ
– ಸುಮಿತ್ರಾ ಹಿರೇಮಠ ಹುಬ್ಬಳ್ಳಿಕುಂಬಾರರ ಅಳಲು
ಕುಂಬಾರ ಓಣಿಯೆಂದೇ ಖ್ಯಾತವಾದ ಬಮ್ಮಾಪುರ ಓಣಿಯಲ್ಲಿ ಮಾತ್ರ ಹಣತೆ ಮಾರಾಟದ ಭರಾಟೆ ಕಾಣಲಿಲ್ಲ. ಅಲ್ಲಿಯ ಕುಂಬಾರರೂ ಈಗ ಹೊರಗಿನಿಂದ ತರಿಸಿದ ಹಣತೆಗಳನ್ನೇ ಇಟ್ಟು ಮಾರುತ್ತಿದ್ದಾರೆ. ‘ಹಾವೇರಿ ಹತ್ತಿರದ ಬೀಸನಹಳ್ಳಿ ಹಾಗೂ ಯಳದಹಳ್ಳಿಯಿಂದ ಹಣತೆಗಳನ್ನು ತರಿಸುತ್ತಿದ್ದೇವೆ. ಅಗತ್ಯ ಪ್ರಮಾಣದ ಮಣ್ಣು ನೀರು ಹಾಗೂ ಇತರ ಸೌಲಭ್ಯಗಳು ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಈಗ ಹೊರಗಿನಿಂದ ಬಂದ ಪಿಂಗಾಣಿ ಪ್ಲಾಸ್ಟಿಕ್ ಸ್ಟೀಲ್‌ನ ಹಣತೆಗಳನ್ನೇ ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಹೀಗಾಗಿ ಹಣತೆ ಮಾಡುವುದನ್ನು ನಿಲ್ಲಿಸಿ 15 ವರ್ಷಗಳೇ ಕಳೆದಿವೆ’ ಎಂದು ಬಮ್ಮಾಪುರಓಣಿಯ ಬಸವಣ್ಣೆವ್ವ ಮಂಟೂರ್ ತಿಳಿಸಿದರು. ‘ಕುಂಬಾರಿಕೆಗೆ ಬೆಲೆ ಇಲ್ಲ. ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಹಣತೆ ತಯಾರು ಮಾಡುವುದು ನಿಲ್ಲಿಸಿ ಸ್ಥಳೀಯ ಮಾರುಕಟ್ಟೆಯಲ್ಲೇ ಕೊಂಡು ಮಾರುತ್ತೇವೆ’ ಎಂದು ವನಿತಾ ಕುಂಬಾರ್ ತಿಳಿಸಿದರು.
ಫೈಬರ್ ದೀಪಗಳ ಆಕರ್ಷಣೆ
ಬಣ್ಣಬಣ್ಣದ ಫೈಬರ್ ಹಣತೆಗಳೂ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ನೀರಿನಲ್ಲಿ ತೇಲುವ ಹಣತೆಯ ಮಾದರಿ ಸುತ್ತಲೂ ಬಣ್ಣಬಣ್ಣದ ಬೆಳಕು ಚೆಲ್ಲುವ ಫೈಬರ್ ದೀಪಗಳೂ ಉತ್ತಮ ಬೇಡಿಕೆ ಹೊಂದಿವೆ. ‘ಈ ಮೊದಲು ಆನ್‌ಲೈನ್‌ನಲ್ಲಿ ಹೆಚ್ಚು ಬೇಡಿಕೆ ಗಳಿಸಿದ ಇವು ಈ ವರ್ಷ ಬೀದಿಬದಿ ಅಂಗಡಿಗಳಿಗೂ ಕಾಲಿಟ್ಟಿವೆ’ ಎಂದು ವ್ಯಾಪಾರಿ ವಿನಾಯಕ ಕಬಾಡೆ ತಿಳಿಸಿದರು.