ಹುಬ್ಬಳ್ಳಿ: ಸಮೀಪದ ರಾಯಾಪುರದಲ್ಲಿರುವ ಎನ್ಜಿಇಎಫ್ (ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ) ಪೂರೈಸುವ ಅಶ್ವಶಕ್ತಿಯ ವಿದ್ಯುತ್ ಮೋಟರ್ ಮತ್ತು ಪರಿವರ್ತಕಗಳಿಗೆ ಭಾರಿ ಬೇಡಿಕೆ ಇದೆ. ಆದರೆ, ವಿವಿಧ ಸಮಸ್ಯೆಗಳಿಂದ ಹೆಚ್ಚಿನ ಪ್ರಮಾಣದ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ.

1988ರಲ್ಲಿ ಸ್ಥಾಪನೆಯಾದ ಸಂಸ್ಥೆಯ ಕಟ್ಟಡ ಹಳೆಯದಾಗಿದ್ದು, ಅಲ್ಲಲ್ಲಿ ಬಿರುಕುಬಿಟ್ಟಿದೆ. ಮಳೆ ಬಂದರೆ ಚಾವಣಿ ಸೋರುತ್ತದೆ. 60 ವರ್ಷದಷ್ಟು ಹಳೆಯದಾದ ಜರ್ಮನಿಯ ಯಂತ್ರೋಪಕರಣಗಳನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

‘ಸರ್ಕಾರವು 10 ಎಕರೆ ಜಾಗದಲ್ಲಿ ಆಡಳಿತ ಹಾಗೂ ಕಾರ್ಖಾನೆ ಕಟ್ಟಡ ಒದಗಿಸಿದೆ. ಉಳಿದೆಲ್ಲ ಖರ್ಚನ್ನು ಸಂಸ್ಥೆಯೇ ನಿಭಾಯಿಸಬೇಕಿದೆ. ಬೇರಾವುದೇ ವಿನಾಯ್ತಿ ಇಲ್ಲ. ಕಟ್ಟಡ, ಯಂತ್ರಗಳ ನಿರ್ವಹಣೆ ಜೊತೆಗೆ ನೌಕರರಿಗೆ ಸಂಬಳ, ನಿವೃತ್ತರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಸಹ ಸಂಸ್ಥೆಯ ಜವಾಬ್ದಾರಿಯಾಗಿದೆ. ಇಷ್ಟೆಲ್ಲದ್ದಕ್ಕೂ ವರ್ಷಕ್ಕೆ ₹200 ಕೋಟಿ ಬೇಕಾಗುತ್ತದೆ. ಆದರೆ, ಬಂಡವಾಳದ ಕೊರತೆ, ಆಧುನಿಕ ಯಂತ್ರೋಪಕರಣ ಇಲ್ಲದ ಕಾರಣ ಅಷ್ಟು ಪ್ರಮಾಣದಲ್ಲಿ ವಹಿವಾಟು ನಡೆಸಲಾಗುತ್ತಿಲ್ಲ’ ಎಂದು ಎನ್ಜಿಇಎಫ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎಚ್. ನರೇಗಲ್ ತಿಳಿಸಿದರು.

‘ರಾಜ್ಯದ ವಿದ್ಯುಚ್ಛಕ್ತಿ ತಯಾರಿಕಾ ಕಂಪನಿಗಳಿಗೆ ಪರಿವರ್ತಕ ಪೂರೈಕೆ ಗುತ್ತಿಗೆ ನೀಡುತ್ತಿದ್ದಾಗ ಉತ್ತಮ ವಹಿವಾಟು ನಡೆದಿತ್ತು. ಆದರೆ, ಬಂದ ಹಣವೆಲ್ಲ ನಷ್ಟಕ್ಕೆ ಸರಿದೂಗುತ್ತಿತ್ತು. ಮೂರು ವರ್ಷಗಳಿಂದ ಈ ಗುತ್ತಿಗೆಯನ್ನು ನಮಗೆ ಕೊಟ್ಟಿಲ್ಲ. ಆದರೂ, ಖಾಸಗಿ ಕಂಪನಿಗಳೊಂದಿಗೆ ಉತ್ತಮ ವಹಿವಾಟು ನಡೆಸಿದ್ದರಿಂದ ಕೆಲ ವರ್ಷಗಳಲ್ಲಿ ನಷ್ಟದ ಪ್ರಮಾಣ ಕ್ರಮೇಣ ಇಳಿಕೆಯಾಗಿದೆ’ ಎಂದು ಹೇಳಿದರು.

‘ಸಂಸ್ಥೆಯ ಪುನಃಶ್ಚೇತನಕ್ಕೆ ₹30 ಕೋಟಿ ಬಡ್ಡಿರಹಿತ ಸಾಲ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಟ್ಟಡ ದುರಸ್ತಿ, ಆಧುನಿಕ ಯಂತ್ರೋಪಕರಣ ಮೊದಲಾದ ವ್ಯವಸ್ಥೆ ಮಾಡಿದರೆ ಸಂಸ್ಥೆ ಇನ್ನಷ್ಟು ವರ್ಷಗಳವರೆಗೆ ಉಳಿಯುತ್ತದೆ. ಈ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಉತ್ಪಾದನೆ ಪ್ರಮಾಣ ಹೆಚ್ಚಿಸಿ, ಸರ್ಕಾರ ನೀಡಿದ ಹಣ ಹಿಂದಿರುಗಿಸಲಾಗುವುದು’ ಎಂದರು.

ಉಪ ಉತ್ಪನ್ನ ತಯಾರಿಕೆ: ‘ಸಂಸ್ಥೆಗೆ ಸೇರಿದ ಜಾಗದಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸ್ಮಾರ್ಟ್ ಮೀಟರ್ ಸೇರಿದಂತೆ ವಿದ್ಯುತ್ ಪೂರಕ ಎಲೆಕ್ಟ್ರಿಕಲ್ ವಸ್ತುಗಳ ತಯಾರಿಕಾ ಘಟಕ ನಿರ್ಮಿಸಲು ಪ್ರಸ್ತಾವ ಕಳುಹಿಸಲಾಗಿತ್ತು. ಅಗತ್ಯ ದಾಖಲೆ ಸಲ್ಲಿಸಲು ಸರ್ಕಾರ ಸೂಚಿಸಿದೆ. ಇದರಿಂದ ವರ್ಷಕ್ಕೆ ₹200–₹300 ಕೋಟಿ ವಹಿವಾಟು ಸಾಧ್ಯವಾಗಲಿದೆ’ ಎಂದು ವಿವರಿಸಿದರು.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸಂಸ್ಥೆಗೆ ಭೇಟಿ ನೀಡಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಈ ಬಗ್ಗೆ ತಜ್ಞರ ಸಮಿತಿ ರಚಿಸಿ ಕ್ರಮ ವಹಿಸಿದರೆ ಅನುಕೂಲ.
–ಎಸ್.ಎಚ್. ನರೇಗಲ್, ನಿರ್ದೇಶಕ ಎನ್ಜಿಇಎಫ್ ವ್ಯವಸ್ಥಾಪಕ

‘ಪ್ರಮುಖ ಕಂಪನಿಗಳೊಂದಿಗೆ ವಹಿವಾಟು’

‘ಕಂಪನಿಯರ ಉತ್ಪನ್ನಗಳನ್ನು 15–20 ವರ್ಷದವರೆಗೆ ನಿರ್ವಹಣೆ ಮಾಡುವ ಅಗತ್ಯವಿಲ್ಲ. ಇದಕ್ಕಾಗಿಯೇ ಭಾರಿ ಬೇಡಿಕೆ ಇದೆ. ರಾಯಘಡದ ಇಸ್ರೊ ಕೋಲ್ಕತ್ತದ ಭಾರತೀಯ ಫ್ಯಾನ್ ಕಾರ್ಪೊರೇಷನ್ ಹೈದರಾಬಾದ್ನ ಎಚ್ಎಂಟಿ ಮಷಿನ್ಸ್ ಟೂಲ್ಸ್ ಪುಣೆಯ ಪಿಎಂಟಿ ಮಷಿನ್ಸ್ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್ ಗುಜರಾತ್ ರೈಲ್ವೆ ಇಲಾಖೆ ಮೊದಲಾದ ಪ್ರಮುಖ ಕಂಪನಿಗಳೊಂದಿಗೆ ವಹಿವಾಟು ನಡೆಸಲಾಗಿದೆ’ ಎಂದು ಎಸ್.ಎಚ್. ನರೇಗಲ್ ಹೇಳಿದರು.

‘ಪಂಜಾಬಿನ ಭಟಿಂಡಾದಲ್ಲಿರುವ ಟ್ರೈಫೊ ಟೆಕ್ ಕಾರ್ಖಾನೆ ಮೂಲಕ ವಿದ್ಯುತ್ ಪರಿವರ್ತಕ ಉತ್ಪಾದನೆ ಮಾಡಿ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. ನೇಪಾಳ ಅಂಡಮಾನ್–ನಿಕೊಬಾರ್ ನೈಜೀರಿಯಾಕ್ಕೂ ಉತ್ಪನ್ನ ರಫ್ತು ಮಾಡಲಾಗಿದೆ. ಸಂಸತ್ಭವನಕ್ಕೆ 9 ಪರಿವರ್ತಕ ನೀಡಿದ ಬಳಿಕ ಗ್ರೇಟರ್ ನೊಯ್ಡಾ ವಿಮಾನ ನಿಲ್ದಾಣ ದಿಗ್ವಿಜಯ ಸಿಮೆಂಟ್ ಕರ್ನಾಟಕ ಭವನಕ್ಕೂ ಪೂರೈಸಲು ಬೇಡಿಕೆ ಬಂದಿದೆ. ಸದ್ಯ ₹30 ಕೋಟಿ ಮೊತ್ತದ ಉತ್ಪನ್ನಗಳ ಪೂರೈಕೆಗೆ ಬೇಡಿಕೆಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.