ಹುಬ್ಬಳ್ಳಿ: ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಹುಬ್ಬಳ್ಳಿಯ ಜೆಸಿ ನಗರದ ಲಕ್ಷ್ಮಿಸದನದಲ್ಲಿ ಮರೆತುಹೋದ ಆಹಾರಗಳ ಮೇಳ ಆಯೋಜಿಸಲಾಗಿದೆ.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೃಷ್ಣಮೂರ್ತಿ ಬಿಳಿಗೆರೆ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮೇಳಕ್ಕೆ ಚಾಲನೆ ನೀಡಿದರು.

ಜುಲೈ 16 ಮತ್ತು17 ರಂದು ಮೇಳ ನಡೆಯಲಿದೆ. ಮೇಳದಲ್ಲಿ 22 ಮಳಿಗೆಗಳನ್ನು ಹಾಕಲಾಗಿದೆ.

ಕಪ್ಪು ಸಾಮೆ, ಕೊರಲೆ ಅಕ್ಕಿ, ಬರಗು, ಊದಲು, ನವಣೆ, ಸಜ್ಜೆ, ಕಪ್ಪು ಹೆಸರು, ಹುರುಳಿ, ಸಾವೆ, ಗದ್ದೆ ಅವರೆ, ಚಂದ್ರ ನವಣೆ ಸೇರಿದಂತೆ ಇನ್ನಿತರ ಸಿರಿಧಾನ್ಯಗಳು ಮೇಳದಲ್ಲಿ ಲಭ್ಯ ಇವೆ.

ಸಿರಿಧಾನ್ಯಗಳಿಂದ ತಯಾರಿಸಿದ ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಉಂಡಿ ಸೇರಿದಂತೆ ಇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ತುಮಕೂರಿನ ಸಿದ್ದು ಹಲಸಿನ ಸಸಿಗಳು, ಹಣ್ಣಗಳು, ಹಲಸಿನ ಹಣ್ಣಿನ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ.

ಶನಿವಾರ ಸಂಜೆ ಮರೆತು ಹೋದ ಅಹಾರಗಳ ಅಡುಗೆ ಸ್ಪರ್ಧೆ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.