’ಉತ್ತಮ ಇಳುವರಿ ಪಡೆಯಲು ಅನುಕೂಲ‘
’ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಸಿಂಚಾಯಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಸೂಚನಾ ಫಲಕಗಳ ಮೇಲೆ ಮಾಹಿತಿ ಹಾಕಲಾಗಿದೆ. ಕೃಷಿ ಅಭಿಯಾನ ಸಭೆಗಳ ಮೂಲಕ ಯೋಜನೆ ಸದ್ಬಳಕೆ ಬಗ್ಗೆ ತಿಳಿಸಲಾಗುತ್ತಿದೆ‘ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ್ ಎಂ. ತಿಳಿಸಿದರು. ’ಉತ್ತಮ ಇಳುವರಿ ಪಡೆಯಲು ನೀರಿನ ಸದ್ಬಳಕೆ ಮಾಡಿಕೊಳ್ಳಲು ಕೃಷಿ ಸಿಂಚಾಯಿ ಯೋಜನೆ ಪೂರಕವಾಗಿದೆ. ಮಳೆ ಬಾರದಿದ್ದಾಗ ಹಲವು ರೈತರು ಬಿತ್ತನೆಗೂ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕದ ಸೌಲಭ್ಯ ಬಳಸಿಕೊಂಡು ಉತ್ತಮ ಬೆಳೆ ಪಡೆದಿದ್ದಾರೆ. ಹಲವರ ಕೃಷಿ ಭೂಮಿಗೆ ಭೇಟಿ ನೀಡಿ ಸಕಾಲಕ್ಕೆ ಬೆಳೆ ಬೆಳೆಯುವ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದೇವೆ‘ ಎಂದು ಅವರು ತಿಳಿಸಿದರು.