ಹುಬ್ಬಳ್ಳಿ: ರಾಮಜನ್ಮ ಭೂಮಿ ತೀರ್ಪಿನ ದಿನಾಂಕ ಸಮೀಪದಲ್ಲೇ ಇರುವುದರಿಂದ ದೇಶದಲ್ಲಿ ಗಲಭೆ ಸೃಷ್ಟಿಸಲಾಗುತ್ತಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಸ್ಫೋಟವು ಅದರ ಭಾಗವಾಗಿದೆ ಎಂಬ ಸಂಶಯವಿದೆ. ಆದ್ಸರಿಂದ ಪ್ರಕರಣವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟದ ಹಿಂದೆ ಬಹುದೊಡ್ಡ ಜಾಲವಿದೆ ಎಂದರು. ಬಾಂಗ್ಲಾದ ಅಕ್ರಮ ನುಸುಳಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಿಖೆಯ ನಾಟಕ ನಿಲ್ಲಿಸಬೇಕು. ಇಲ್ಲವೇ, ಶ್ರೀರಾಮ ಸೇನೆ ಅವರನ್ನು ಒದ್ದು ಹೊರಹಾಕಬೇಕೋ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿ ಯಲ್ಲಿರುವ ಮದರಸಾಗಳನ್ನು ಬ್ಯಾನ್ ಮಾಡಬೇಕು. ಭಟ್ಕಳ ದಲ್ಲಿ ನಡೆಯುವ ಉಗ್ರ ಚಟುವಟಿಕೆಗಳನ್ನು ಮಟ್ಟಹಾಕಬೇಕು. ಜಗನ್ನಾಥ ಶೆಟ್ಡಿ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಾವರ್ಕರ್ ಅವರಿಗೆ ಭಾರತರತ್ನ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿರುವುದು ಸರಿಯಾಗಿದೆ. ಆದರೆ, ಅದನ್ನು ಚುನಾವಣೆಯ ಸಮಯದಲ್ಲಿ ಹೇಳಿರುವುದು ಸರಿಯಲ್ಲ. ಕಾಂಗ್ರೆಸ್ ನವರಿಗೆ ಮಹಾತ್ಮ ಗಾಂಧಿ, ನೆಹರೂ, ಇಂದಿರಾ ಗಾಂಧಿ ಮಾತ್ರ ಕಾಣುತ್ತಾರೆ. ರಾಜೀವ್ ಗಾಂಧಿಗೆ ಯಾವ ಅರ್ಹತೆ ಮೇಲೆ ನೀಡಿದಿರಿ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.