ಅದ್ದೂರಿ ಕನ್ನಡ ಹಬ್ಬ ಆಚರಿಸುವ ಕೆಂಎಸಿಆರ್‌ಐ (ಕಿಮ್ಸ್) ವೈದ್ಯಕೀಯ ವಿದ್ಯಾರ್ಥಿಗಳು
ಮಹಮ್ಮದ್ ಶರೀಫ್ ಕಾಡುಮಠ
Published : 1 ನವೆಂಬರ್ 2024, 6:59 IST
Last Updated : 1 ನವೆಂಬರ್ 2024, 6:59 IST
ಫಾಲೋ ಮಾಡಿ
Comments
ಕನ್ನಡ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಸಭಾಂಗಣದ ಹೊರಗಡೆ ಅಲಂಕಾರ ಮಾಡಿರುವುದು
ಕೆಂಎಸಿಆರ್‌ಐ ಕನ್ನಡ ಸಂಘದ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆಯಾಗಿದೆ. ಮಾತೃಭಾಷೆಯ ಬೆಗಗಿನ ಅಭಿಮಾನ ಇದ್ದಾಗ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಸಿಬ್ಬಂದಿ ವಿದ್ಯಾರ್ಥಿಗಳ ಶ್ರಮ ಇದರ ಹಿಂದಿದೆ
ಡಾ.ಎಸ್.ಎಫ್.ಕಮ್ಮಾರ ನಿರ್ದೇಶಕ ಕೆಂಎಸಿಆರ್‌ಐ.
ಕನ್ನಡ ಮಾತನಾಡುವವರ ಸಂಖ್ಯೆ ನಮ್ಮ ನಾಡಿನಲ್ಲಿ ಕ್ಷೀಣಿಸುತ್ತಿರುವುದು ಬೇಸರದ ಸಂಗತಿ. ಹುಬ್ಬಳ್ಳಿಯಲ್ಲಿ ಹೋಟೆಲ್‌ಗಳಿಗೆ ಕಾಲಿಟ್ಟರೆ ಸಾಕು ನಮ್ಮವರೇ ಹಿಂದಿಯಲ್ಲಿ ಮಾತು ಶುರು ಮಾಡುತ್ತಾರೆ. ಇಂತಹ ಸ್ಥಿತಿಯ ನಡುವೆ ನಮ್ಮ ಕಾರ್ಯಕ್ರಮದ ಕನ್ನಡ ಉಳಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಖುಷಿಯಿದೆ
–ಡಾ.ಶ್ಯಾಮಸುಂದರ್ ಅಧ್ಯಕ್ಷ ಕೆಂಎಸಿಆರ್‌ಐ ಕನ್ನಡ ಸಂಘ
‘ಹೊರರಾಜ್ಯದವರ ಒಳಗೊಳ್ಳುವಿಕೆ’
ಕನ್ನಡ ಹಬ್ಬದ ವಿಶೇಷ ಎಂದರೆ ಈ ಕಾರ್ಯಕ್ರಮದಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಡೀ ಸಂಸ್ಥೆ ಹಬ್ಬದಂತೆ ಆಚರಿಸುವುದರಿಂದ ದೆಹಲಿ ರಾಜಸ್ತಾನ ಮಧ್ಯಪ್ರದೇಶ ಕೇರಳ ಮುಂತಾದ ರಾಜ್ಯಗಳ ವಿದ್ಯಾರ್ಥಿಗಳನ್ನು ಒಳಗೊಂಡು ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಪರಭಾಷಿಕರಿಗಾಗಿ ಆಯೋಜಿಸುವ ‘ನೀನ್ ಎಷ್ಟು ಕನ್ನಡವ ಬಲ್ಲೆ?’ ಎಂಬ ಸ್ಪರ್ಧೆ ಇಲ್ಲಿನ ಇನ್ನೊಂದು ವಿಶೇಷ.