ಹುಬ್ಬಳ್ಳಿ: 2022-23 ಸಾಲಿನಲ್ಲಿ ನೈರುತ್ಯ ರೈಲ್ವೆ ₹8,071 ಕೋಟಿ ಆದಾಯ ಗಳಿಸಿದೆ. ಹುಬ್ಬಳ್ಳಿಯಲ್ಲಿ 2003ರಲ್ಲಿ ರೈಲ್ವೆಯು ಆರಂಭವಾದ ನಂತರ ಮೊದಲ ಬಾರಿಗೆ ಆದಾಯದ ಮೊತ್ತ ₹8 ಸಾವಿರದ ಗಡಿ ದಾಟಿದೆ.

ಆದಾಯದ ಪೈಕಿ ಪ್ರಯಾಣಿಕರಿಂದ ₹2,756 ಕೋಟಿ, ಸರಕು ಸಾಗಣೆಯಿಂದ ₹4,696 ಕೋಟಿ, ವಿವಿಧ ಮೂಲಗಳಿಂದ ₹348 ಕೋಟಿ ಮತ್ತು ಕೋಚ್ಗಳ ನಿರ್ಮಾಣ ಸೇರಿದಂತೆ ಇತರ ಮೂಲಗಳಿಂದ ₹271 ಕೋಟಿ ಸಂಗ್ರಹವಾಗಿದೆ. 2021-22ನೇ ಸಾಲಿಗೆ ಹೋಲಿಸಿದರೆ, ಈ ಸಲದ ಆದಾಯ ಶೇ 30ಕ್ಕಿಂತ ಹೆಚ್ಚಾಗಿದೆ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಒಂದು ವರ್ಷದಲ್ಲಿ ಒಟ್ಟು ₹15 ಕೋಟಿ ಮಂದಿ ಪ್ರಯಾಣ ಮಾಡಿದ್ದಾರೆ. ಇದು ಸಹ 20 ವರ್ಷಗಳಲ್ಲೇ ಅತ್ಯಧಿಕ. 3,506 ಪಾರ್ಸೆಲ್ ವ್ಯಾನ್ಗಳನ್ನು ಗುತ್ತಿಗೆ ನೀಡಲಾಗಿದೆ. ಅದರಲ್ಲಿ 82,200 ಟನ್ ಅಗತ್ಯ ವಸ್ತುಗಳ ಸರಕು ಸಾಗಣೆ ಮಾಡಿ ₹57 ಕೋಟಿ ಆದಾಯ ಗಳಿಸಲಾಗಿದೆ. 170 ಪಾರ್ಸೆಲ್ ಕಾರ್ಗೋ ಎಕ್ಸ್ಪ್ರೆಸ್ ರೈಲುಗಳನ್ನು ಗುತ್ತಿಗೆ ನೀಡಿದ್ದು, ಅದರಿಂದ ₹28 ಕೋಟಿ ಆದಾಯ ಬಂದಿದೆ' ಎಂದು ಹೇಳಿದ್ದಾರೆ.

'ಈ ಸಾಲಿನಲ್ಲಿ ರೈಲ್ವೆಯು 4.77 ಕೋಟಿ ಟನ್ ಸರಕು ಸಾಗಣೆ ಮಾಡಿದೆ. ಆಟೋಮೊಬೈಲ್ ಉದ್ಯಮಿಗಳಿಗೆ ರೈಲ್ವೆಯು ವಿಶ್ವಾಸಾರ್ಹ ಸಾರಿಗೆಯಾಗಿದೆ. ಈ ವರ್ಷ 509 ಬೋಗಿಗಳಲ್ಲಿ ಆಟೋಮೊಬೈಲ್ ವಸ್ತುಗಳನ್ನು ಸಾಗಿಸಲಾಗಿದೆ. 2.05 ಮೆಟ್ರಿಕ್ ಟನ್ ಖನಿಜ ತೈಲ, 1.07 ಮೆಟ್ರಿಕ್ ಟನ್ ಸಿಮೆಂಟ್ ಹಾಗೂ 1.45 ಮೆಟ್ರಿಕ್ ಟನ್ ಸಕ್ಕರೆಯನ್ನು ನೈರುತ್ಯ ರೈಲ್ವೆ ಸಾಗಿಸಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.