ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗೆದ್ದರೆ ಚಿಂತಕರ ಹತ್ಯೆ ಸಾಧ್ಯತೆ: ಸಿದ್ದನಗೌಡ ಪಾಟೀಲ ಕಳವಳ

Published 4 ಮೇ 2024, 23:01 IST
Last Updated 4 ಮೇ 2024, 23:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ವಿಚಾರವಾದಿಗಳ ಹತ್ಯೆ ಇನ್ನಷ್ಟು ಹೆಚ್ಚುವ ಸಾದ್ಯತೆ ಇದೆ’ ಎಂದು ಚಿಂತಕ ಸಿದ್ದನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.

‘ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌, ಪನ್ಸಾರೆ ಮುಂತಾದ ವಿಚಾರವಾದಿಗಳ ಹತ್ಯೆಯ ಹಿಂದಿನ ಶಕ್ತಿ ಯಾರು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕೊಂದ ವ್ಯಕ್ತಿ ಯಾರು ಎಂಬುದಷ್ಟೇ ತಿಳಿಯಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಾಡಿನ ಚಿಂತಕರು ಮತ್ತು ನಿರ್ಭೀತ ಪತ್ರಕರ್ತರಿಗೆ ಅಪಾಯವಾಗಲಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿ ರಾಜಕೀಯ ಪಕ್ಷ ಅಲ್ಲ. ಆರ್‌ಎಸ್‌ಎಸ್‌ ಹೇಳಿದ್ದನ್ನು ಜಾರಿಗೆ ತರುವುದಷ್ಟೇ ನಮ್ಮ ಕೆಲಸ ಎಂದು ಸ್ವತಃ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಈಚೆಗೆ ಹೇಳಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ಕೊಡಬೇಡಿ. ಅದು ಗುಪ್ತ ಕಾರ್ಯತಂತ್ರ ಎಂದು ಬಿಜೆಪಿ ನಾಯಕರಿಗೆ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ ಸೂಚಿಸಿದ್ದಾರೆ. ಇಂತಹ ಬೆಳವಣಿಗೆಗಳ ಬಗ್ಗೆ ಎಚ್ಚರದಿಂದಿರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT