ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ, ಕಾರು ಚಾಲನೆ ಮಾಡುವ 18 ವರ್ಷದ ಒಳಗಿನವರ ಸಂಖ್ಯೆ ಹೆಚ್ಚುತ್ತಿದೆ. ಎರಡೂವರೆ ವರ್ಷದ ಅವಧಿಯಲ್ಲಿ ಮಕ್ಕಳು ವಾಹನ ಚಾಲನೆ ಮಾಡಿದ ಒಟ್ಟು 79 ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರ ಪೋಷಕ–ವಾಹನದ ಮಾಲೀಕರಿಗೆ ನೋಟಿಸ್ ನೀಡಿ, ₹7.44 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಹುಬ್ಬಳ್ಳಿಯ ಮೂರು, ಧಾರವಾಡದ ಒಂದು ಸಂಚಾರ ಠಾಣೆಗಳಲ್ಲಿ 2022ರಲ್ಲಿ 5, 2023ರಲ್ಲಿ 17 ಮಕ್ಕಳು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದಿದ್ದರು. 2024ರ ಜೂನ್ ತಿಂಗಳ ಅವಧಿಯೊಳಗೇ ಅವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಅದರ ಹೊರತಾಗಿ ಒಟ್ಟು 22 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೋಷಕರು ಕೋರ್ಟ್ನಲ್ಲಿ ದಂಡ ಪಾವತಿಸಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಮತ್ತು ಧಾರವಾಡದ ಪ್ರಮುಖ ವೃತ್ತ ಹಾಗೂ ಮುಖ್ಯ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಠಾಣೆ ಪೊಲೀಸರಿಗೆ, ಶಾಲಾ–ಕಾಲೇಜುಗಳಿಗೆ ತೆರಳುವ ಹಾಗೂ ಬಿಡುವಿನ ವೇಳೆಯಲ್ಲಿ ಅಪ್ರಾಪ್ತ ವಾಹನ ಚಾಲಕರನ್ನು ಹಿಡಿಯುವುದೇ ದೊಡ್ಡ ಸವಾಲಾಗಿದೆ. ಹುಬ್ಬಳ್ಳಿಯ ಕೇಶ್ವಾಪುರ, ವಿದ್ಯಾನಗರ, ಗೋಕುಲರಸ್ತೆ ಹಾಗೂ ಧಾರವಾಡದ ವಿದ್ಯಾಗಿರಿ, ಮಾಳಮಡ್ಡಿ, ಕೆಸಿಡಿ ಕಾಲೇಜು ಸುತ್ತಮುತ್ತ ಅಪ್ರಾಪ್ತರ ವಾಹನ ಚಾಲನೆ ಹೆಚ್ಚಾಗಿದೆ. ಸಿಗ್ನಲ್ ಸ್ಥಳದಲ್ಲಿ ಪೊಲೀಸರು ಸುಗಮ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಾಗ ಮಕ್ಕಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ.

‘ಮಕ್ಕಳ ವಾಹನ ಚಾಲನೆಗೆ ಪೋಷಕರೇ ಪ್ರಮುಖ ಕಾರಣ. ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ಓದುವ ತಮ್ಮ ಮಕ್ಕಳಿಗೆ ಶಾಲಾ-ಕಾಲೇಜು ಮತ್ತು ತರಬೇತಿ ತರಗತಿಗಳಿಗೆ ತೆರಳಲು ಬೈಕ್, ಸ್ಕೂಟರ್ಗಳನ್ನು ನೀಡುತ್ತಾರೆ. ವಾಹನ ಸಿಕ್ಕ ಸಂಭ್ರಮದಲ್ಲಿ ಮಕ್ಕಳು ಅತಿ ವೇಗ ಮತ್ತು ನಿರ್ಲಕ್ಷ್ಯ ಚಾಲನೆಯಿಂದ ಅಪಘಾತಕ್ಕೆ ಕಾರಣರಾಗುತ್ತಾರೆ. ಅವರು ವಾಹನ ಚಾಲನೆಯಿಂದ, ತಮ್ಮ ಪ್ರಾಣದ ಜೊತೆಗೆ ಇತರರ ಪ್ರಾಣಕ್ಕೂ ಕಂಟಕರಾಗುತ್ತಾರೆ’ ಎಂದು ಪೊಲೀಸರು ತಿಳಿಸಿದರು.

‘ಇತ್ತೀಚೆಗೆ ಕೊಡುಗಿನ ಶನಿವಾರಸಂತೆಯಲ್ಲಿ ಬಾಲಕನೊಬ್ಬ ಸ್ಕೂಟರ್ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ. ತಾಯಿಯನ್ನು ಜೈಲಿಗೆ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಪುಣೆಯಲ್ಲಿ ಬಾಲಕನೊಬ್ಬ ಐಶಾರಾಮಿ ಕಾರನ್ನು ವೇಗವಾಗಿ ಚಲಾಯಿಸಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಟೆಕಿಗಳ ಸಾವಿಗೆ ಕಾರಣನಾಗಿದ್ದ. ಪ್ರಕರಣ ತನಿಖಾ ಹಂತದಲ್ಲಿದೆ’ ಎಂದು ಅವರು ಹೇಳಿದರು.

‘ಪ್ರೌಢಶಾಲೆ ಸೇರಿದಂತೆ ಪಿಯು ಕಾಲೇಜುಗಳ ಬಳಿ ನಿರಂತರ ತಪಾಸಣೆ ನಡೆಸುವ ಮೂಲಕ ಅಪ್ರಾಪ್ತರ ವಾಹನ ಚಾಲನೆಗೆ ಕಡಿವಾಣ ಹಾಕಲಾಗುವುದು. 18 ವರ್ಷವಾಗುವವರೆಗೂ ಮಕ್ಕಳಿಗೆ ವಾಹನ ನೀಡಬೇಡಿ ಎಂದು ತಿಳಿವಳಿಕೆ ಹೇಳಿ, ಅದರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗೂ ಸೂಚನೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಹೀಗಿದೆ ಶಿಕ್ಷೆ ಪ್ರಮಾಣ...

ಅಪ್ರಾಪ್ತರ ವಾಹನ ಚಾಲನೆ ಕಡಿವಾಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಅಪ್ರಾಪ್ತರು ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದರೆ ವಾಹನದ ಮಾಲೀಕರು/ಪೋಷಕರು ತೊಂದರೆಗೊಳಗಾಗಲಿದ್ದಾರೆ. ಮಾಲೀಕರಿಗೆ ₹25 ಸಾವಿರ ದಂಡ ಸ್ವಯಂಚಾಲಿತವಾಗಿ ವಾಹನ ಪರವಾನಗಿ ರದ್ದು ಹಾಗೂ ಮೂರು ವರ್ಷ ಜೈಲು ಶಿಕ್ಷೆಯನ್ನು ಸಹ ಅನುಭವಿಸಬೇಕಾಗಬಹುದು.

‘ಅಪ್ರಾಪ್ತರು ವಾಹನ ಚಾಲನೆ ಮಾಡದಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಎಚ್ಚರಿಕೆ ನೀಡಲಾಗಿದೆ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯಾದ ಬಳಿಕ ದಂಡದ ಮೊತ್ತ ಏರಿಕೆಯಾಗಿದೆ. ಅಪ್ರಾಪ್ತರ ಜೊತೆ ವಾಹನದ ಮಾಲೀಕರ ವಿರುದ್ಧವೇ ಪ್ರಕರಣ ದಾಖಲಿಸಲಾಗುತ್ತದೆ. ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು’ ಎನ್ನುತ್ತಾರೆ ಕಮಿಷನರ್ ರೇಣುಕಾ ಸುಕುಮಾರ್.

ಮಕ್ಕಳಿಗೆ ವಾಹನ ಕೊಡುವುದರಿಂದ ಪೋಷಕರು ಸಂಚಾರ ನಿಯಮ ಉಲ್ಲಂಘನೆಗೆ ಪರೋಕ್ಷವಾಗಿ ಪ್ರೇರೇಪಿಸುತ್ತಾರೆ. ಅದಕ್ಕಾಗಿ ಅವರನ್ನೇ ಅಪರಾಧಿಯನ್ನಾಗಿ ಮಾಡಿ ಶಿಕ್ಷೆ ವಿಧಿಸಲಾಗುತ್ತದೆ.
-ವಿನೋದ ಮುಕ್ತೇದಾರ್, ಎಸಿಪಿ ಉತ್ತರ ಸಂಚಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.