ಲಕ್ಷ್ಮೇಶ್ವರ (ಗದಗ ಜಿಲ್ಲೆ): ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಏ.28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮಾವೇಶದ ಮೈದಾನದ ಬಳಿ ಸಮೀರ್ ಹಸನ್ಸಾಬ್ ಎಂಬ ತಂಪು ಪಾನೀಯ ಮಾರಾಟದ ವ್ಯಾಪಾರಿಯೊಬ್ಬರ ವಾಹನದ ಮೇಲೆ ಮುಗಿಬಿದ್ದು ಜನರು ಪಾನೀಯಗಳನ್ನು ಕುಡಿದಿದ್ದರು.

ಇದರಿಂದ ವ್ಯಾಪಾರಿಯು ತನಗೆ ಸುಮಾರು ₹35 ಸಾವಿರದಷ್ಟು ನಷ್ಟವಾಗಿದೆ ಎಂದು ಕಣ್ಣೀರಿಟ್ಟಿದ್ದ. ಆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಬಾಯಾರಿಕೆಯಿಂದ ಬೇಸತ್ತಿದ್ದರು. ಆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೇ ನೀರಿನ ಬಾಟಲ್ ಮತ್ತು ತಂಪು ಪಾನೀಯಗಳನ್ನು ಕಳಿಸಿದ್ದಾರೆಂದು ತಪ್ಪು ತಿಳಿದು ಅವರ ವಾಹನದಿಂದ ನೀರು, ಜ್ಯೂಸ್, ತಂಪು ಪಾನೀಯದ ಬಾಟಲ್ಗಳನ್ನು ಕಿತ್ತುಕೊಂಡಿದ್ದರು ಎನ್ನಲಾಗಿದೆ.

ಈ ವಿಷಯ ತಿಳಿದ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರು ವ್ಯಾಪಾರಿ ಸಮೀರ್ ಹಸನ್ಸಾಬ್ ಅವರಿಗೆ ₹35 ಸಾವಿರವನ್ನು ಆನ್ಲೈನ್ ಮೂಲಕ ಹಣ ಸಂದಾಯ ಮಾಡಿ ನಷ್ಟ ಭರಿಸಿದ್ದಾರೆ. ಅಲ್ಲದೆ ಘಟನೆಗೆ ಅವರು ವಿಷಾದವನ್ನೂ ವ್ಯಕ್ತಪಡಿಸಿ ತಮ್ಮ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. ಪ್ರತಾಪ್ ಸಿಂಹ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.