ಬಸ್ ನಿಲ್ದಾಣದ ಒಳಗಡೆ ಪ್ರವೇಶ ದ್ವಾರದ ಬಳಿ ಹಣ್ಣು ಹೂಗಳನ್ನು ಮಾರುತ್ತಿರುವ ವ್ಯಾಪಾರಸ್ಥರು
ರೋಣ ಬಸ್ ನಿಲ್ದಾಣದಲ್ಲಿಯ ಜನಜಂಗುಳಿ
ಪಾಳು ಬಿದ್ದಿರುವ ಹಳೆಯ ಬಸ್ ಡಿಪೊ
ರೋಣ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಕೊಳವೆಗಳು ಇರುವ ಸ್ಥಳ ಮಲಿನವಾಗಿದೆ
ರೋಣ ಬಸ್ ನಿಲ್ದಾಣದ ಆವರಣದಲ್ಲಿ ನಿಂತಿರುವ ತ್ಯಾಜ್ಯ ನೀರು
ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಿ ರೋಣ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದ್ದು ತಾಲ್ಲೂಕಿನ ಅಭಿವೃದ್ಧಿಯ ವೇಗ ಹೆಚ್ಚಿಸಲು ರೋಣ ನಗರದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು
-ಅಬ್ದುಲ್ ಸಾಬ್, ಹೊಸಮನಿ ಹಿರಿಯ ಸಾಮಾಜಿಕ ಕಾರ್ಯಕರ್ತರೋಣ ಬಸ್ ನಿಲ್ದಾಣ 24/7 ಕಾರ್ಯ ನಿರ್ವಹಿಸಲಿ ರೋಣ ನಗರದ ಅಭಿವೃದ್ಧಿಗೆ ಸುಸಜ್ಜಿತ ಮತ್ತು ಸಮರ್ಪಕ ಸಂಚಾರ ವ್ಯವಸ್ಥೆ ಅಗತ್ಯವಾಗಿ ಬೇಕಿದ್ದು ದೇಶದ ಅತ್ಯುನ್ನತ ಸಾರಿಗೆ ವ್ಯವಸ್ಥೆ ಎಂದು ಹೆಸರು ಪಡೆದ ಕೆಎಸ್ಆರ್‌ಟಿಸಿ ನಗರದ ಬಸ್ ನಿಲ್ದಾಣವನ್ನು 24/7 ಬಸ್ ನಿಲ್ದಾಣವನ್ನಾಗಿ ಘೋಷಿಸಿ ನಿಲ್ದಾಣಕ್ಕೆ ಮೂಲಸೌಲಭ್ಯ ಕಲ್ಪಿಸಬೇಕು
-ವೆಂಕಣ್ಣ ಬಂಗಾರಿ, ರೋಣ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾತ್ರಿ ವೇಳೆ ಬಸ್‌ಗಳ ಸಂಖ್ಯೆ ಹೆಚ್ಚಿಸಿ ರೋಣ ಬಸ್ ನಿಲ್ದಾಣ ಜಿಲ್ಲೆಯ ಪ್ರಮುಖ ನಿಲ್ದಾಣಗಳ ಪೈಕಿ ಒಂದಾಗಿದ್ದು ರಾತ್ರಿ 9ರ ನಂತರ ಜಿಲ್ಲಾ ಕೇಂದ್ರವಾದ ಗದಗ ನಗರದಿಂದ ಬಸ್ ವ್ಯವಸ್ಥೆ ಇಲ್ಲ. ಈ ಕಾರಣದಿಂದಾಗಿ ಫಸಲು ಮಾರಾಟ ಮಾಡಲು ಗದಗ ಎಪಿಎಂಸಿಗೆ ತೆರಳುವ ತಾಲ್ಲೂಕಿನ ಬಹುತೇಕ ರೈತರಿಗೆ ತೀವ್ರ ತೊಂದರೆಯಾಗಿದೆ. ರಾತ್ರಿ ವೇಳೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು
-ದೊಡ್ಡಬಸಪ್ಪ ನವಲಗುಂದ, ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ರೋಣ ತಾಲ್ಲೂಕು