ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರುದಾರರಿಗೆ ಶೇ 12ರಷ್ಟು ಲಾಭಾಂಶ ವಿತರಣೆ

ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಭೆ
Published : 21 ಸೆಪ್ಟೆಂಬರ್ 2024, 16:30 IST
Last Updated : 21 ಸೆಪ್ಟೆಂಬರ್ 2024, 16:30 IST
ಫಾಲೋ ಮಾಡಿ
Comments

ಗದಗ: ‘ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಪೂರಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಗರದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಪ್ರಸಕ್ತ ವರ್ಷ ₹40.40 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 12ರಷ್ಟು ಲಾಭಾಂಶ ನೀಡಲಿದೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಎಂ.ಪಲ್ಲೇದ ಹೇಳಿದರು.

ನಗರದ ಉಷಾದೇವಿ ಗೋವಿಂದರಾಜ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್‌ ಸೆಂಟರ್‌ನಲ್ಲಿ ಶನಿವಾರ ನಡೆದ  ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ವರದಿ ವರ್ಷದಲ್ಲಿ ₹112.52 ಕೋಟಿ ವಹಿವಾಟು ನಡೆಸಿದ್ದು, ಕಳೆದ ಸಾಲಿನ ಅಂತ್ಯಕ್ಕೆ ದುಡಿಯುವ ಬಂಡವಾಳ ₹28.62 ಕೋಟಿಗಳಿದ್ದು ವರದಿ ವರ್ಷದ ಅಂತ್ಯಕ್ಕೆ ₹30.70 ಕೋಟಿಗಳಷ್ಟಾಗಿದೆ ಎಂದರು.

ನಿರ್ದೇಶಕರು ಮತ್ತು ಆಡಳಿತ ಸಿಬ್ಬಂದಿಯವರು ಕಟ್ಟುನಿಟ್ಟಿನ ಕ್ರಮ, ದಕ್ಷ ಮತ್ತು ಪ್ರಾಮಾಣಿಕ ಕಾರ್ಯಗಳಿಂದಾಗಿ ಸಂಘವು ಸಾರ್ವನಿಕರ ವಿಶ್ವಾಸದೊಂದಿಗೆ ಪ್ರಗತಿಯಲ್ಲಿ ಮುನ್ನಡೆದಿದೆ ಎಂದರು.

ಸಂಘದ ಅಧ್ಯಕ್ಷ ವಿ.ಎಸ್.ಶಿವಕಾಳಿಮಠ ಮಾತನಾಡಿ, ಠೇವಣಿದಾರರು, ಷೇರುದಾರರ ಅಪಾರವಾದ ವಿಶ್ವಾಸದೊಂದಿಗೆ ಸಂಘವು 10 ವರ್ಷದ ತನ್ನ ಸೇವೆಯ ಅವಧಿಯಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಜನಮುಖಿ, ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ. ರಕ್ತದಾನ, ನೇತ್ರದಾನ, ಶಾಲಾ ಮಕ್ಕಳಿಗೆ ನೋಟ್‍ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ, ಬೀದಿಬದಿ ವ್ಯಾಪಾರಸ್ಥರಿಗೆ ಮತ್ತು ಹಿರಿಯ ನಾಗರಿಕರಿಗೆ ಸಹಾಯ, 300ಕ್ಕೂ ಹೆಚ್ಚು ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಅವಕಾಶ ಸೃಷ್ಟಿ ಮಾಡಲಾಗಿದೆ ಎಂದರು.

ಗಾಯಕಿ ಸಂಗೀತಾ ಭರಮಗೌಡ್ರ ಪ್ರಾರ್ಥಿಸಿದರು. ಬಿ.ಎಂ.ಹಳ್ಳಿಕೇರಿ ಸ್ವಾಗತಿಸಿದರು. ಟಿ.ವಿ.ಸಂಶಿ, ಜಗದೀಶ ಹುಡೇದ 2024-25ನೇ ಅಂದಾಜು ಆಯ-ವ್ಯಯ ಪತ್ರಿಕೆ ಮಂಡಿಸಿದರು. ಎಸ್.ಎಂ.ಸರ್ವಿ ಲಾಭ ವಿಂಗಡಣೆ ವಿವರಿಸಿದರು. ಬಸವರಾಜ ಹಳ್ಳಿಕೇರಿ ನಿರೂಪಿಸಿದರು. ಮಲ್ಲು ಬಡಿಗೇರ ವಂದಿಸಿದರು.

ಲೆಕ್ಕಪರಿಶೋಧಕ ಕೆ.ಎಸ್.ಚಟ್ಟಿ, ನಿರ್ದೇಶಕ ಮಹೇಶ ಗಾಣಿಗೇರ, ಎಂ.ಬಿ.ಲಿಂಗದಾಳ, ಪ್ರಶಾಂತ ದೇಸಾಯಿಮಠ, ಗಿರಿಯಪ್ಪ ಗಾಣಿಗೇರ, ಕಳಕಪ್ಪ ನಾಗರಾಳ, ಸುರೇಶ ಸರ್ವಿ, ಗೀತಾ ಪಲ್ಲೇದ, ಸರೋಜಾ ಲಿಂಗದಾಳ, ಶೋಭಾ ಶಿವಕಾಳಿಮಠ, ಕವಿತಾ ದೇಸಾಯಿಮಠ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT