ಲಕ್ಷ್ಮೇಶ್ವರ: ಸೈಕಲ್ ಪ್ರವಾಸ ಮಾಡಿ ಗಿನ್ನಿಸ್ ದಾಖಲೆ ಮಾಡಲು ಹೊರಟಿರುವ ಕೊಯಮತ್ತೂರಿನ ಮುತ್ತು ಸೆಲ್ವಂ ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಪುರಸಭೆ ವತಿಯಿಂದ ಸನ್ಮಾನಿಸಲಾಯಿತು.

ಪ್ರವಾಸದ ಕುರಿತು ಮಾತನಾಡಿದ ಮುತ್ತು ಸೆಲ್ವಂ, ‘ಸೈಕಲ್ ಪ್ರವಾಸ 1,111 ದಿನ ಪೂರೈಸಿದೆ. 2021ರ ಡಿಸೆಂಬರ್ 21ರಂದು ಪ್ರಾರಂಭಿಸಿ 2025ರ ಜನವರಿ 5ರಂದು ಮಕ್ತಾಯಗೊಳಿಸಲು ನಿರ್ಧರಿಸಿದ್ದೇನೆ. ಈವರೆಗೆ 19 ಸಾವಿರಕ್ಕೂ ಹೆಚ್ಚು ಕಿ.ಮೀ. ದೂರ ಕ್ರಮಿಸಿದ್ದೇನೆ. ನನ್ನ ಉದ್ದೇಶಿತ ಪ್ರವಾಸದ ದೂರ 36,300 ಕಿ.ಮೀ. 34 ರಾಜ್ಯಗಳು, 733 ಜಿಲ್ಲೆಗಳಿಗೆ ಭೇಟಿ ನೀಡಿ ಗಿನ್ನಿಸ್ ದಾಖಲೆ ಮಾಡುವ ಗುರಿ ಹೊಂದಿದ್ದೇನೆ’ ಎಂದರು.

‘ಪುನೀತ್‍ರಾಜ್ ಅಭಿಮಾನಿಯಾಗಿರುವ ಸೆಲ್ವಂ ಅವರು ಬೆಂಗಳೂರಿನಲ್ಲಿ ಅಶ್ವಿನಿ ಪುನಿತ್ ಅವರನ್ನು ಭೇಟಿ ಮಾಡಿ ಪ್ರವಾಸದ ಉದ್ದೇಶ ತಿಳಿಸಿದಾಗ ಪ್ರವಾಸ ಸಮಯದಲ್ಲಿ ಸಹಾಯವಾಗಲಿ ಎಂದು ಪುನಿತ್‍ರಾಜ್‍ಕುಮಾರ ಧರಿಸುತ್ತಿದ್ದ ಕೂಲಿಂಗ್ ಗ್ಲಾಸ್ ಕೊಡುಗೆಯಾಗಿ ನೀಡಿದ್ದು, ಅದು ನನ್ನ ಪ್ರವಾಸವನ್ನು ತಂಪಾಗಿಸುತ್ತಿದೆ’ ಎಂದರು.

‘ಪ್ರವಾಸ ಸಮಯದಲ್ಲಿ ನನ್ನ ಅಡುಗೆಯನ್ನು ನಾನೇ ಸಿದ್ಧಪಡಿಸಿಕೊಳ್ಳುತ್ತೇನೆ. ಪ್ರವಾಸದಲ್ಲಿ ಕರ್ನಾಟಕ ಮತ್ತು ಪಂಜಾಬ್ ಪೊಲೀಸರು ನನಗೆ ಸಹಾಯ ಸಹಕಾರ ನೀಡಿದ್ದನ್ನು ಮರೆಯಲಾರೆ’ ಎಂದರು.

ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹಾಗೂ ಸದಸ್ಯರಾದ ಪ್ರವೀಣ ಬಾಳಿಕಾಯಿ, ವಾಣಿ ನೀಲಪ್ಪ ಹತ್ತಿ, ಅಶ್ವಿನಿ ಶಿವಯೋಗಿ ಅಂಕಲಕೋಟಿ, ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶಿವಣ್ಣ ಮ್ಯಾಗೇರಿ, ಹನಮಂತಪ್ಪ ನಂದೆಣ್ಣವರ, ಬಸವಣ್ಣೆಪ್ಪ ನಂದೆಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.