ಹಾಸನ: 6ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯದಾದ್ಯಂತ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಹಾಸನದಲ್ಲಿ260ಕ್ಕೂ ಹೆಚ್ಚುಮಂದಿ ನಿರ್ವಾಹಕರು ಮತ್ತು ಚಾಲಕರು ಕರ್ತವ್ಯಕ್ಕೆ ಹಾಜರಾದರು.

ಮುಷ್ಕರದ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಸಂಸ್ಥೆಬಸ್ಗಳುಬುಧವಾರ ರಸ್ತೆಗೆ ಇಳಿದಿವೆ. ಹಾಸನ ಬಸ್ ನಿಲ್ದಾಣದಿಂದ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸಂಜೆ ವೇಳೆಗೆ 130ಕ್ಕೂ ಹೆಚ್ಚು ಬಸ್ಗಳು ಸಂಚಾರ ನಡೆಸಿದವು.

ನೌಕರರು ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿದ್ದು, ಸಾಕಷ್ಟು ಮಾರ್ಗಗಳಲ್ಲಿ ಬಸ್ಗಳ ಸಂಚಾರ ಆರಂಭಿಸಲಾಗಿದೆ. ಸಾಲು ಸಾಲು ಸರ್ಕಾರಿ ರಜೆ ಮುಗಿಸಿ ನಗರಗಳಿಗೆ ಮರಳುವವರಿಗೆ ಸಾಕಷ್ಟು ಅನುಕೂಲ ವಾಗಿದೆ ಎಂದು ನಿಲ್ದಾಣ ಮೇಲ್ವಿಚಾರಕ ಮಂಜುನಾಥ್ ಹೇಳಿದರು.

ಕೆಲವು ಮಾರ್ಗಗಳಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ಬಸ್ಗಳ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ಸಾರಿಗೆ ಸಂಸ್ಥೆ ಬಸ್ ಗಳ ಜೊತೆಗೆ ಖಾಸಗಿ ಬಸ್ ಗಳು ಸಂಚಾರವೂ ಇತ್ತು.

ನಗರದ ಎನ್.ವೃತ್ತದ ಬಳಿ ಬಿ.ಎಂ. ರಸ್ತೆಯಲ್ಲಿ ಹಾಗೂ ನಗರ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳು ಸಾಲುಗಟ್ಟಿ ನಿಂತಿದ್ದವು. ಹೊರ ಜಿಲ್ಲೆಗಳಿಂದಲೂ ಹಾಸನಕ್ಕೆ ಖಾಸಗಿ ಬಸ್ಗಳು ಹಾಗೂ ಟಿ.ಟಿ ವಾಹನಗಳು ಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.