ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಕೊರತೆ: ಶುಂಠಿ ಬೆಳೆಗೆ ಬೆಂಕಿ ರೋಗ, ಬೆಲೆ ಇದ್ದರೂ ರೈತರಿಗೆ ನಷ್ಟ

Published : 5 ಡಿಸೆಂಬರ್ 2023, 6:09 IST
Last Updated : 5 ಡಿಸೆಂಬರ್ 2023, 6:09 IST
ಫಾಲೋ ಮಾಡಿ
Comments
ರೋಗ ಬಾಧೆಯಿಂದ ಹಳೇಬೀಡು ಸುತ್ತ ಅವಧಿಗೆ ಮೊದಲೇ ಶುಂಠಿ ಕಟಾವು ನಡೆಯುತ್ತಿದೆ
ರೋಗ ಬಾಧೆಯಿಂದ ಹಳೇಬೀಡು ಸುತ್ತ ಅವಧಿಗೆ ಮೊದಲೇ ಶುಂಠಿ ಕಟಾವು ನಡೆಯುತ್ತಿದೆ
3–4 ತಿಂಗಳು ಮೊದಲೇ ಶುಂಠಿ ಕಟಾವು ಮಾಡುತ್ತಿರುವ ರೈತರು ರೋಗದಿಂದ ಗಡ್ಡೆಯ ಗುಣಮಟ್ಟದ ಬೆಳವಣಿಗೆಗೆ ತೊಡಕು ಒಂದು ಎಕರೆ ಶುಂಠಿ ಬೆಳೆಯಲು ತಗಲುವ ವೆಚ್ಚ ₹5 ಲಕ್ಷ
ಈ ವರ್ಷ ಮಳೆ ಇಲ್ಲದೆ ಅಧಿಕ ಉಷ್ಣಾಂಶದಿಂದ ವಿವಿಧ ಬೆಳೆಗಳು ಸೊರಗುತ್ತಿವೆ. ಸಮ ವಾತಾವರಣ ಇಲ್ಲದೆ ಶುಂಠಿ ಸೊರಗುವುದು ಸಾಮಾನ್ಯವಾಗಿದೆ
ಬಾಲಚಂದ್ರ ರೈತ ಜಿ.ಸಾಣೇನಹಳ್ಳಿ
ರೋಗದ ಕುರಿತು ಪರಿಶೀಲಿಸಲು ಸಹಾಯಕ ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆಯಲ್ಲಿ ರೋಗ ಕಾಣಿಸಿಕೊಂಡಾಗ ರೈತರು ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ
ಸೀಮಾ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ
ಫಲವತ್ತಾದ ಜಮೀನಿನಲ್ಲಿ ಶುಂಠಿಗೆ ಬೆಂಕಿ ರೋಗ ಕಾಣಿಸಿಕೊಳ್ಳುವುದಿಲ್ಲ. ಎತ್ತರ ಪ್ರದೇಶದ ಕಲ್ಲು ಮಣ್ಣಿನ ಜಮೀನಿನಲ್ಲಿ ರೋಗ ಬಾಧಿಸುತ್ತಿದೆ. ಜಮೀನಿನ ಆಯ್ಕೆ ಮುಖ್ಯವಾದ ಕೆಲಸ
ಶಿವರಾಜ್ ಗೌರಿಕೊಪ್ಪಲು ಶುಂಠಿ ಜಮೀನು ಗುತ್ತಿಗೆದಾರ
ಶುಂಠಿ ದುಬಾರಿ ವೆಚ್ಚದ ಬೆಳೆ
ಗುತ್ತಿಗೆ ಜಮೀನಿನಲ್ಲಿ ಒಂದು ಎಕರೆ ಶುಂಠಿ ಬೆಳೆಯಲು ₹ 5 ಲಕ್ಷ ವೆಚ್ಚವಾಗುತ್ತದೆ. ಸ್ವಂತ ಜಮೀನಿನಲ್ಲಿ ಬೆಳೆ ಮಾಡುವವರಿಗೆ ಗುತ್ತಿಗೆ ಬಾಬತ್ತು ಒಂದು ಎಕರೆಗೆ ₹ 55ಸಾವಿರ ನೀರಿನ ವೆಚ್ಚ ₹ 40ಸಾವಿರ ಉಳಿಯುತ್ತದೆ. ಒಂದು ವರ್ಷ ಮುಗಿಯುವುದರೊಳಗೆ 5ರಿಂದ 6 ಬಾರಿ ರಸಗೊಬ್ಬರ ಹಾಕಬೇಕು. 7ರಿಂದ 8 ಸಲ ಔಷಧ ಸಿಂಪಡಣೆ ಮಾಡಬೇಕು. ಆಗಾಗ್ಗೆ ಕಳೆ ತೆಗೆಯುತ್ತಿರಬೇಕು. ನೀರು ಹರಿಸಿದಾಗ ಬಿತ್ತನೆ ಮಾಡಿದ ಮಣ್ಣು ಜರುಗಿದರೆ ಸರಿಪಡಿಸುತ್ತಿರಬೇಕು. ಬಿತ್ತನೆಯಿಂದ ಕಟಾವಿನವರೆಗೂ ಕೂಲಿ ಕಾರ್ಮಿಕರ ಅವಲಂಬನೆ ಇಲ್ಲದೇ ಶುಂಠಿ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಶುಂಠಿ ಬೆಳೆಗಾರರು.
ರೋಗ ನಿಯಂತ್ರಣಕ್ಕೆ ಸಲಹೆ
ಶುಂಠಿ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿರುವ ಕುರಿತು ರೈತರಿಂದ ಮಾಹಿತಿ ಬಂದಿಲ್ಲ. ಶುಂಠಿ ಬೆಳೆಗೆ ಭಾರೀ ಪ್ರಮಾಣದಲ್ಲಿ ಬೆಂಕಿ ರೋಗ ತಗುಲಿರುವುದು ಕಂಡು ಬಂದಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಜಮೀನುಗಳ ಸುತ್ತಾಟ ನಡೆಸುವ ಸಂದರ್ಭದಲ್ಲಿ ನಾವಾಗಿಯೇ ರೈತರಿಗೆ ಕೆಲವು ರೋಗ ನಿಯಂತ್ರಣಕ್ಕೆ ಕೈಗೊಳ್ಳುವ ಮಾಹಿತಿ ಕೊಟ್ಟಿದ್ದೇವೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸದಾನಂದ ಕುಂಬಾರ ತಿಳಿಸಿದ್ದಾರೆ. ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದ ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿತ್ತು. ಬೆಳೆಗೆ ಬಿಟ್ಟ ನೀರು ಹೆಚ್ಚಾಗಿ ಹರಿದಾಡಿದಾಗಲೂ ಕೊಳೆ ರೋಗ ಹರಡುತ್ತದೆ. ಗೆಡ್ಡೆ ಮೃದು ಕೊಳೆ ರೋಗ ನಿಯಂತ್ರಣಕ್ಕೆ ರೈತರಿಗೆ ಮಾಹಿತಿ ನೀಡಲಾಗಿದೆ. ಬೆಳೆ ಹೆಚ್ಚಾಗಿರುವುದರಿಂದಲೂ ರೈತರು ಶುಂಠಿ ಕಟಾವು ಮಾಡಿ ಮಾರಾಟ ಮಾಡುತ್ತಿರಬಹುದು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT