ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅ.24 ರಿಂದ ಹಾಸನಾಂಬ ದರ್ಶನೋತ್ಸವ ಆರಂಭ: ದೇವಿಯ ದರ್ಶನಕ್ಕೆ ಕಾದಿರುವ ಭಕ್ತಗಣ

Published : 21 ಅಕ್ಟೋಬರ್ 2024, 7:52 IST
Last Updated : 21 ಅಕ್ಟೋಬರ್ 2024, 7:52 IST
ಫಾಲೋ ಮಾಡಿ
Comments
ಹಾಸನದ ಹಾಸನಾಂಬ ದೇಗುಲದ ಒಳ ಆವರಣ.
ಹಾಸನದ ಹಾಸನಾಂಬ ದೇಗುಲದ ಒಳ ಆವರಣ.
ಸುಲಲಿತ ದರ್ಶನಕ್ಕೆ ಹಾಸನಾಂಬ ಆ್ಯಪ್‌ ಬಿಡುಗಡೆ ವೆಬ್‌ಸೈಟ್‌ ಮೂಲಕ ಜಾತ್ರೆಯ ಅಗತ್ಯ ಮಾಹಿತಿ ರವಾನೆ ದೇವಿಯ ದರ್ಶನದ ವೇಳೆ ಭಕ್ತರಿಗೆ ಸೌಕರ್ಯ ಒದಗಿಸಲು ಆದ್ಯತೆ
ಹೆಚ್ಚಿನ ದರ್ಶನಕ್ಕೆ ಆದ್ಯತೆ
ಧಾರ್ಮಿಕ ವಿಧಿ ವಿಧಾನಕ್ಕೆ ಧಕ್ಕೆ ಆಗದಂತೆ ಪೂಜಾ ಸಮಯ ಕಡಿತ ಮಾಡಲು ಅರ್ಚಕರನ್ನು ಕೋರಲಾಗುವುದು. ನಿತ್ಯ ಎರಡು ಗಂಟೆ ಉಳಿದರೂ 18 ಗಂಟೆ ಹೆಚ್ಚುವರಿ ಸಮಯ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಿದಂತಾಗುತ್ತದೆ. ಕೊನೆಯ ದಿನ ಕೆಲಕಾಲ ಸ್ಥಳೀಯ ಹಾಗೂ ಇತರೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಕೆ.ಎನ್‌. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ 9 ದಿನ 24 ಗಂಟೆ ದರ್ಶನ ಅ.24 ಮತ್ತು ನ.3 ರಂದು ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳಲ್ಲೂ 24 ಗಂಟೆ ದೇವಿ ದರ್ಶನಕ್ಕೆ ಅವಕಾಶ ಇರುತ್ತದೆ. ಸಿ.ಸತ್ಯಭಾಮಾ ಜಿಲ್ಲಾಧಿಕಾರಿ ಅಚ್ಚುಕಟ್ಟಾಗಿ ಜಾತ್ರೆ ಕಳೆದ ಬಾರಿಯ ಅನಾನುಕೂಲತೆ ಸರಿಪಡಿಸಲು ಸಭೆ ಕರೆಯಲಾಗಿತ್ತು. ಈ ಬಾರಿ ದೊಡ್ಡ ಮಟ್ಟದಲ್ಲಿ ಜಾತ್ರೆ ಆಯೋಜನೆಗೆ ಸಿದ್ಧತೆ ಕೈಗೊಳ್ಳುತ್ತಿದ್ದು ಅಚ್ಚುಕಟ್ಟಾಗಿ ಆಯೋಜನೆಗೆ ನಿರ್ಧರಿಸಲಾಗಿದೆ. ಸ್ವರೂಪ್ ಪ್ರಕಾಶ್ ಶಾಸಕ ಅದ್ಧೂರಿ ಜಾತ್ರೆಗೆ ಅಗತ್ಯ ಸಹಕಾರ ಅದ್ದೂರಿ ಜಾತ್ರಾ ಮಹೋತ್ಸವ ನಡೆಸಲಾಗುವುದು. ಯಾವುದೇ ಲೋಪ ಆಗದಂತೆ ಮನರಂಜನೆ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ನಡೆಸಲು ನಮ್ಮ ಸಹಕಾರವೂ ಇರಲಿದೆ. ಶ್ರೇಯಸ್ ಪಟೇಲ್‌ ಸಂಸದ ಮೂಲಸೌಕರ್ಯ ಹೆಚ್ಚಿಸಿ ಪ್ರತಿ ವರ್ಷ ವಿಜೃಂಭಣೆಯಿಂದ ಹಾಸನಾಂಬ ಜಾತ್ರೆ ನಡೆಯುತ್ತಿದ್ದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ದೇವಸ್ಥಾನದ ಸುತ್ತ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಮೂಲ ಸೌಕರ್ಯದ ಕಡೆ ಮತ್ತಷ್ಟು ಕ್ರಮ ಕೈಗೊಳ್ಳಬೇಕು. ಪಾಂಡು ಪಿ.ಎಸ್. ಖಾಸಗಿ ಉದ್ಯೋಗಿ ಚನ್ನರಾಯಪಟ್ಟಣ ಸ್ಥಳೀಯರಿಗೆ ಸುಲಭ ದರ್ಶನ ಅಗತ್ಯ ಪ್ರತಿ ವರ್ಷ ಸ್ಥಳೀಯರಿಗೆ ಹಾಸನಾಂಬ ದರ್ಶನ ಸುಲಭವಾಗಿ ಸಿಗುತ್ತಿಲ್ಲ. ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಉಮೇಶ್ ಕೆ.ಕೆ. ಹಾಸನದ ನಿವಾಸಿ ಮಧ್ಯದಲ್ಲಿ ದರ್ಶನ ಬಂದ್ ಮಾಡಬೇಡಿ ಬರುವ ಜನರಿಗೆ ನಿರಂತರ ದರ್ಶನ ವ್ಯವಸ್ಥೆ ಇದ್ದರೆ ಗೊಂದಲ ಆಗುವುದಿಲ್ಲ. ಅರ್ಧಗಂಟೆ ಮುಕ್ಕಾಲು ಗಂಟೆ ಬಂದ್ ಮಾಡುವುದರಿಂದ ಸಮಸ್ಯೆ ಎದುರಾಗುತ್ತಿದೆ. ಮಧ್ಯದಲ್ಲಿ ದರ್ಶನವನ್ನು ಬಂದ್‌ ಮಾಡಬಾರದು. ಶ್ರೀಧರ್ ಚನ್ನರಾಯಪಟ್ಟಣದ ಪದವಿ ವಿದ್ಯಾರ್ಥಿ
100 ಮೀಟರ್‌ಗೆ ಒಂದು ಕೌಂಟರ್‌
ಈಗಾಗಲೇ ಅಧಿಕಾರಿಗಳು ಸಿಬ್ಬಂದಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಪ್ರತಿ 100 ಮೀಟರ್‌ಗೆ ಒಂದು ಮ್ಯಾನೇಜ್‌ಮೆಂಟ್ ಕೌಂಟರ್ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ದೇಗುಲದ ಆಡಳಿತಾಧಿಕಾರಿ ಮಾರುತಿ ತಿಳಿಸಿದ್ದಾರೆ. ಭಕ್ತಾದಿಗಳನ್ನು ಸರಿಯಾಗಿ ಕಳುಹಿಸುವುದು ಇವರ ಕೆಲಸ. ಪ್ರತಿ ಕೇಂದ್ರಕ್ಕೂ ಇಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ವೀಕ್ಷಣೆ ಮಾಡಲು ಅಧಿಕಾರಿಗಳ ನೇಮಕ ಮಾಡಲಾಗಿದೆ. ಇಲ್ಲಿ ಏನೇ ತೊಂದರೆಯಾದರೂ ವಾಕಿಟಾಕಿ ಮತ್ತು ಸಿಸಿಟಿವಿ ಕ್ಯಾಮೆರಾದಲ್ಲೂ ಮಾತನಾಡಬಹುದು. ಒಟ್ಟಿನಲ್ಲಿ ಈ ವರ್ಷವೂ ಹಾಸನಾಂಬೆ-ಸಿದ್ದೇಶ್ವರ ಸ್ವಾಮಿ ಉತ್ಸವ ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT