ಹಾಸನ: ವಿಐಪಿ ಪಾಸ್ ಹಿಡಿದು ಬರುತ್ತಿದ್ದವರು ಈಗ ಸಾಮಾನ್ಯ ಸರದಿಯಲ್ಲಿ ನಿಂತು ದರ್ಶನ ಪಡೆಯಬೇಕಾಗಿದೆ. ಜೊತೆಗೆ ಶುಕ್ರವಾರ ಹಾಸನಾಂಬ ದೇವಿ ದರ್ಶನಕ್ಕೆ ಬರುವ ಗಣ್ಯರ ಸಂಖ್ಯೆಯೂ ಕಡಿಮೆಯಾಗಿದ್ದು, ಸಾಮಾನ್ಯ ಸರದಿಯಲ್ಲಿ ನಿಂತಿದ್ದ ಜನರೂ ಸುಗಮ ದರ್ಶನ ಪಡೆಯುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಹಾಸನಾಂಬ ದೇವಿಯ ದರ್ಶನಕ್ಕೆ ಇನ್ನು ಒಂದೇ ದಿನ ಬಾಕಿ ಉಳಿದಿದ್ದು, ದೀಪಾವಳಿ ರಜೆಗಳು ಆರಂಭವಾಗಿರುವುದರಿಂದ ಶುಕ್ರವಾರವೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಲಕ್ಷಾಂತರ ಜನರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಗುರುವಾರ ಪರಿಸ್ಥಿತಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ವಿಐಪಿ ಪಾಸ್ಗಳನ್ನು ರದ್ದುಗೊಳಿಸಿದ್ದು, ಜನರ ಸಂಖ್ಯೆ ತುಸು ಕಡಿಮೆಯಾಗಿದೆ. ವಿಐಪಿ ಪಾಸ್ಗಳನ್ನು ಹಿಡಿದು ಬರುತ್ತಿದ್ದ ಜನರು, ಇದೀಗ ವಿಶೇಷ ದರ್ಶನದ ಟಿಕೆಟ್ ಇಲ್ಲವೇ, ಸಾಮಾನ್ಯ ಸರದಿಯಲ್ಲಿ ನಿಲ್ಲಬೇಕಾಗಿದೆ.

ಬೆಳಿಗ್ಗೆಯಿಂದಲೇ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಸಾಮಾನ್ಯ ಸರದಿ ಸಾಲಿನ ಮೂಲಕ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ₹300 ಹಾಗೂ ₹1 ಸಾವಿರ ವಿಶೇಷ ದರ್ಶನದ ಟಿಕೆಟ್ಗಳ ಮಾರಾಟ ಪುನರಾರಂಭವಾಗಿದ್ದು, ಈ ಮೂಲಕವೂ ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಗಣ್ಯಾತಿ ಗಣ್ಯರ ವಿಶೇಷ ದರ್ಶನದ ಪಾಸ್ ರದ್ದು ಮಾಡಿದ್ದರಿಂದ ನೂಕುನುಗ್ಗಲು, ಗೊಂದಲ, ಘರ್ಷಣೆಗಳು ತಹಬದಿಗೆ ಬಂದಿವೆ. ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಮುಖ ದ್ವಾರದಲ್ಲಿ ನಿಂತು ಸುಗಮ ದರ್ಶನಕ್ಕೆ ಕ್ರಮ ಕೈಗೊಂಡಿದ್ದಾರೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಸ್ಥಳದಲ್ಲಿದ್ದು, ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವಿಐಪಿ ಪಾಸ್ಗಳನ್ನು ರದ್ದು ಮಾಡಿರುವುದರಿಂದ ಸಾಮಾನ್ಯ ದರ್ಶನದ ಸಾಲಿನಲ್ಲಿ ಸಾವಿರಾರು ಭಕ್ತರು ನಿರಾಯಾಸವಾಗಿ ಸಾಗುತ್ತ, ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ದರ್ಶನ ಪಡೆಯುತ್ತಿದ್ದಾರೆ. ಗಲಿಬಿಲಿ ಇಲ್ಲದಂತೆ ದರ್ಶನ ನಡೆಯುತ್ತಿದ್ದು, ಎಲ್ಲಾ ಭಕ್ತರು ದರ್ಶನ ಪಡೆದು ಸಂತಸದಿಂದ ಹೊರ ಬರುತ್ತಿದ್ದಾರೆ.

ಗುರುವಾರದ ಗೊಂದಲಗಳು ಘರ್ಷಣೆಗಳು, ಮರುಕಳಿಸದಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಸೂಚನೆ ನೀಡುತ್ತಿದ್ದಾರೆ .

ಟಿಕೆಟ್ ಮಾರಾಟ ಪುನಾರಾರಂಭ: ಗುರುವಾರದ ಗೊಂದಲದ ನಂತರ ರದ್ದು ಮಾಡಲಾಗಿದ್ದ ವಿಶೇಷ ದರ್ಶನದ ಟಿಕೆಟ್ಗಳ ಕೌಂಟರ್ಗಳನ್ನು ಆರಂಭಿಸಲಾಗಿದೆ. ವಿವಿಧ ರಾಜ್ಯಗಳು, ವಿದೇಶಗಳಿಂದಲೂ ಈಗಾಗಲೇ ಆನ್ಲೈನ್ನಲ್ಲಿ ವಿಶೇಷ ದರ್ಶನದ ಟಿಕೆಟ್ ಬುಕ್ ಮಾಡಲಾಗಿದ್ದು, ಲಕ್ಷಾಂತರ ಹಣ ಖರ್ಚು ಮಾಡಿ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದಾರೆ. ಹಾಗಾಗಿ ಟಿಕೆಟ್ಗಳ ಮೂಲಕ ದರ್ಶನ ಕಲ್ಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

1 ನೇ ಗೇಟ್ನಲ್ಲಿ ₹1 ಸಾವಿರ, ದೇವಾಲಯದ ಹಿಂಭಾಗದಲ್ಲಿ ₹300 ಮೊತ್ತದ ಟಿಕೆಟ್ ಮಾರಾಟ ಪ್ರಾರಂಭ ಮಾಡಲಾಗಿದೆ. ವಿವಿಐಪಿ, ವಿಐಪಿ ಪಾಸ್ಗಳಿಗೆ ಮಾತ್ರ ನಿರ್ಬಂಧಿಸಲಾಗಿದೆ.

ಮತ್ತೆ ದರ್ಶನ ಪಡೆದ ಸೂರಜ್ ರೇವಣ್ಣ: ಸಾರ್ವಜನಿಕ ದರ್ಶನದ ಮೊದಲ ದಿನ ಹಾಸನಾಂಬ ದೇವಿ ದರ್ಶನ ಪಡೆದಿದ್ದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಎರಡನೇ ಬಾರಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.

ಗೃಹಸಚಿವರ ಸೂಚನೆ: ಎಸ್ಪಿಗಳ ನಿಯೋಜನೆ

ಗುರುವಾರ ಹಾಸನಾಂಬ ದೇವಿಯ ದರ್ಶನ ಪಡೆದಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗೊಂದಲಗಳಿಗೆ ಆಸ್ಪದ ಇಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಲು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಅವರಿಗೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೆ ಅಕ್ಕಪಕ್ಕದ ಜಿಲ್ಲೆಗಳ ಎಸ್ಪಿಗಳನ್ನು ಕರೆಸಿಕೊಂಡಿರುವ ಬೋರಲಿಂಗಯ್ಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮಂಡ್ಯ ಹಾಗೂ ಕೊಡಗು ಎಸ್ಪಿಗಳು ಮೂರು ದಿನಗಳಿಂದ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಜೊತೆಗೆ ಚಿಕ್ಕಮಗಳೂರು ಉಡುಪಿ ಮೈಸೂರು ಎಸ್ಪಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಲೆಕ್ಕವಿಲ್ಲದಷ್ಟು ವಿಐಪಿ ಪಾಸ್ಗಳನ್ನು ಮುದ್ರಿಸಿ ಹಂಚಿರುವುದರಿಂದಲೇ ಈ ರೀತಿಯ ಗೊಂದಲ ಉಂಟಾಗಿದೆ ಎಂಬ ಆಕ್ರೋಶ ಜಿಲ್ಲೆಯಾದ್ಯಂತ ವ್ಯಕ್ತವಾಗಿತ್ತು. ಇದನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಗೃಹ ಸಚಿವ ಡಾ.ಪರಮೇಶ್ವರ್ ಅವರ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ರವಾನಿಸಿದ್ದರು. ಅದರಂತೆ ಜಿಲ್ಲಾಡಳಿತ ವಿಐಪಿ ಪಾಸ್ ರದ್ದುಗೊಳಿಸಿತ್ತು.

ಪಂಚ ಗ್ಯಾರಂಟಿ ಪಂಕ್ಚರ್: ಸಿ.ಟಿ. ರವಿ

ಹಾಸನ: ಉಪ ಚುನಾವಣೆಯಲ್ಲಿ ಜನಾಭಿಪ್ರಾಯ ಸರ್ಕಾರದ ಪರವಾಗಿಲ್ಲ. ಪಂಚ ಗ್ಯಾರಂಟಿ ಪಂಕ್ಚರ್ ಆಗಿದೆ. ಅವರು ನೀಡಿದ ಆಶ್ವಾಸನೆಯಂತೆ ಗ್ಯಾರಂಟಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು. ಹಾಸನಾಂಬೆಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವಕರಿಗೆ ₹3ಸಾವಿರ ಸಹಾಯ ಬರುತ್ತಿಲ್ಲ. ಬದಲಿಗೆ ಮೂರು ನಾಮ ಹಾಕಿದ್ದಾರೆ. ಪ್ರತಿ ಕುಟುಂಬಕ್ಕೆ ₹2 ಸಾವಿರ ಸಮರ್ಪಕವಾಗಿ ತಲುಪುತ್ತಿಲ್ಲ. ಈ ನಡುವೆ 25 ಲಕ್ಷ ಬಿಪಿಎಲ್ ಕಾರ್ಡ್ ಕಡಿತಕ್ಕೆ ಮುಂದಾಗುವ ಸುದ್ದಿ ಇದೆ ಎಂದರು. ವಿದ್ಯುತ್ 200 ಯುನಿಟ್ ಉಚಿತ ಎಂದರು. ಅದರಲ್ಲೂ ಹಲವು ಕಡೆ ದುಪ್ಪಟ್ಟು ಬಿಲ್ ಹಾಕುತ್ತಿದ್ದಾರೆ. ಶಕ್ತಿ ಯೋಜನೆ ನಿಶ್ಯಕ್ತಿಯಾಗಿದೆ ಎಂದು ಡಿಸಿಎಂ ಶಿವಕುಮಾರ್ ಅವರೇ ಹೇಳಿದ್ದಾರೆ. 10 ಕೆ.ಜಿ. ಅಕ್ಕಿಯೂ ಇಲ್ಲ. ಅಕ್ಕಿ ಬದಲು ಹಣ ಕೊಡುವುದಾಗಿ ಹೇಳಿದ್ದರೂ ಅದೂ ಇಲ್ಲ. ಈ ಬಗ್ಗೆ ಅವರ ಸರ್ಕಾರದ ಮಂತ್ರಿಗಳೇ ಅಸಮಾಧಾನ ತೋಡಿಕೊಂಡಿದ್ದಾರೆ ಎಂದರು. ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಆಡಳಿತ ಪಕ್ಷ ಸೋಲಬೇಕು. ಹಣ ಅಧಿಕಾರ ಬಲ ಕಾಂಗ್ರೆಸ್ ಸರ್ಕಾರದ ಪರ ಇದೆ. ಆದರೆ ಎನ್ಡಿಎ ಪರ ಜನ ಬಲವಿದೆ. ಹಣ ಬಲ ಸೋಲಬೇಕು ಸೋಲುವ ವಿಶ್ವಾಸವಿದೆ ಎಂದರು.

ಕಾರು ಡಿಕ್ಕಿ: ತಂದೆ–ಮಗಳ ಸಾವು

ಹಾಸನ: ಹಾಸನಾಂಬೆ ದೇವಿ ದರ್ಶನ ಮುಗಿಸಿ ರಸ್ತೆ ಬದಿಯಲ್ಲಿ ನಗರದ ತಣ್ಣೀರಹಳ್ಳದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂದೇ ಕುಟುಂಬದ ಮೂವರಿಗೆ ಕಾರು ಡಿಕ್ಕಿ ಹೊಡೆದಿದ್ದು ತಂದೆ–ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಯಿ ಸ್ಥಿತಿ ಗಂಭೀರವಾಗಿದೆ. ಆಲೂರು ತಾಲ್ಲೂಕಿನ ಎನ್.ಎಚ್.ಪುರದ ಕುಮಾರ್ (38) ಕಾವ್ಯಾ(12) ಮೃತಪಟ್ಟಿದ್ದಾರೆ. ಪುಟ್ಟಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ ಪತ್ನಿ ಪುಟ್ಟಮ್ಮ ಮಗಳು ಕಾವ್ಯ ಜೊತೆ ಕುಮಾರ್ ಅವರು ಹಾಸನಾಂಬೆ ದೇವಿ ದರ್ಶನಕ್ಕೆ ಹೋಗಿದ್ದರು. ದೇವಿ ದರ್ಶನ ಪಡೆದು ವಿಜಯನಗರದಲ್ಲಿರುವ ಸಂಬಂಧಿಕರ ಮನೆಗೆ ಮೂವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ವೇಳೆ ವೇಗವಾಗಿ ಬಂದ ಕಾರೊಂದು ಮೂವರಿಗೂ ಡಿಕ್ಕಿ ಹೊಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.