ಬೇಲೂರು: ರಸ್ತೆಗಳಿಗೆ ಗೋವುಗಳನ್ನು ಬಿಡುವ ಮಾಲೀಕರಿಗೆ ದಂಡ ವಿಧಿಸಿ, ಗೋವುಗಳನ್ನು ಗೋ ಶಾಲೆಗೆ ಕಳುಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಎಚ್ಚರಿಸಿದರು.

ಪಟ್ಟಣದ ರಸ್ತೆಗಳಲ್ಲಿಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದ ಗೋವುಗಳನ್ನು ಮಂಗಳವಾರ ವಶಕ್ಕೆ ಪಡೆದು ಅವರು ಮಾತನಾಡಿದರು.

ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿಯಿದ್ದು, ವಾಹನ ಸವಾರರು ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಿಢೀರ್ ಕಾರ್ಯಚರಣೆ ನಡೆಸಲಾಗುತ್ತಿದೆ. ಗೋವುಗಳನ್ನು ವಶಕ್ಕೆ ಪಡೆದು ಪುರಸಭೆ ಅವರಣದಲ್ಲಿ ಅವುಗಳಿಗೆ ಮೇವು ಹಾಕಲಾಗಿದೆ. ಮಾಲೀಕರಿಗೆ ದಂಡ ವಿಧಿಸಲಾಗುವುದು. ಗೋವುಗಳನ್ನು ಮತ್ತೆ ರಸ್ತೆಗೆ ಬಿಟ್ಟರೆ ಅವುಗಳನ್ನು ವಶಕ್ಕೆ ಪಡೆದು ಗೋ ಶಾಲೆಗೆ ಬಿಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಲೋಹಿತ್, ನೀರು ಸರಬರಾಜು ಯೋಜನೆಯ ಅಧಿಕಾರಿ ಬಿ.ಎನ್. ಆದಿನಾರಾಯಣ್ ಹಾಗೂ ಪೌರಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.