ನುಗ್ಗೇಹಳ್ಳಿ: ಭಗವದ್ಗೀತೆಯನ್ನು ಪ್ರತಿಯೊಬ್ಬರು ಓದುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯಲಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.

ಗ್ರಾಮದ ಯಾದವ ಸಂಘದ ವತಿಯಿಂದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಮುಂಭಾಗ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೋಬಳಿ ಕೇಂದ್ರದ ಯಾದವ ಸಮದಾಯದವರು ವತಿಯಿಂದ ಈ ವರ್ಷವೂ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭಗವದ್ಗೀತೆಯ ಸಂದೇಶಕ್ಕೆ ಭಾರತವಲ್ಲದೆ ಇಡೀ ವಿಶ್ವವೇ ತಲೆಬಾಗಿದೆ. ಗೀತೆ ಓದುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಜೊತೆಗೆ ಧರ್ಮ ಅಧರ್ಮ ಬಗ್ಗೆಯೂ ತಿಳಿಯಬಹುದು. ಪೋಷಕರು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಭಗವದ್ಗೀತೆ ಓದುವಂತೆ ಉತ್ತೇಜಿಸಬೇಕೆಂದು ತಿಳಿಸಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಶಾಲೆಯ ಮಕ್ಕಳು ಹಾಗೂ ಅನೇಕ ಊರುಗಳಿಂದ ಶ್ರೀ ಕೃಷ್ಣ ರುಕ್ಮಿಣಿ ವೇಷಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವೇಷಧಾರಿ ಮಕ್ಕಳ ಮೆರವಣಿಗೆ ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುರಾಣ ಪ್ರಸಿದ್ಧ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿರುವ ಚನ್ನಕೇಶವ ಸ್ವಾಮಿ ಹಾಗೂ ಗೋಪಾಲಸ್ವಾಮಿ ದೇವರುಗಳಿಗೆ ಬೆಳಿಗ್ಗೆಯಿಂದಲೇ ಅಭಿಷೇಕ ಪೂಜೆ ಹೂವಿನ ಅಲಂಕಾರ ಮಹಾಮಂಗಳಾರತಿ ನಡೆಯಿತು. ಸಂಪ್ರದಾಯದಂತೆ ದೇವರ ಹಾಲು ಬೆಣ್ಣೆ ಉತ್ಸವ ಜರುಗಿತು.

ಕಾಂಗ್ರೆಸ್ ತಾಲ್ಲೂಕು ಘಟಕದ ಪ್ರಮುಖರಾದ ಗೀತಾ ಗೋಪಾಲಸ್ವಾಮಿ, ಪ್ರಮುಖರಾದ ಉಪಾಧ್ಯಕ್ಷ ಎಚ್. ಎಂ. ನಟರಾಜ್, ಸಮಾಜದ ನಿವೃತ್ತ ಅಧಿಕಾರಿಗಳಾದ ರಾಜಗೋಪಾಲ್, ರಾಜಗೋಪಾಲ್, ಸಮಾಜದ ಪ್ರಮುಖರಾದ ಎಚ್ಎನ್ ಗೋಪಾಲ್, ಗೋಕುಲ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ನಾರಾಯಣಪ್ಪ, ನಾಗರಾಜ್ , ಪಾಪಣ್ಣ, ಎಚ್ ಎಂ ಜಯರಾಮ್, ತರಕಾರಿ ಕುಮಾರ್, ಪುಟ್ಟರಾಮೇಗೌಡ, ಪೋಲಿಸ್ ನಾರಾಯಣಗೌಡ, ಡೈರಿ ಗೋಪಿ, ಹೊನ್ನೇಗೌಡ, ಗಿರಿಜಾ ಚಂದ್ರು ಯಾದವ್, ಕಲಾ ನಾಥ್, ರಮೇಶ್, ನಟರಾಜ್, ಗೋಪಾಲ್, ಎನ್ಬಿ ರಾಜಣ್ಣ, ಗಂಗಣ್ಣ, ಹೋಟೆಲ್ ರಾಜಣ್ಣ, ಶಂಕರೇಗೌಡ, ಕುಮಾರ ಗೊಲ್ಲ, ವಿರುಪಾಕ್ಷಪುರ ಚಂದ್ರಣ್ಣ, ಮುಖಂಡರುಗಳಾದ ತೋಟಿ ನಾಗರಾಜ್, ದೊರೆಸ್ವಾಮಿ, ಪುಟ್ಟಸ್ವಾಮಿ, ಎನ್ಎಸ್ ಮಂಜುನಾಥ್, ಯಲ್ಲಪ್ಪ, ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.