ಸಕಲೇಶಪುರ: ಕೇವಲ 2 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಗೊಳಿಸದೆ ನಿರ್ಲಕ್ಷಿಸಿರುವ ಪರಿಣಾಮ ಹತ್ತಾರು ಗ್ರಾಮಗಳ ಜನರು, ಹೊರ ಊರುಗಳಿಗೆ ಹಾಗೂ ತೋಟ, ಗದ್ದೆಗಳಿಗೆ ಹೋಗಿಬರಲು ಸಮಸ್ಯೆ ಎದುರಿಸುವಂತಾಗಿದೆ.

ತಾಲ್ಲೂಕಿನ ಕುರುಬತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚಲಪುರ–ದೊಡ್ಡನಹಳ್ಳಿ ಮಧ್ಯೆಯೇ ರಸ್ತೆಯೇ ಇಲ್ಲದಂತಾಗಿದ್ದು, ಓಡಾಡುವುದು ದುಸ್ತರವಾಗಿದೆ.

ಈಚಲಪುರದಿಂದ ಬಸವಣ್ಣ ದೇವಸ್ಥಾನ ಮಾರ್ಗವಾಗಿ ಕೆನಗನಹಳ್ಳಿ, ದೊಡ್ಡನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 2 ಕಿ.ಮೀ. ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ, ಭತ್ತದ ಸಸಿ ನಾಟಿ ಮಾಡಲು ಸಿದ್ಧಪಡಿಸಿದ ಗದ್ದೆಯಂತಾಗಿದೆ ರಸ್ತೆಯ ಸ್ಥಿತಿ.

ಕಾಲಿಟ್ಟರೆ ಮಂಡಿಯುದ್ದ ಹೂತುಕೊಳ್ಳುತ್ತದೆ. ನಾಲ್ಕು ಚಕ್ರದ ಜೀಪುಗಳು, ಟ್ರಾಕ್ಟರ್‌ಗಳನ್ನೂ ಜೋಪಾನವಾಗಿ ಓಡಿಸಬೇಕಾಗಿದೆ. ಇನ್ನು ದ್ವಿಚಕ್ರ ವಾಹನ ಇಲ್ಲಿ ಓಡಿಸಲು ಸಾಧ್ಯವೇ ಇಲ್ಲ. ಮಳೆ ನೀರು ಹಾಗೂ ಮಣ್ಣು ರಸ್ತೆಯ ತುಂಬಾ ತುಂಬಿಕೊಂಡಿದ್ದು, ಎಲ್ಲಿ ಆಳವಾದ ಗುಂಡಿಗಳಿವೆ ಎಂಬುದೇ ಗೊತ್ತಾಗದ ಸ್ಥಿತಿ ಇದೆ. ನಡೆದು ಹೋಗುವುದಕ್ಕೂ ಸಮಸ್ಯೆ ಆಗಿದೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಳ್ಳುತ್ತಾರೆ.

ಈಚಲಪುರ, ಶೆಟ್ಟಿಹಳ್ಳಿ, ಕೆನಗನಹಳ್ಳಿ ದೊಡ್ಡನಹಳ್ಳಿ ಸುತ್ತಲಿನ ಹತ್ತಾರು ಗ್ರಾಮಗಳ ಜನರು, ಇದೇ ರಸ್ತೆ ಮೂಲಕ ತಮ್ಮ ಮನೆಗಳಿಗೆ ಹಾಗೂ ಭತ್ತದ ಗದ್ದೆ ಹಾಗೂ ತೋಟಗಳಿಗೆ ಹೋಗಬೇಕು. ಈ ರಸ್ತೆಯನ್ನು ದುರಸ್ತಿ ಮಾಡಿ, ಕಾಂಕ್ರೀಟ್ ರಸ್ತೆ ಮಾಡಿಕೊಡುವಂತೆ ದಶಕದಿಂದಲೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ, ಇದುವರೆಗೂ ಯಾರೊಬ್ಬರೂ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಗ್ರಾಮದ ಜನರು ದೂರುತ್ತಿದ್ದಾರೆ.

‘ಜುಲೈ 12ರಂದು ಸಕಲೇಶಪುರದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿಯೂ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗೆ ಖುದ್ದು ಲಿಖಿತ ಹಾಗೂ ಮೌಖಿಕವಾಗಿ ತಿಳಿಸಲಾಗಿತ್ತು. ಸಭೆ ಮುಗಿದು ಒಂದೂವರೆ ತಿಂಗಳು ಕಳೆದರೂ ಗ್ರಾಮ ಪಂಚಾಯಿತಿಯಾಗಲಿ, ಜಿಲ್ಲಾ ಪಂಚಾಯಿತಿಯಿಂದಾಗಲಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ರಸ್ತೆ ಸಮಸ್ಯೆ ಪರಿಶೀಲಿಸುವುದಕ್ಕೂ ಸ್ಥಳಕ್ಕೆ ಬಂದಿಲ್ಲ. ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಕಡತ ಸಹ ವಿಲೇವಾರಿ ಆಗಿಲ್ಲ’ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಎಚ್.ಪಿ. ಬೋಗರಾಜ್ ಆಚಾರ್ ಹೇಳುತ್ತಾರೆ.ಎಚ್.ಕೆ. ಕುಮಾರಸ್ವಾಮಿ ಶಾಸಕರಾಗಿದ್ದಾಗ ಹಣ ಬಿಡುಗಡೆ ಆಗಿದ್ದರೂ ಕೆಲಸ ಆಗಲಿಲ್ಲ. ಶಾಸಕ ಸಿಮೆಂಟ್ ಮಂಜು ಗಮನಕ್ಕೂ ತಂದಿದ್ದೇವೆ ಹಾಲಪ್ಪ ಈಚಲಪುರ ಗ್ರಾಮ ನಿವಾಸಿ

ಈಚಲಪುರ–ದೊಡ್ಡನಹಳ್ಳಿ ಮಧ್ಯೆ ಸಮಸ್ಯೆ ಆಳವಾದ ಗುಂಡಿಗಳಿಂದ ಸಂಚಾರಕ್ಕೆ ತೊಂದರೆ

ನಿರಂತರ ಮಳೆ ಸುರಿಯುತ್ತಿದ್ದು ವಿದ್ಯಾರ್ಥಿಗಳು ಗರ್ಭಿಣಿಯರು ವೃದ್ಧರು ರೋಗಿಗಳಿಗೆ ಭಾರೀ ಸಮಸ್ಯೆ ಉಂಟಾಗಿದೆ
ಸುಬ್ರಹ್ಮಣ್ಯ ಈಚಲಪುರ ನಿವಾಸಿ

ಎಚ್.ಕೆ. ಕುಮಾರಸ್ವಾಮಿ ಶಾಸಕರಾಗಿದ್ದಾಗ ಹಣ ಬಿಡುಗಡೆ ಆಗಿದ್ದರೂ ಕೆಲಸ ಆಗಲಿಲ್ಲ. ಶಾಸಕ ಸಿಮೆಂಟ್ ಮಂಜು ಗಮನಕ್ಕೂ ತಂದಿದ್ದೇವೆ
ಹಾಲಪ್ಪ ಈಚಲಪುರ ಗ್ರಾಮ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.