ಹಾಸನ: ರಂಗಸಂಗೀತ ಯುವಪೀಳಿಗೆಗೆ ಪ್ರಭಾವಶಾಲಿಯಾಗಿ ತಲುಪಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಭೀಮಸೇನ ಅಭಿಪ್ರಾಯಪಟ್ಟರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟಕ ಅಕಾಡೆಮಿ ಮತ್ತು ಶ್ರೀ ವೀರಭದ್ರೇಶ್ವರ ಕಲಾಸಂಘ ಆಶ್ರಯದಲ್ಲಿ ಆಯೋಜಿಸಿದ್ದ ‘ರಂಗ ಸಂಗೀತ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ರಂಗ ಸಂಗೀತ ವಿದ್ವತ್ ಪೂರ್ಣವಾದುದು, ಅಪ್ಪಟ ಸಂಗೀತ ಜ್ಞಾನದಿಂದ ಕೂಡಿದೆ. ಜನಪ್ರಿಯತೆಗಾಗಿ ನಾಟಕಗಳಲ್ಲಿ ಸಿನಿಮಾ ಸಂಗೀತ ಅಳವಡಿಸಿಕೊಳ್ಳುವುದಕ್ಕಿಂತ ತನ್ನದೇ ಶೈಲಿ ಹೊಂದಿರುವ ರಂಗ ಸಂಗೀತ ಬಳಸಿಕೊಳ್ಳುವುದು ಅತಿ ಮುಖ್ಯ. ಕಿರಗಸೂರು ರಾಜಪ್ಪ ಅವರನ್ನು ತರಬೇತುದಾರರನ್ನಾಗಿ ನೇಮಿಸಿದ್ದು, ಅವರಿಂದ ಯುವಜನತೆ ಕಲಿಯಬೇಕಾಗಿದೆ’ ಎಂದು ಹೇಳಿದರು.

ಶ್ರೀ ವೀರಭದ್ರೇಶ್ವರ ಕಲಾ ಸಂಘದ ಅಧ್ಯಕ್ಷ ಯಲಗುಂದ ಶಾಂತಕುಮಾರ್ ಮಾತನಾಡಿ, ಸಾಮಾಜಿಕ, ಪೌರಾಣಿಕ, ಹವ್ಯಾಸಿ ನಾಟಕಗಳಾಗಿರಲಿ ಅದರದೇ ಆದ ಸಂಗೀತ ಪರಂಪರೆ ರೂಢಿಸಿಕೊಂಡಿರುವುದನ್ನು ಗೌರವಿಸಬೇಕು ಎಂದರು ಹೇಳಿದರು.

ಅಕಾಡೆಮಿಯ ಸಂಚಾಲಕ ಸದಸ್ಯ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಮಾತನಾಡಿದರು. ಸಮಾರಂಭದಲ್ಲಿ ತರಬೇತುದಾರ ಕಿರಗಸೂರು ರಾಜಪ್ಪ, ಅಕಾಡೆಮಿ ಸದಸ್ಯ ಬಿಸಲೇಹಳ್ಳಿ ಸೋಮಶೇಖರ್ ಅವರನ್ನು ಅಭಿನಂದಿಸಲಾಯಿತು. ಕೃಷ್ಣೇಗೌಡ, ನೇತ್ರಾವತಿ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಿಂದ ಕಲಿತ ರಂಗಗೀತೆಗಳ ಗಾಯನ ನೆರವೇರಿತು.

ಸಾಮಾಜಿಕ ಕಾರ್ಯಕರ್ತ ಡಾ.ಬಿ.ಎನ್.ಮಹಾಂತೇಶ್, ಡಾ.ಎಚ್.ಎನ್. ವಿಜಯ ಕುಮಾರ್, ರಂಗಭೂಮಿ ಕಲಾವಿದರಾದ ಬೇಲೂರಿನ ವೈ.ಆರ್.ಮಹೇಶ್, ಅರಕಲಗೂಡಿನ ರಾಜೇಗೌಡ, ಚನ್ನರಾಯಪಟ್ಟಣದ ನಂಜುಂಡೇಗೌಡ, ರಂಗ ನಿರ್ದೇಶಕ ಎಚ್.ಎಲ್. ಫಾಲಾಕ್ಷಾಚಾರ್ ಸೀಗೇನಾಡು, ಎ.ಸಿ ರಾಜು ಮತ್ತು
ರಂಗಪ್ಪದಾಸ್, ಗಂಜಲಗೂಡು ಗೋಪಾಲಗೌಡ ಇದ್ದರು.

ರಾಣಿ ಸ್ವಾಗತಿಸಿದರು. ಯಲಗುಂದ ಶಾಂತಕುಮಾರ್ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.