ಹತ್ತಿ ಜೊತೆ ಸೊಂಪಾಗಿ ಬೆಳೆದ ಕಳೆ
ಭೂಮಿ ಹದವಾಗಿರುವುದರಿಂದ ಶರವೇಗದಲ್ಲಿ ಬೆಳೆಯುತ್ತಿರುವ ಕಳೆ ಹತ್ತಿ ಬೆಳೆಗಿಂತ ಎತ್ತರ ಬೆಳೆಯುತ್ತಿದೆ. ಕಳೆ ನಿಯಂತ್ರಣ ರೈತರಿಗೆ ಸವಾಲಾಗಿದೆ. ಕುಂಟೆ ಹೊಡೆಯಲು ಮಳೆ ಬಿಡುವು ಕೊಡುತ್ತಿಲ್ಲ. ಕುಂಟೆ ಹೊಡೆದಾಗ ಕಳೆ ಹೊರ ಬರುತ್ತದೆ. ಗಿಡಗಳ ಬುಡಕ್ಕೆ ಮಣ್ಣು ದೊರಕುತ್ತದೆ. ಗುಂಟೆ ಲೆಕ್ಕದಲ್ಲಿ ಹತ್ತಿ ಬೆಳೆದವರು ಕುಡುಗೋಲಿನಿಂದ ಕಳೆ ತೆಗೆಯಬಹುದು. ಎಕರೆಗಟ್ಟಲೆ ಹತ್ತಿ ಬೆಳೆದವರು ಕೈಕೆಲಸದಲ್ಲಿ ಕಳೆ ತೆಗೆಯುವುದು ಸುಲಭ ಸಾಧ್ಯವಾಗಿಲ್ಲ ಎಂದು ರೈತ ಮಲ್ಲಾಪುರ ರವಿ ಎಂ.ಬಿ. ತಿಳಿಸಿದರು